ಕಲಬುರಗಿ| ರಾಣಿ ಅಬ್ಬಕ್ಕ, ಅಹಲ್ಯಾಬಾಯಿ, ರಾಣಿ ಚೆನ್ನಮ್ಮ ಜಯಂತಿ ಆಚರಣೆ

Date:

Share post:

ಕಲಬುರಗಿ: ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘ(ABRSM) ವತಿಯಿಂದ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ರಾಣಿ ಅಬ್ಬಕ್ಕ ದೇವಿ ರವರ 500ನೇ ಜನ್ಮ ಶತಾಬ್ದಿ ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ರವರ 300ನೇ ಜನ್ಮ ಶತಾಬ್ದಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ರವರ 200ನೇ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮ ಕುರಿತು ” ಭರತ ವರ್ಷದ ಮೂವರು ಮಹಾನ್ ಮಹಿಳಾ ಯೋಧರ ಅಳಿಸಲಾಗದ, ಚೈತನ್ಯ, ಧೈರ್ಯ ಮತ್ತು ಪರಹಿತಚಿಂತನೆ” ಎನ್ನುವ ಶೀರ್ಷಿಕೆಯಡಿಯಲ್ಲಿ 500 ಗಂಟೆಗಳಲ್ಲಿ, 500 ಕಾರ್ಯಕ್ರಮ ಉನ್ನತ ಶಿಕ್ಷಣ ಸಂಸ್ಥೆಗಲ್ಲಿ ಏರ್ಪಡಿಸುವ ಗುರಿಯ ಭಾಗವಾಗಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

 

 

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಬಿರಾದಾರ್ ಮಾತನಾಡಿ, ಈ ಮೂವರು ರಾಣಿಯರು ಅವರು ಮಾಡಿದ ಸಾಧನೆ ಅವರ ಹೋರಾಟಗಳು ಇಂದಿನ ಮಹಿಳೆಯರಿಗೆ ಪ್ರೇರಣದಾಯಿ ಯಾಗುತ್ತಾರೆ. ವಿದ್ಯಾರ್ಥಿನಿಯರು ಇಂತಹ ಮಹಾನ್ ವೀರರಾಣಿಯರನ್ನು ತಮ್ಮ ಜೀವನದ ಆದರ್ಶರನ್ನಾಗಿ ಇಟ್ಟುಕೊಂಡು ನಿಶ್ಚಿತ ಗುರಿಯೊಂದಿಗೆ ಸಾಧನೆ ಮಾಡಲು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಪ್ರೆರೇಪಿಸಿದರು.

` ನಾ ಸ್ತ್ರೀ ಸ್ವಾತಂತ್ರ್ಯ ಅರ್ಹತಿ` ಅಂದರೆ ಮಹಿಳೆಯರು ಸ್ವತಂತ್ರ್ಯಕ್ಕೆ ಅರ್ಹರಲ್ಲ ಎನ್ನುವ ಕಾಲದಲ್ಲಿ ರಾಣಿ ಅಹಲ್ಯಾಬಾಯಿ ಹೊಲ್ಕರ್ ರವರು ವಿರಾಗಚ್ಚೆ ಕಟ್ಟಿ, ಕತ್ತಿ ಹಿಡಿದು, ಕುದುರೆ ಏರಿ ದೇಶಾದ್ಯಂತ ಭ್ರಮಣ ಮಾಡಿ ದೇಶದ್ರೋಹಿಗಳಿಂದ ನಾಶ ಪಡಿಸಲ್ಪಟ್ಟ ದ್ವಾದಶ ಜ್ಯೋತಿರಲಿಂಗಗಳು, ಅದಿಯಾಗಿ ಇತಿಹಾಸ ಪುಟ ಸೇರುತಿದ್ದ ಕೇದಾರ, ಬದ್ರಿನಾಥ, ಸೋಮನಾಥ್, ಅಯೋಧ್ಯಾ, ಕಂಚಿ, ರಾಮೇಶ್ವರ, ಹೃಷಿಕೇಶ, ಪ್ರಯಾಗ, ಶ್ರೀನಗರ, ಹರಿದ್ವಾರ, ಪುರಿ, ಮಥುರಾ ಹೀಗೆ ಸುಮಾರು 3500 ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿ ಸನಾತನ ಧರ್ಮದ ಪರಿಪಾಲಕಿಯಾಗಿದ್ದರು ಎಂದರು.

 

500 ವರ್ಷಗಳ ಹಿಂದೆಯೇ ತುಳು ನಾಡಿನ ಕೆಚ್ಚೆದೆಯ ರಾಣಿ ಅಬ್ಬಕ್ಕದೇವಿ ಪೋರ್ಚುಗಿಸರಿಗೆ ಸಿಂಹ ಸಪ್ನಾವಾಗಿದ್ದ ರಾಣಿ ಅಬ್ಬಕ್ಕ ” ಅಭಯ ರಾಣಿ ” ಎಂದೇ ಹೆಸರುವಾಸಿಯಾಗಿದ್ದರು. ಪ್ರಥಮ ಸ್ವಾತಂತ್ರ್ಯ ಸಂಗ್ರಮಕ್ಕೂ ಮುಂಚೆ ಬ್ರಿಟಿಷರ ವಿರುದ್ಧ ಸೆಟದು ನಿಂತು ಯುದ್ಧ ಮಾಡಿ ಗೆದ್ದ ಭಾರತದ ಮೊದಲ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ರವರ ದೇಶಪ್ರೇಮವನ್ನು ಸ್ಮರಿಸಿಕೊಂಡರು.

ಇದೇ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಕಲಬುರಗಿಯ ಪ್ರಾದೇಶಿಕ ನಿರ್ದೇಶಕರಾದ ಡಾ. ಶುಭಾಂಗಿ ಡಿ. ಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಇದೊಂದು ವಹಿಳೆಯರಿಗೆ ಕೀಳರಿಮೆ ಹೋಗಲಾಡಿಸಿ ಅವರಲ್ಲಿ ಪ್ರೇರಣೆ ಮತ್ತು ಧೈರ್ಯ ತುಂಬುವ ಅತ್ಯದ್ಭುತ ಉಪನ್ಯಾಸ ಸರಣಿ ಎಂದರು.

ಈ ಸಂದರ್ಭದಲ್ಲಿ ಡಾ. ರೇಖಾ ಪಾಟೀಲ್ ಹಾಗೂ ಡಾ. ಸ್ವರೂಪ ಶಾಸ್ತ್ರಿ ರವರು ವೇದಿಕೆಯಲ್ಲಿ ಉಪಸ್ಥಿತರದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...