ಕಲಬುರಗಿ| 4 ಮಕ್ಕಳಿಗೆ ಹುಚ್ಚಿನಾಯಿ ಕಡಿತ; ಲಾಡ್ಲಾಪುರದಲ್ಲಿ ಹೆಚ್ಚಿದ ಆತಂಕ

Date:

Share post:

ಕಲಬುರಗಿ: ಲಾಡ್ಲಾಪುರ ಗ್ರಾಮದಲ್ಲಿ ಬೀದಿ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಮೇಲೆ ಎರಗಿ ಕಚ್ಚಿ ಗಾಯಗೊಳಿಸುತ್ತಿವೆ. ಇದು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.  ಸೋಮವಾರ ಸಂಜೆ ಶಾಲೆಯಿಂದ ಮರಳಿ ಬರುವಾಗ ಚಿಕ್ಕ ಮಕ್ಕಳ ಮೇಲೆ ಹುಚ್ಚುನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವುದು ವಾಡಿಯಲ್ಲಿ ವರದಿಯಾಗಿದೆ.

ಬಸ್ ಸ್ಟಾಂಡ್ ಏರಿಯಾದಲ್ಲಿ ಹಿಂಡು ಹಿಂಡಾಗಿ ನಾಯಿಗಳು ತಿರುಗುತ್ತಿದ್ದು ಅದರಲ್ಲಿ ಹುಚ್ಚುನಾಯಿಗಳು ಸೇರಿಕೊಂಡಿದ್ದು, ಮಕ್ಕಳ ಮೇಲೆ ದಾಳಿ ಮಾಡುತ್ತಿವೆ.

ಸೋಮವಾರ 4 ಜನ ಶಾಲಾ ಬಾಲಕಿಯರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ ಕೈ ಕಾಲು ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ. ಸಿಟ್ಟಿಗೆದ್ದ ಗ್ರಾಮಸ್ಥರು ನಾಯಿಯನ್ನು ಹಿಡಿದು ಸಾಯಿಸಲು ಓಡಾಡಿದ್ದು ಕೈಗೆ ಸಿಗದೇ ಪರಾರಿಯಾಗಿದೆ.

ಲಾವಣ್ಯ, ದಿವ್ಯಾ, ಅನಬಿಯ ಎಂಬ ಬಾಲಕಿಯರ ಕೈ, ತೋಳು, ಮುಖ ಮತ್ತು ಬೆನ್ನಿಗೆ ಕಚ್ಚಿ ಗಂಭೀರ ಗಾಯಗೊಳಿಸಿವೆ. ಗಾಯಗೊಂಡ ಬಾಲಕಿಯರನ್ನು ಪೋಷಕರು ಅಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ಮರಳಿದ್ದಾರೆ.

ಕಳೆದ ತಿಂಗಳು ಸ್ಥಳೀಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ಶಾಲಾ ಬಾಲಕಿಗೆ ನಾಯಿ ಕಚ್ಚಿದ್ದರಿಂದ ತಿಂಗಳುಗಟ್ಟಲೇ ಶಾಲೆ ತೊರೆದು ಚಿಕಿತ್ಸೆಗಾಗಿ ಅಲೆಯಲಾಗಿತ್ತು.

ಈಚೆಗೆ ಬೇರೆ ಕಡೆಯಿಂದ ಬಂದಿರುವ ನಾಯಿಗಳು ಲಾಡ್ಲಾಪುರ ಗ್ರಾಮ ಹೊಕ್ಕಿವೆ. ಅದರಲ್ಲಿ ಕೆಲ ನಾಯಿಗಳಿಗೆ ಹುಚ್ಚುರೋಗ ತಗುಲಿದ್ದು ಗ್ರಾಮಸ್ಥರು ಭಯದಲ್ಲೇ ತಿರುಗುವಂತಾಗಿದೆ. ನಾಯಿಗಳು ಕಚ್ಚಲು ಬೈಕ್ ಮತ್ತಿತರರು ವಾಹನಗಳ ಬೆನ್ನಟ್ಟುತ್ತಿದ್ದು, ಬೈಕ್ ಸವಾರರು ನೆಲಕ್ಕುರುಳಿದ ಘಟನೆಗಳು ಜರುಗಿವೆ.

Share post:

spot_imgspot_img

Popular

More like this
Related

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮಕ್ಕಾಗಿ ಮುಖ್ಯಮಂತ್ರಿಗಳಿಂದ ಕಾಫಿ ಟೇಬಲ್ ಪುಸ್ತಕ, ಬ್ರೋಶರ್ ಬಿಡುಗಡೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು...

ಕಲಬುರಗಿ| ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ,ಹೆಚ್ಚು ಅಂಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿ: ಭಂವರ್ ಸಿಂಗ್ ಮೀನಾ

ಕಲಬುರಗಿ: ಪ್ರಸಕ್ತ 2025-26ನೇ ಶೈಕ್ಷಣಿಕ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18...

ಕಲಬುರಗಿ| ಸೆಂಟ್ರಲ್ ಜೈಲಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಕಡಗಂಚಿ ಕಾರ್ಮೇಲ್ ಜ್ಯೋತಿ ಪಬ್ಲಿಕ್...

ಕಲಬುರಗಿ| ಎಸ್ಸೆಸ್ಸೆಲ್ಸಿ ಪರೀಕ್ಷೆ: ಒತ್ತಡ ಬಿಟ್ಟು ಸಂತೋಷದಿಂದ ಪರೀಕ್ಷೆ ಬರೆಯುವಂತೆ ಜಿಲ್ಲಾಧಿಕಾರಿ ಪತ್ರ

ಕಲಬುರಗಿ: ಪ್ರಸಕ್ತ 2025-26ನೇ ಶೈಕ್ಷಣಿಕ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18...