ಕಲಬುರಗಿ| ಸಹೋದರ ಮಾಲೀಕಯ್ಯ ಗುತ್ತೇದಾರರಿಗೇ ಸಾಥ್ ಕೊಡದ ನಿತಿನ್ ಗುತ್ತೇದಾರ ಜನರಿಗೆ ಸಾಥ್ ಕೊಡುತ್ತಾರೆಯೇ?: ಅರುಣಕುಮಾರ ಪಾಟೀಲ

Date:

Share post:

ಕಲಬುರಗಿ: ತಮ್ಮ ಸಹೋದರ ಮಾಲೀಕಯ್ಯ ಗುತ್ತೇದಾರ ಅವರಿಗೇ ಸಾಥ್ ನೀಡದ ಬಿಜೆಪಿ ಮುಖಂಡ ನಿತಿನ್ ವಿ. ಗುತ್ತೇದಾರ ಅವರು ಕ್ಷೇತ್ರದ ಜನರಿಗೆ ಹೇಗೆ ಸಾಥ್ ನೀಡುತ್ತಾರೆ ಎಂದು ಅರುಣಕುಮಾರ ಪಾಟೀಲ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಫಜಲಪುರ ಕ್ಷೇತ್ರದ ಬಿಜೆಪಿ ಮುಖಂಡ ನಿತಿನ್ ವಿ. ಗುತ್ತೇದಾರ ಅವರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಈಗಾಗಲೇ ಸೂಕ್ತ ಉತ್ತರ ನೀಡಿದ್ದೇನೆ. ಅವರು ಬರೀ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಮತ್ತೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವ ಬದಲು, ತಮ್ಮದೇ ಹೆಗಲ ಮೇಲೆ ನಿಂತು ಮಾತನಾಡಲಿ ಎಂದು ತಿರುಗೇಟು ನೀಡಿದರು.

 

“ನನ್ನನ್ನು ಹೆಗಲ ಮೇಲೆ ಎತ್ತಿಕೊಂಡು ಎಸೆಯುವಷ್ಟು ಕ್ಷೇತ್ರದ ಜನರು ತಮ್ಮ ಹೆಗಲು ಗಟ್ಟಿಗೊಳಿಸಿದ್ದಾರೆ ಎಂಬ ಅರ್ಥದಲ್ಲಿ ನಿತಿನ್ ಗುತ್ತೇದಾರ ಮಾತನಾಡಿದ್ದಾರೆ. ಆದರೆ, ತಮ್ಮ ಸಹೋದರ ಮಾಲೀಕಯ್ಯ ಗುತ್ತೇದಾರ ಅವರಿಗೇ ಸಾಥ್ ಕೊಡದವರು ಕ್ಷೇತ್ರದ ಜನರಿಗೆ ಏನು ಸಾಥ್ ಕೊಡುತ್ತಾರೆ ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ” ಎಂದರು.

 

2028ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಾಲೀಮು ಆರಂಭಿಸಿದಂತಿದೆ. ಅವರ ಮಾತಿನ ಶೈಲಿ ಹಾಗೂ ಟೀಕೆಗಳನ್ನು ಕ್ಷೇತ್ರದ ಜನರು ಗಮನಿಸುತ್ತಿದ್ದಾರೆ. ವೈಯಕ್ತಿಕ ಟೀಕೆಗಳಿಗೆ ಸಮರ್ಥವಾಗಿ ಉತ್ತರ ನೀಡಲಾಗುವುದು ಎಂದು ಹೇಳಿದರು.

 

ಶಕ್ತಿ ಯೋಜನೆಗೆ ₹3,300 ಕೋಟಿ ಪಾವತಿ:

 

ಶಕ್ತಿ ಯೋಜನೆ ಜಾರಿಯಾದ ನಂತರ ಸರ್ಕಾರವು ಒಟ್ಟು ₹4,480 ಕೋಟಿ ಮೊತ್ತದಲ್ಲಿ ₹3,300 ಕೋಟಿ ಹಣವನ್ನು ನಿಗಮಕ್ಕೆ ಪಾವತಿಸಿದೆ. ಇನ್ನೂ ₹1,185 ಕೋಟಿ ಬಾಕಿ ಪಾವತಿಸಬೇಕಿದೆ ಎಂದು ತಿಳಿಸಿದರು.

 

ಕಲಬುರಗಿ ಮತ್ತು ಯಾದಗಿರಿ ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. ನಿಗಮದಲ್ಲಿ ಖಾಲಿ ಇರುವ 2,589 ಹುದ್ದೆಗಳ ಭರ್ತಿಗೆ ಸರ್ಕಾರದ ಅನುಮತಿ ಕೋರಲಾಗಿದೆ ಎಂದು ಅರುಣಕುಮಾರ ಪಾಟೀಲ ಹೇಳಿದರು.

Share post:

spot_imgspot_img

Popular

More like this
Related

BREAKING NEWS: ಕಲಬುರಗಿ| ಕಬ್ಬು ಕಟಾವು; 3,400 ರೂ. ನೀಡಲು ಕಾರ್ಖಾನೆಗಳು ಒಪ್ಪಿಗೆ: ಡಿಸಿ ಇಕ್ರಮ್ ಶರೀಫ್

ಕಲಬುರಗಿ: ಪ್ರಸಕ್ತ 2026-27ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ರೈತರಿಂದ ಖರೀದಿಗೆ...

ಕಲಬುರಗಿ| ನ.14ರಂದು ‘ಕಲ್ಯಾಣ ಕರ್ನಾಟಕ ಸ್ಟಾರ್ಟ್‌ಅಪ್ ಸಂವಾದ, ನೂತನ ಉದ್ಯಮಶೀಲತಾ ಕೇಂದ್ರ ಉದ್ಘಾಟನೆ: ಡಿಸಿ ಇಕ್ರಮ್ ಶರೀಫ್ 

ಕಲಬುರಗಿ: ಬೆಂಗಳೂರಿನ ಆಚೆಗೂ ಐಟಿ-ಬಿಟಿ ಹಾಗೂ ನವೋದ್ಯಮ ವಲಯವನ್ನು ವಿಸ್ತರಿಸುವ ರಾಜ್ಯ...

ಕಲಬುರಗಿ: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 50 ಕೋಟಿ ಅಂದಾಜು ವೆಚ್ಚದ ‘ಕಲಬುರಗಿ ಬಯೋ-ಇಕಾನಮಿ ಮಿಷನ್ 2026’ ಪ್ರಸ್ತಾವನೆ: ಪ್ರಿಯಾಂಕ್ ಖರ್ಗೆ 

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿರುವ ಸ್ಥಳೀಯ ಜೈವಿಕ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ...