ಕಲಬುರಗಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿಗೆ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರೇತರ ಸದಸ್ಯರನ್ನಾಗಿ ಹಾಗೂ ಜಿಲ್ಲಾ ಮಟ್ಟದ ಜಾಗೃತ ಸಮಿತಿಗೆ ತಲಾ ಐವರನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
ಮಹಾನಗರ ವ್ಯಾಪ್ತಿಯಲ್ಲಿ ಶ್ರೀಶೈಲ ನಾಗರಾಳ, ಸಾಹಿತಿ ವಿಶ್ವನಾಥ ಭಕರೆ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅತಿಥಿ ಉಪನ್ಯಾಸಕಿ ಕರುಣಾ ಜಮಾದಾರಖಾನಿ, ಹೋರಾಟಗಾರ ಸುನಿಲ ಮಾನ್ಪಡೆ, ಸೈಯದಾ ಸೂಫಿಯಾ ಬೇಗಂ ಹಾಗೂ ಮಹಾದೇವಿ ಎಂ.ಬಿ. ನಿಂಗಪ್ಪ ಅವರನ್ನು ನೇಮಿಸಲಾಗಿದೆ. ಅದರಂತೆಯೇ ಜಿಲ್ಲಾ ಮಟ್ಟದ ಜಾಗೃತ ಸಮಿತಿಗೆ ಪತ್ರಕರ್ತ ಮಾಜಿದ್ ಡಾಗಿ, ಪ್ರಾಧ್ಯಾಪಕ ಶರಣಬಸಪ್ಪ ವಡ್ಡನಕೇರಿ, ಜೇವರ್ಗಿ ತಾಲ್ಲೂಕಿನ ಕಾಶಿನಾಥ, ಮಹಿಳಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ನಂದಿನಿ ಸುರೇಂದ್ರ ಸನಬಾಳ, ಚಿಂಚೋಳಿ ತಾಲ್ಲೂಕಿನ ಸಾಲೆಬೀರನಹಳ್ಳಿಯ ಮಂಜುನಾಥ ಅವರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


