ಕಲಬುರಗಿ| 49.65 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಪಂಚಾಯತಿ ನೂತನ ಕಟ್ಟಡಕ್ಕೆ ಅನುಮೋದನೆ

Date:

Share post:

ಕಲಬುರಗಿ: ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯತಿಗೆ 4 ದಶಕಗಳ ನಂತರ ಸ್ವಂತ ಕಟ್ಟಡ ಹೊಂದುವ ಯೋಗ ಇದೀಗ ಕೂಡಿ ಬಂದಿದ್ದು, ಗುರುವಾರ ಜರುಗಿದ ಸಚಿವ ಸಂಪುಟ ಸಭೆಯಲ್ಲಿ 49.65 ಕೋಟಿ ಅಂದಾಜು ಮೊತ್ತದ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ‌.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗೊರುವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಕಾಳಜಿಯ ಪರಿಣಾಮ ಪಂಚಾಯತ್ ವ್ಯವಸ್ಥೆ ಆರಂಭದಿಂದಲು 1986 ರಿಂದ ಸ್ವಂತ ಕಟ್ಟಡ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಗೆ ಸ್ವಂತ ಕಟ್ಟಡ ಪಡೆಯುವ ಭಾಗ್ಯ ಒದಗಿ ಬಂದಿದೆ.

11 ತಾಲೂಕು ಪಂಚಾಯತಿ, 261 ಗ್ರಾಮ‌ ಪಂಚಾಯತಿ ಹೊಂದಿರುವ ಕಲಬುರಗಿ ಜಿಲ್ಲಾ ಪಂಚಾಯತ್ ಸಂಸ್ಥೆಗೆ ಇದೀಗ ನೂತನ ಆಡಳಿತ ‌ಭವನ ನಿರ್ಮಾಣಕ್ಕೆ ಗ್ಯಾರಂಟಿ‌ ಸರ್ಕಾರ ಹಸಿರು ನಿಶಾನೆ ತೋರಿದ್ದರಿಂದ, ಗ್ರಾಮೀಣ ಭಾಗದಲ್ಲಿ ಸುಗಮ ಆಡಳಿತಕ್ಕೆ ಮತ್ತು ಮೇಲ್ವಿಚಾರಣೆಗೆ ನೆರವಾಗಲಿದೆ.

 

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವ್ಯವಸ್ಥೆಯ ಗ್ರಾಮ, ಪಂಚಾಯತ್, ತಾಲೂಕಾ ಪಂಚಾಯತಗಳ ಮೇಲ್ವಿಚಾರಣೆಯ ಮಹತ್ವರ ಜವಾಬ್ದಾರಿ ಹೊಂದಿದ್ದು,‌ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ ದಂತಹ ಚನಾಯಿತ ಜನಪ್ರತಿನಿಧಿಗಳಿಂದ ವಾರ್ಷಿಕ‌ ಕ್ರಿಯಾ ಯೋಜನೆ ಪಡೆದು ತನ್ನ ಅಧೀನದ‌ ವಿವಿಧ ಇಲಾಖೆಗಳಿಂದ ಗ್ರಾಮೀಣ ಜನರು ಬದುಕು ಕಟ್ಟಿಕೊಳ್ಳುವ ಅನೇಕ ಯೋಜನೆ‌ಗಳ ಅನುಷ್ಠಾನದ‌ ಜವಾಬ್ದಾರಿ ಹೊಂದಿದೆ. ಗ್ರಾಮಗಳ ಸಬಲೀಕರಣ ಮತ್ತು ಹಳ್ಳಿ ಜನರ ಬದುಕು ಹಸನಗೊಳಿಸುವುದು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲ ಉದ್ದೇಶವಾಗಿದ್ದು, ಅದನ್ನು ಜಿಲ್ಲಾ ಪಂಚಾಯತ್ ಮೂಲಕ ರಾಜ್ಯ ಮತ್ತು ಕೇಂದ್ರ‌ ಸರ್ಕಾರಗಳು ಯೋಜನೆಗಳನ್ನು ಜಾರಿಗೊಳಿಸುತ್ತವೆ.

 

ಪ್ರಸ್ತುತ ‌ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ ಜಿಲ್ಲಾ ಪಂಚಾಯತಿ ಕಚೇರಿಯು ಸ್ಥಳದ ಅಭಾವವನ್ನು ಎದುರಿಸುತ್ತಿದ್ದು, ಇದೀಗ ಸ್ವಂತ ಕಟ್ಟಡಕ್ಕೆ ಅನುಮೋದನೆ ದೊರೆತಿರುವುದರಿಂದ ಮುಂದಿನ ದಿನದಲ್ಲಿ ಸುಸಜ್ಜಿತ, ಸಕಲ ವ್ಯವಸ್ಥೆ ಒಳಗೊಂಡ ಪ್ರತ್ಯೇಕ ಸ್ವಂತ ಕಟ್ಟಡ ಹೊಂದಲಿದೆ.

ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ, ಜಿಲ್ಲಾ ಯೋಜನಾ ಪರಿಷತ್ ಸಭೆ ನಡೆಸಲು ವಿಶಾಲ ಸಭಾಂಗಣ, ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಇಲ್ಲಿ ಅಳವಡಿಸಲಾಗುತ್ತದೆ. ಈ ಹೊಸ ಆಡಳಿತ ಭವನವು ಸುಗಮ ಆಡಳಿತಕ್ಕೆ, ಜನರ ಅನುಕೂಲಕ್ಕೆ ಸಹಕಾರಿಯಾಗಲಿದೆ.

Share post:

spot_imgspot_img

Popular

More like this
Related

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...

ಕಲಬುರಗಿ| ಕೋಮು ದ್ವೇಷ ಭಾಷಣ ಆರೋಪ; ಬಿಜೆಪಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲು

ಕಲಬುರಗಿ: "ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲು ಇಲ್ಲಿನ ನಾಯಕರು ಹಾಗೂ ಸರಕಾರ...

ಕಲಬುರಗಿ| ಭೀಕರ ಅಪಘಾತ: ಒಂದೇ ಕುಟುಂಬದ ಐವರು ದುರ್ಮರಣ 

ಕಲಬುರಗಿ: ಕ್ರೂಸರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ...

ಕಲಬುರಗಿ| ಆಕಾಶವಾಣಿ  “ಹಲೋ ಪೊಲೀಸ್ ಕಮಿಷನರ್” ನೇರ ಫೋನ್ ಇನ್ ಕಾರ್ಯಕ್ರಮ

ಕಲಬುರಗಿ: ಆಕಾಶವಾಣಿ ಕಲಬುರಗಿ ಕೇಂದ್ರವು ಮೇ 22(ಶುಕ್ರವಾರ) ರ ಬೆಳಗ್ಗೆ 11...