ಕಲಬುರಗಿ| ಬಸವೇಶ್ವರ ಆಸ್ಪತ್ರೆಯಲ್ಲಿ ಮ್ಯಾಸ್ತೀನಿಯಾ ಗ್ರಾವಿಸ್ ಕ್ರೈಸಿ ರೋಗದಿಂದ ಬಳಲುತ್ತಿರುವ ಮಹಿಳೆಗೆ ಯಶಸ್ವಿ ಚಿಕಿತ್ಸೆ

Date:

Share post:

ಕಲಬುರಗಿ: ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ನಿವಾಸಿ ನಿರ್ಮಲಾ ಎಂಬ 30 ವರ್ಷದ ಹೆಣ್ಣು ಮಗಳು ತೀವ್ರ ಉಸಿರಾಟ ತೊಂದರೆಯಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರಗೆ ದಾಖಲಾದಳು.

ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಅಲ್ಲಿಯ ವೈದ್ಯರು ಚಿಕಿತ್ಸೆ ಆರಂಭಿಸಿದರು. ಅವಳಿಗೆ ವೈದ್ಯಕೀಯ ಚಿಕಿತ್ಸೆಗೆ ಸಂಭಂದಿಸಿದ ಪರೀಕ್ಷೆಗಳನ್ನು ಆರಂಭಿಸಿದಾಗ ಪರೀಕ್ಷೆಯಲ್ಲಿ ಅವಳಿಗೆ ಜೀವಕ್ಕೆ ಅಪಾಯಕಾರಿಯಾದ ಮ್ಯಾಸ್ತೀನಿಯಾ ಗ್ರಾವಿಸ್ ಕ್ರೈಸ ಎಂಬ ರೋಗವಿದೆ ಎಂಬುದು ದೃಢಪಟ್ಟಿತು. ಇದು ಅವಳಲ್ಲಿ ಜೀವಕ್ಕೆ ಅಪಾಯಕಾರಿಯಾದ ಮಟ್ಟ ತಲುಪಿತ್ತು ಇದರಿಂದ ಅವಳಿಗೆ ತೀವ್ರ ಉಸಿರಾಟದ ತೊಂದರೆಯುಂಟಾಗಿ ಜೀವನ್ಮರಣದ ಪರಿಸ್ಥಿತಿ ತಲುಪಿದ್ದಳು. ಕೂಡಲೆ ಆಸ್ಪತ್ರೆಯ ತಜ್ಞ ವೈದ್ಯರು ಅವಳಿಗೆ ವೈದ್ಯಕೀಯ ಚಿಕಿತ್ಸೆ ಆರಂಭಿಸಿ ಅವಳನ್ನು ಐಸಿಯು ನಲ್ಲಿ ದಾಖಲಿಸಿ, ಕಡಿಮೆ ಆಮ್ಲಜನಕದಿಂದ ತೊಂದರೆ ಅನುಭವಿಸುತ್ತಿದ್ದ ಅವಳಿಗೆ ವೆಂಟಿಲೇಟರ್ ಗೆ ಸೇರಿಸಲಾಯಿತು. ನ್ಯೂಮೋನಿಯಾ ದಿಂದ ಬಳಲುತ್ತಿದ್ದ ಅವಳಿಗೆ ಐವಿ ಇಮ್ಯೂನೋಗ್ಲೋಬಿನ್ ಥೇರಪಿ ಆರಂಭಿಸಲಾಯಿತು. 8 ದಿನಗಳ ಕಾಲ ನಿರಂತರವಾಗಿ ನಿಗಾವಹಿಸಿ ರೋಗಕ್ಕೆ ಸಂಭಂದಿಸಿದ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಸ್ಪಂದಿಸಿದ ನಿರ್ಮಲಾ ದಿನದಿಂದ ದಿನಕ್ಕೆ ಆರೋಗ್ಯದಲ್ಲಿ ಚೇತರಿಸಿಕೊಂಡು ವೈದ್ಯರ ಯಶಸ್ವಿಯ ಚಿಕಿತ್ಸೆಯಿಂದ ಇಂದು ಅವಳು ವೆಂಟಿಲೇಟರ್ ಬಿಡುಗಡೆಯಾಗಿ ಅಪಾಯದಿಂದ ಮುಕ್ತರಾಗಿ ಸ್ಥಿರ ಆರೋಗ್ಯ ಸ್ಥಿತಿ ಹೊಂದಿದ ಉತ್ತಮ ಚೇತರಿಕೆ ಕಂಡಿದ್ದು ಈಗ ಆಸ್ಪತ್ರೆಯಿಂದ ಬಿಡುಗಡೆಗೂ ಸಜ್ಜಾಗಿದ್ದಾಳೆ.

ಚಿಕಿತ್ಸೆ ನೀಡಿದ ವೈದ್ಯ ತಂಡದಲ್ಲಿ ನರರೋಗ ತಜ್ಞರಾದ ಡಾ.ಅನಿಲಕುಮಾರ ಪಾಟೀಲ್, ಐಸಿಯು ತಂಡದ ಮುಖ್ಯಸ್ಥ ಡಾ.ಸೋಹೈಲ್ ಶಾಲಿ, ಡಾ ಸತೀಶ್, ಡಾ ಪ್ರತೀಕ್, ಸ್ನಾತಕೋತ್ತರ ಪದವಿಯ ವೈದ್ಯರು, ಮತ್ತು ನರ್ಸಿಂಗ್ ಸಿಬ್ಬಂದಿಗಳಿದ್ದರು.

ಈ ಪ್ರಕರಣದ ಬಗ್ಗೆ ಮಾತನಾಡಿದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ, ಬಸವೇಶ್ವರ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ, ನಮ್ಮ ಆಸ್ಪತ್ರೆಯ ವೈದ್ಯರು ತಕ್ಷಣವೆ ರೋಗ ಪತ್ತೆ ಹಚ್ಚಿ ಸಮರ್ಥ ಚಿಕಿತ್ಸೆ ನೀಡುತ್ತಿದ್ದಾರೆ, ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ.

ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್ ಆಸ್ಪತ್ರೆಯ ಸಂಚಾಲಕರಾದ ಡಾ.ಕಿರಣ್ ದೇಶಮುಖ್, ವೈದ್ಯಕೀಯ ಅಧಿಕ್ಷಕರಾದ ಡಾ.ಮಲ್ಲಿಕಾರ್ಜುನ ತೇಗನೂರ, ಮಾಧ್ಯಮ ಸಂಯೋಜಕ ಐ.ಕೆ ಪಾಟೀಲ್ ವೈದ್ಯಕೀಯ ತಂಡದ ಸಾಧನೆಗೆ ಅಭಿನಂದಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...