ಕಲಬುರಗಿ| ಹಿರಾಪೂರ ಸರ್ಕಲ್‌ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ; 750ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

Date:

ಕಲಬುರಗಿ: ನಗರದ ಹಿರಾಪೂರ ಸರ್ಕಲ್‌ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸ್ಲಂ ಜನರ ಸಂಘಟನೆ ಕರ್ನಾಟಕ, ಕಲಬುರಗಿ, ಪ್ರಜ್ಞಾ ಯುವಕ ಸಂಘ ಹಿರಾಪೂರ ಹಾಗೂ ಡಾ. ಅಂಬೇಡ್ಕರ್ ಅರಿವು ಉತ್ಸವ ಸಮಿತಿ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಅಂಧತ್ವ ನಿಯಂತ್ರಣ ಅಧಿಕಾರಿ ಡಾ. ರವಿಕಾಂತಿ ಎಸ್. ಕ್ಯಾತ್ನಾಳ, ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ‍್ಯ, ನ್ಯಾಯ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ನೀಡಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಮೇಶ್ ಪಟ್ಟೇದಾರ, ಹನುಮಂತ ಇಟಗಿ, ಡಾ. ಅನಿಲ್ ಟೆಂಗಳಿ, ಸಂತೋಷ್ ಮೇಲ್ಮನಿ, ಜಗದೀಶ್ ಪಾಟೀಲ್, ಅಲ್ಲಂಪ್ರಭು ನಿಂಬರ್ಗಾ, ಬ್ರಹ್ಮಾನಂದ ಮಿಂಚ, ಸಂತೋಷ್ ದಾಡಿ, ಅಮರೇಶ್ ಇಟಗಿಕರ್, ಮಲ್ಲಿಕಾರ್ಜುನ ಶಿಂಗೆ, ಸಂತೋಷ್ ನೂಲ, ಎಸ್.ಎನ್. ಕುಂಬಾರ್, ಲಿಂಗರಾಜ, ಬಸವರಾಜ ಹೂಗಾರ್, ಲಿಂಗರಾಜ ಪಾಟೀಲ್, ಚಾಂದ್ ಪಾಷಾ, ಧರ್ಮಣ್ಣ ಜೈನಾಪುರ ಸೇರಿದಂತೆ ಹಲವು ಗಣ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.

 

ಹಿರಾಪೂರ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಗುರುಗಳು, ಶಿಕ್ಷಕರು ಮತ್ತು ಸುಮಾರು 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ವಾಚಿಸಿದರು.

ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವದ ಆಶಯಗಳು ಹಾಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ಕಾಂಗ್ರೆಸ್ ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ: ರಾಜನಾಥ್ ಸಿಂಗ್ ಕಿಡಿ

ಕಲಬುರಗಿ: ಕಾಂಗ್ರೆಸ್ ಪಕ್ಷ ಅರಾಜಕತೆ ಸೃಷ್ಟಿಸುವ ಮೂಲಕ ಅಧಿಕಾರಕ್ಕೆ ಮರಳುವ ಪ್ರಯತ್ನ...

ಕಲಬುರಗಿ| 5 ಕೋಟಿ ರೂ.ವೆಚ್ಚದ ಮಾಡಿಯಾಳ-ದೇವಂತಗಿ ರಸ್ತೆ ಕಾಮಗಾರಿಗೆ ಶಾಸಕ ಬಿ.ಆರ್.ಪಾಟೀಲ್ ಚಾಲನೆ

ಕಲಬುರಗಿ: ಸಾರ್ವಜನಿಕ ಕೇಲಸ ನಿರ್ಮಾಣ ಮಾಡುವಾಗ ಯಾವುದೇ ಗುತ್ತಿಗೇದಾರರು ಜನಹಿತ ಗಮನದಲಿರಿಸಿ...

ಕಲಬುರಗಿ| ಶರಣಬಸವ ವಿವಿ ಕ್ರೀಡಾಕೂಟ: ಸೋಮೇಶ್ವರ, ರಮ್ಯಾ ಅತ್ಯಂತ ವೇಗದ ಓಟಗಾರರು

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ನಾಲ್ಕು ದಿನಗಳ ವಾರ್ಷಿಕ ಕ್ರೀಡಾಕೂಟದ 100 ಮೀಟರ್...

ಕಲಬುರಗಿ| ಚಿಂಚೋಳಿ‌ ಭಾಗದ ಕಬ್ಬು ನುರಿಸಲು ಎನ್.ಎಸ್.ಎಲ್, ರೇಣುಕಾ‌ ಶುಗರ್ಸ್, ಕೆ.ಪಿ.ಆರ್ ಕಾರ್ಖಾನೆಗೆ ಹಂಚಿಕೆ ಮಾಡಿ ಡಿ.ಸಿ. ಆದೇಶ

ಕಲಬುರಗಿ: ಜಿಲ್ಲೆಯ ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ 2026-27ನೇ ಸಾಲಿಗೆ...