ಕಲಬುರಗಿ| ರಾಜ್ಯಪಾಲರ ನಡೆ ಅಸಂವಿಧಾನ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Date:

Share post:

ಕಲಬುರಗಿ: ಭಾಷಣದಲ್ಲಿ ಕೇಂದ್ರದ ವಿರುದ್ದ ಯಾವುದೇ ಅವಹೇಳನಾಕಾರಿ ಮಾತುಗಳಿರಲಿಲ್ಲ. ಅವರು ಭಾಷಣ ಓದದ ನಿರ್ಗಮಿಸಿದ್ದು ಸರಿಯಲ್ಲ. ಅದು ಸಂವಿಧಾನ ವಿರೋಧಿ ನಡೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ರಾಜ್ಯಪಾಲರು ತಾಳ್ಮೆಯಿಂದ ಭಾಷಣ ಓದಿ ನಂತರ ರಾಷ್ಟ್ರಗೀತೆ ಗೆ ಗೌರವ ಸಲ್ಲಿಸಬೇಕಿತ್ತು. ಅವರ ವರ್ತನೆ ಸಂವಿಧಾನಕ್ಕೆ ತಕ್ಕುದಾಗಿರಲಿಲ್ಲ. ಹಾಗಾಗಿ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಆಕ್ಷೇಪಿಸಿದ್ದಾರೆ. ಅವರ ಮೇಲೆ ಕ್ರಮಕ್ಕೆ ಒತ್ತಾಯಿಸುತ್ತಿರುವ ಬಿಜೆಪಿಗರು ರಾಷ್ಟ್ರಗೀತೆ ಗೆ ಗೌರವ ಸಲ್ಲಿಸದ ರಾಜ್ಯಪಾಲರ ಮೇಲೆ ಕ್ರಮಕ್ಕೆ ಯಾಕೆ ಒತ್ತಾಯಿಸುತ್ತಿಲ್ಲ ಎಂದು ಪ್ರಶ್ನಿಸಿದರು.

” ರಾಜ್ಯಪಾಲರ‌ ನಡೆ ಅಸಂವಿಧಾನಿಕ. ನಮ್ಮ ಭಾಷಣಲ್ಲಿ ಅವಹೇಳನಕಾರಿ ಮಾತಿದೆಯಾ,? ಸಿಎಂ ಅವರು ಮೋದಿಗೆ, ನಾನು ಸಿ ಆರ್ ಪಾಟೀಲ್,ಮ ಅವರಿಗೆ ಹಾಗೂ ಶಿವರಾಜ್ ಸಿಂಗ್ ಚವ್ಹಾಣ ಅವರಿಗೆ ಹಾಗೂ ಕೃಷ್ಣ ಭೈರೇಗೌಡರು ಕೇಂದ್ರಕ್ಕೆ ರಾಜ್ಯದ ಬೇಡಿಕೆಗಳ ಬಗ್ಗೆ ಕೊಟ್ಟಿರುವ ಪತ್ರಗಳ ವಿವರ ಇವೆ ಅಷ್ಟೇ” ಎಂದರು.

“ಪಂಚಾಯತಿಗಳಿಗೆ 15 ನೆಯ ಹಣಕಾಸಿನ ಆಯೋಗದ ಅನುದಾನ ಕೇಳುವುದು ತಪ್ಪಾ? ಬಿವಿಜಿ ರಾಮ್ ಜೀ ಅಡಿಯಲ್ಲಿ ರಾಜ್ಯದ ಪಾಲು 40 % ನಿಗದಿ ಪಡಿಸಿದ್ದಾರೆ. ರಾಜ್ಯದ ಅಭಿಪ್ರಾಯ ಕೇಳಿದ್ದಾರ ? ಅದನ್ನು ನಾವು ಪ್ರಶ್ನಿಸುವುದು ತಪ್ಪಾ? ಅದನ್ನು ನಾವು ಜನರಿಗೆ ರಾಜ್ಯಪಾಲರ ಮೂಲಕ ತಿಳಿಸುವುದು ತಪ್ಪಾ? ರಾಜ್ಯಪಾಲರ ನಡೆ ಕೇಂದ್ರದ ನಿರ್ದೇಶನದಂತೆ ಹಾಗೂ ಆರ್ ಎಸ್ ಎಸ್ ನಿರ್ದೇಶನದಂತೆ ನಡೆದಿದೆ. ಬಿಜೆಪಿಗರಿಗೆ ಆರ್ ಎಸ್ ಎಸ್ ನವರಿಗೆ ರಾಷ್ಟ್ರಗೀತೆ ಯ ಮೇಲೆ ಅಭಿಮಾನವಿಲ್ಲ” ಎಂದು ಜರಿದರು.

ನರೇಗಾ ಯೋಜನೆಯನ್ನು ಬಡವರ ಹಾಗೂ ಹಿಂದುಳಿದವರ ಮತ್ತು ದಲಿತರ ಲಕ್ಷಾಂತರ ಕುಟುಂಗಳಿಗೆ ಆಸರೆಯಾದ ಯೋಜನೆಯಾಗಿತ್ತು. ಅದನ್ನು ತೆಗೆದು ಈಗ ವಿಬಿ ಜೀ ರಾಮ್ ಜೀ ಕಾಯ್ದೆ ರೂಪಿಸಿದೆ. ಈ ಕಾಯ್ದೆಯ ವಿರುದ್ದ ರಾಜ್ಯಗಳು ವಿರೋಧ ಮಾಡಿವೆ. ನಮ್ಮ ಸರ್ಕಾರ ಕ್ಯಾಬಿನೆಟ್ ನಲ್ಲಿ ಕಾಯ್ದೆ ವಿರುದ್ದ ಕೋರ್ಟ್ ಗೆ ಹೋಗಲಿ ನಿರ್ಧರಿಸಲಾಗಿದೆ ಎಂದರು.

ಮಹಿಳಾ ಅಧಿಕಾರಿನ್ನು ನಿಂದಿಸಿದ ರಾಜೀವ್ ಗೌಡ ಪ್ರಕರಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜೀವ್ ಗೌಡನನ್ನು ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈಗಾವಲೇ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಮಹಿಳೆಯರಿಗೆ ನಿರಂತರ ಕಿರುಳಕುಳ ಹಾಗೂ ದಲಿತರ ಮೇಲೆ ದೌರ್ಜನ್ಯ ನಡಸಿದ ಆರೋಪ ಎದುರಿಸುತ್ತಿರಿವ ಬಿಜೆಪಿ ನಾಯಕರಿಂದ ನಮ್ಮ ಪಕ್ಷ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

Share post:

spot_imgspot_img

Popular

More like this
Related

ಕಲಬುರಗಿ: ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಲು ರೂ 208.67 ಕೋಟಿ. ಬಿಡುಗಡೆ- ಸಚಿವ ಪ್ರಿಯಾಂಕ್ ಖರ್ಗೆ 

ತುರ್ತು ಕಾಮಗಾರಿಗಳಿಗೆ ಪುನಃ 72 ಕೋಟಿ ರೂ.ಬಿಡುಗಡೆ: ಪ್ರಿಯಾಂಕ್ ಖರ್ಗೆ ಬೆಂಗಳೂರು: ರಾಜ್ಯದ...

ಕಲಬುರಗಿ: ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚರ್ಮ ಕ್ಯಾನ್ಸರ್ ಜಾಗೃತಿ ಶಿಬಿರ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಖ್ವಾಜಾ ಬಂದಾ ನವಾಜ್ ದರ್ಗಾದ 622ನೇ ಅದ್ಧೂರಿ ಸಂದಲ್ ಮೆರವಣಿಗೆ

ಕಲಬುರಗಿ, ಮೇ 3: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರ ಹಾಗೂ...

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...