ಕಲಬುರಗಿ| ಶಾದಿಪುರ ಗ್ರಾಮ ಘಟಕಕ್ಕೆ ಕರವೇ ಸ್ವಾಭಿಮಾನಿ ಸೇನೆಯ ನೂತನ ಪದಾಧಿಕಾರಿಗಳ ಆಯ್ಕೆ

Date:

Share post:

ಕಲಬುರಗಿ: ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಘಟಕಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ವಾಭಿಮಾನಿ ಸೇನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಸಂಘಟನೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಸೇನೆಯ ತಾಲ್ಲೂಕು ಅಧ್ಯಕ್ಷ ಲಿಂಬಾಜಿ ಚವ್ಹಾಣ್ ಹೇಳಿದ್ದಾರೆ.

ಗ್ರಾಮ ಮಾಧ್ಯಮ ಘಟಕದ ಅಧ್ಯಕ್ಷರಾಗಿ ರಮೇಶ್ ಬಿಲಾಲ್‌ಪುರ್, ಚಿಂಚೋಳಿ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಸಚಿನ್ ಚವ್ಹಾಣ್ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಂಘಟಿಸಲು ಸಚಿನ್ ಚವ್ಹಾಣ್ ಮುಂದಾಗಲಿದ್ದಾರೆ ಎಂದು ಹೇಳಿದರು.

ಶಾದಿಪುರ ಗ್ರಾಮ ಘಟಕದ ಒಟ್ಟಾರೆ ನಾಯಕತ್ವದ ಹೊಣೆಗಾರಿಕೆಯನ್ನು ಅಮೋಲ್ ಜಿ. ಮಾನೆ ಅವರಿಗೆ ನೀಡಲಾಗಿದೆ. ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಘಟಕವು ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ ನೀಡುವ ನಿರೀಕ್ಷೆಯಿದೆ. ಈ ತಂಡದೊಂದಿಗೆ ಕಾರ್ಯನಿರ್ವಹಿಸಲು ಹಲವಾರು ಸಮರ್ಥ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮದ ಕೃಷ್ಣ ಕಲ್ವಾ, ಬಳಿರಾಮ್ ಪ್ರಾಂಜೆ, ನಿಲೇಶ್ ಪ್ರಾಂಜೆ, ನಿಲಪ್ಪ ದಸ್ತಾಪುರ, ಶಾಂತಕುಮಾರ್ ಕನ್ಕಟ್, ಮಡಲರಾಜ್ ಮಡಿವಾಳ, ನವೀನ್ ಪ್ರಾಂಜೆ, ನರಸಿಂಹ ಹಡಪದ್, ಅಲ್ತಾಬ್ ಶೇಖ್, ಯಲ್ಲಪ್ಪ ಆರ್. ಪೂಜಾರಿ, ಮನು ಚವ್ಹಾಣ್ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸೇನೆಯ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಇಕ್ರಮ್ ಶರೀಫ್ ಅಧಿಕಾರ ಸ್ವೀಕಾರ

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ಕೇಡರಿನ 2016ನೇ ಬ್ಯಾಚಿನ...

ಸಿದ್ದು ಸಂಪುಟದ ಸಚಿವ ಡಿ. ಸುಧಾಕ‌ರ್ ಇನ್ನಿಲ್ಲ!

ಬೆಂಗಳೂರು: ಯೋಜನಾ ಮತ್ತು ಸಾoಖಿಕ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್...

ಕಲಬುರಗಿ ಕೋಟೆಯಲ್ಲಿ ಹರಿದ ಸಂಗೀತ ಸುಧೆ; ಗಾಯನಕ್ಕೆ ತಲೆದೂಗಿದ ಕಲಾ ಪ್ರೇಮಿಗಳು

ಕಲಬುರಗಿ: ಶುಕ್ರವಾರ ಸಂಜೆ ನಗರದ ಐತಿಹಾಸಿಕ ಕಲಬುರಗಿ ಕೋಟೆಯಲ್ಲಿ ಇದೇ ಪ್ರಥಮ...