ಕಲಬುರಗಿ: ಸಾರ್ವಜನಿಕ ಕೇಲಸ ನಿರ್ಮಾಣ ಮಾಡುವಾಗ ಯಾವುದೇ ಗುತ್ತಿಗೇದಾರರು ಜನಹಿತ ಗಮನದಲಿರಿಸಿ ಗುಣಮಟ್ಟದ ರಸ್ತೆಯನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ತಾಕೀತು ಮಾಡಿದರು.
ಔರಾದ – ಸದಾಶಿವಗಡ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ದೇವಂತಗಿ ಮಾಡಿಯಾಳ ಮಧ್ಯದ ಅಪೆಂಡಿಕ್ಸ್ ಯೋಜನೆ ಅಡಿಯಲ್ಲಿ ಮಂಜೂರಾದ ಸುಮಾರು 5 ಕೋಟಿ ರೂ. ವೆಚ್ಚದರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಗುರುವಾರ ನೆರವೇರಿಸಿ ಮಾತನಾಡಿದರು.
ಈಗಾಗಲೇ ನಿಂಬರ್ಗಾ ಮಾಡಿಯಾಳ, ಮತ್ತು ಜಾವಳಿ ಡಿ, ಬೆಣ್ಣಿಶಿರೂರ ಕುಲಾಲಿ, ನಿಂಬಾಳ ಯಳಸಂಗಿ ರಸ್ತೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂಬರುವ ದಿನಗಳಲ್ಲಿ ಜನರಿಗೆ ಒಳ್ಳೆಯ ರಸ್ತೆಗಳನ್ನು ನಿರ್ಮಿಸುವ ಮೂಲಕ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಹೇಳಿದರು.
ಮಾಜಿ ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಸಂಜಯ ಪಾಟೀಲ್, ಕಲ್ಮೇಶ ಪಾಟೀಲ್, ಎಇಇ ಹೋನ್ನೇಶ ಅಳ್ಳಗಿ, ಜಿಇ ಅಣ್ಣಾರಾವ ಪಾಟೀಲ್, ಗುತ್ತಿಗೆದಾರ ಮತ್ತಿನ ಪಟೇಲ್, ಮಾದನಹಿಪ್ಪರಗಾ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನು ಬಿರಾದಾರ, ಸುಭಾಷ ಪಾಟೀಲ್, ರೇವಣಸಿದ್ದಪ್ಪ ಶ್ರೀಗಣಿ, ಶರಣಬಸಪ್ಪ ಕಲಶೇಟ್ಟಿ, ಬಸವರಾಜ ಕೌಲಗಿ,ರಮೇಶ ಕಲಶೇಟ್ಟಿ, ಶಿವಾಯೋಗಿ ಕೌಲಗಿ, ಹಣಮಂತ ನಡಗೇರಿ, ಸೈಪನಶೇಕ್, ಸಿದ್ದರಾಮ ಶಿರೋಳ, ಭವಾನರಾಯ ಕೌಲಗಿ, ಸಂಗಣ್ಣ ದುದ್ದಗಿ, ಧರ್ಮರಾಜ ಮಾಶಾಳಕರ್ ಇರರು ಭಾಗವಹಿಸಿದರು.
ಇದೆ ಸಂದರ್ಭದಲ್ಲಿ ನಿಂಬರ್ಗಾದಲ್ಲಿ ೭೦ ಲಕ್ಷ ವೆಚ್ಚದ ತೆರೆದ ಬಾವಿ ಕಾಮಗಾರಿ, ಬಟ್ಟರಗಾ ಗ್ರಾಮದಲ್ಲಿ 68 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ 4 ಕೋಣೆಗಳ ಉದ್ಘಾಟನೆ ಮತ್ತು ಬಮ್ಮನಳ್ಳಿ ನಿರ್ಮಿಸಲಾದ 68 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ೪ಕೋಣೆಗಳನ್ನು ಉದ್ಘಾಟಿಸಿದರು.


