ಕಲಬುರಗಿ| ಸೆಂಟರ್ ಆಫ್ ಎಕ್ಸ್ ಲೆನ್ಸ್ ಇಂಕ್ಯೂಬೇಷನ್ ಸೆಂಟರ್ ಕಚೇರಿ ಉದ್ಘಾಟಿಸಿದ ಸಚಿವ‌ ಪ್ರಿಯಾಂಕ್ ಖರ್ಗೆ

Date:

Share post:

ಕಲಬುರಗಿ: ಕಲಬುರಗಿ ನಗರದ ಗಾಜಿಪುರ ಚಕ್ಕರ್ ಕಟ್ಟಾ ಪ್ರದೇಶದಲ್ಲಿ ಕೃಷಿ ಉದ್ಯಮಕ್ಕೆ ಮೌಲ್ಯವರ್ಧಿತ ಸೇವೆ ನೀಡಲು ಮಾರ್ಗದರ್ಶನ ನೀಡಲು ಸ್ಥಾಪಿಸಲಾಗಿರುವ ಕೃಷಿಕಲ್ಪ ಸೆಂಟರ್ ಆಫ್ ಎಕ್ಸ್‍ಲೆನ್ಸ್ ನೂತನ ಕಚೇರಿಯನ್ನು ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಇಲಾಖೆಯ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.

ಎಲೆಕ್ಟ್ರಾನಿಕ್ಸ್, ಐ.ಟಿ. ಮತ್ತು ಬಿ.ಟಿ. ಇಲಾಖೆಯ ಅಧೀನದ ಕರ್ನಾಟಕ ಇನ್ನೋವೇಶನ್ ಆಂಡ್ ಟೆಕ್ನಾಲಜಿ ಸೊಸೈಟಿ (KITS) ನ LEAP ಯೋಜನೆಯಡಿ ಆರ್ಥಿಕ ಸಹಕಾರದೊಂದಿಗೆ ಕೃಷಿಕಲ್ಪ ಫೌಂಡೇಶನ್ ವತಿಯಿಂದ “ಸೆಂಟರ್ ಆಫ್ ಎಕ್ಸ್‍ಲೆನ್ಸ್ ಇಂಕ್ಯೂಬೇಷನ್ ಸೆಂಟರ್” ನಿರ್ವಹಣೆ ಮಾಡಲಾಗುತ್ತಿದೆ.

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ, ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆ ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲಎಮವಿಧಾನ ಪರಿಷತ್ ಶಾಸಕರುಗಳಾದ ತಿಮ್ಮಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಚಿಸ್ತಿ ಸಾಹೇಬ್, ಐ.ಜಿ.ಪಿ. ಶಾಂತನು ಸಿನ್ಹಾ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನುವಾಸಲು, ಡಿ.ಸಿ.ಪಿ ಶಾಲೂ, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ‌ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಪಿ‌.ಶ್ರವಣಕುಮಾರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಯು.ಕೆ & ಕಂಪನಿಯ ಸಂಸ್ಥಾಪಕ ಡಾ.ಕೆ.ಉಲ್ಲಾಸ‌ ಕಾಮತ್, ಕೃಷಿಕಲ್ಪ ಎಸೆಲ್ ಅಧ್ಯಕ್ಷರು ಹಾಗೂ ಸಂಸ್ಥಾಪಕ ಪಾಲುದಾರರಾದ ಡಾ. ಪ್ರಶಾಂತ ಪ್ರಕಾಶ, ಸತ್ವ ಕನ್ಸಲಟಿಂಗ್ ಸಿ.ಇ.ಓ ಶ್ರೀಕೃಷ್ಣ ಶ್ರೀಧರ, ಕೃಷಿ ಕಲ್ಪ ಸಿ.ಇ.ಓ. ಸಿ.ಎಂ. ಪಾಟೀಲ ಇದ್ದರು.

Share post:

spot_imgspot_img

Popular

More like this
Related

BREAKING NEWS: ಕಲಬುರಗಿ| ಕಬ್ಬು ಕಟಾವು; 3,400 ರೂ. ನೀಡಲು ಕಾರ್ಖಾನೆಗಳು ಒಪ್ಪಿಗೆ: ಡಿಸಿ ಇಕ್ರಮ್ ಶರೀಫ್

ಕಲಬುರಗಿ: ಪ್ರಸಕ್ತ 2026-27ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ರೈತರಿಂದ ಖರೀದಿಗೆ...

ಕಲಬುರಗಿ| ನ.14ರಂದು ‘ಕಲ್ಯಾಣ ಕರ್ನಾಟಕ ಸ್ಟಾರ್ಟ್‌ಅಪ್ ಸಂವಾದ, ನೂತನ ಉದ್ಯಮಶೀಲತಾ ಕೇಂದ್ರ ಉದ್ಘಾಟನೆ: ಡಿಸಿ ಇಕ್ರಮ್ ಶರೀಫ್ 

ಕಲಬುರಗಿ: ಬೆಂಗಳೂರಿನ ಆಚೆಗೂ ಐಟಿ-ಬಿಟಿ ಹಾಗೂ ನವೋದ್ಯಮ ವಲಯವನ್ನು ವಿಸ್ತರಿಸುವ ರಾಜ್ಯ...