ಕಲಬುರಗಿ| ಎಸ್ಸೆಸ್ಸೆಲ್ಸಿ ಪರೀಕ್ಷೆ: ಒತ್ತಡ ಬಿಟ್ಟು ಸಂತೋಷದಿಂದ ಪರೀಕ್ಷೆ ಬರೆಯುವಂತೆ ಜಿಲ್ಲಾಧಿಕಾರಿ ಪತ್ರ

Date:

Share post:

ಕಲಬುರಗಿ: ಪ್ರಸಕ್ತ 2025-26ನೇ ಶೈಕ್ಷಣಿಕ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18 ರಿಂದ ಏಪ್ರಿಲ್ 2ರ ವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಜರುಗಲಿದ್ದು, ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಸಂತೋಷದಿಂದ ಪರೀಕ್ಷೆ ಬರೆಯುವಂತೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಎಸ್.ಎಸ್.ಎಲ್.ಸಿ ಬರೆಯಲು ಸಜ್ಜಾಗಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಹಿರಂಗ ಪತ್ರ ಬರೆದು ಶುಭ ಕೋರಿರುವ ಜಿಲ್ಲಾಧಿಕಾರಿಗಳು, ಈಗಾಗಲೇ ಮೂರು ಬಾರಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆದು ಪ್ರಾಯೋಗಿಕ ಅನುಭವ ಪಡೆದಿದ್ದೀರಿ. ಹೀಗಾಗಿ ಮುಖ್ಯ ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಖುಷಿಯಿಂದ ಪರೀಕ್ಷೆ ಬರೆಯಬೇಕು. ಈ ವಾರ್ಷಿಕ ಪರೀಕ್ಷೆಯು ನಿಮ್ಮ ಬಾಳಿನಲ್ಲಿ ಮಹತ್ವದ್ದಾಗಿದ್ದು, ನಿಮ್ಮ ಉನ್ನತ ಫಲಿತಾಂಶ ಪಡೆದು ಅಭಿನಂದನೆಗೆ ಅರ್ಹರಾಗುವುದನ್ನೆ ನಾವು ಆಶಿಸುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಪರೀಕ್ಷಾ ಮಂಡಳಿಯೂ ನಿಮಗೆ ಮಾದರಿ ಪ್ರಶ್ನೆ ಪರೀಕ್ಷೆ, ಪಠ್ಯಾಧಾರಿತ ಪ್ರಶ್ನೆ ಕೋಠೀ, ನೀಲ ನಕಾಶೆ ನೀಡಿ ಪರೀಕ್ಷೆಗೆ ಸಿದ್ಧವಾಗಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಮಕ್ಕಳಿಗಾಗಿ ಶಾಲಾ ಶಿಕ್ಷಣ ಇಲಾಖೆಯು 40+ ಕ್ರಿಯಾ ಯೋಜನೆ ರೂಪಿಸಿ ಅಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ. ಎಲ್ಲಾ ವಿಷಯಗಳ ಮಾರ್ಗದರ್ಶಿ ಸಾಹಿತ್ಯ ಮತ್ತು ಅಭ್ಯಾಸ ಯೋಜನೆಯನ್ನೂ ನೀಡಿದೆ. ಮುಖ್ಯ ಶಿಕ್ಷಕರ ಮೂಲಕ ನಿಮ್ಮ ಫಲಿತಾಂಶವನ್ನೂ ಪಡೆದು ವಿಶ್ಲೇಷಣೆ ಮಾಡಿ ಹೆಚ್ಚಿನ ಫಲಿತಾಂಶ ಸಾಧಿಸಲು ಕ್ರಮವಹಿಸಿದೆ. ಆಕಾಶವಾಣಿ, ಯುಟ್ಯೂಬ್ ಮೂಲಕ ಪರೀಕ್ಷೆ ಕುರಿತು ಸಂದೇಹ, ಭಯ ನಿವಾರಿಸುವ ಅನೇಕ ವಿಚಾರಗಳನ್ನು ಹಂಚಿಕೊಳ್ಳಾಗಿದೆ ಎಂದಿದ್ದಾರೆ.

ವರ್ಷವಿಡೀ ಅಭ್ಯಾಸ ಮಾಡಿದ ನೀವೀಗ ಹೆಚ್ಚು ಆತ್ಮವಿಶ್ವಾಸ ಮತ್ತು ಸಂಯಮ ಸಾಧಿಸಬೇಕು. ಆರೋಗ್ಯ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಂಡು ಪರೀಕ್ಷೆಯನ್ನು ಹಬ್ಬವೆಂದು ಭಾವಿಸಿ ಬರೆಯಬೇಕು. ಅಗತ್ಯ ವಸ್ತುಗಳು, ಪ್ರವೇಶ ಪತ್ರ ತೆಗೆದುಕೊಂಡು ಪ್ರಸನ್ನಚಿತ್ತರಾಗಿ ಅರ್ಧಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು. ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿದ ಬಳಿಕ ಸಮಯವನ್ನು ಸಂಯೋಜಿಸಿಕೊಂಡು ಸ್ಪಷ್ಟ ಮತ್ತು ನಿಖರವಾಗಿ ಉತ್ತರಿಸಿರಿ. ಎಷ್ಟೇ ಓದಿದ್ದಿರೂ ಪರೀಕ್ಷೆಯಲ್ಲಿ ಎಷ್ಟು ಬರೆದಿದ್ದೀರಿ ಮತ್ತು ಹೇಗೆ ಬರೆದಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಪರೀಕ್ಷೆ ಮುಗಿದ ತಕ್ಷಣ ಮುಂದಿನ ವಿಷಯದತ್ತ ಲಕ್ಷವಿರಲಿ. ಏನಾದರೂ ತಪ್ಪುಗಳಾದರೆ ಚಿಂತಿಸಬೇಡಿ, ಆ ತಪ್ಪುಗಳು ಮರುಕಳಿಸಿದಂತೆ ಎಚ್ಚರಿಕೆ ಇರಲಿ, ನಿಮ್ಮ ಏಳ್ಗೆಗೆ ನೀವೇ ಶಿಲ್ಪಿಗಳಾದ್ದರಿಂದ ನಿಮ್ಮ ಸಾಮರ್ಥ್ಯವನ್ನು ನೀವು ಅರಿತು ಮುನ್ನಡೆದರೆ ನಿಮ್ಮ ಬಾಳಿಗೆ ಯಶಸ್ಸು ತರಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪರೀಕ್ಷೆಗೆ ಸಕಲ ಸಿದ್ಧತೆ:

ಕಲಬುರಗಿ ಜಿಲ್ಲೆಯಾದ್ಯಾಂತ 141 ಪರೀಕ್ಷಾ ಕೇಂದ್ರಗಳಲ್ಲಿ ಸಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಕೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 51,744 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ-1 ಬರೆಯಲಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...