ಕಲಬುರಗಿ: ವರದಕ್ಷಿಣೆ ತರದಿದ್ದಕ್ಕೆ ಹೆಂಡತಿ ಮಾವನಿಗೆ ಅಳಿಯನಿಂದ ಬೀದಿಯಲ್ಲೇ ಮಾರಣಾಂತಿಕ ಹಲ್ಲೆ 

Date:

Share post:

ಕಲಬುರಗಿ: ಇನ್ನಷ್ಟು ವರದಕ್ಷಣೆ ತರದಿದ್ದಕ್ಕೆ ಹೆಂಡತಿ ಹಾಗೂ ಮಾವನಿಗೆ ನಡು ಬೀದಿಯಲ್ಲೇ ಅಳಿಯ ಮತ್ತು ಆತನ ಕುಟುಂಬಸ್ಥರು ಸಿನಿಮಯ ರೀತಿಯಲ್ಲೇ ಮಾರಣಾಂತಿಕ ಹಲ್ಲೆಗೈದ ಘಟನೆ ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆಯ ವ್ಯಾಪ್ತಿಯ ಬಸವಣ್ಣಸಂಗೋಳಗಿ ಗ್ರಾಮದಲ್ಲಿ ನಡೆದಿದೆ.

ಈ ಘಟನೆಗೆ ಸಂಬoಧಿಸಿದoತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಗಾಯಾಳುಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನೆರೆಯ ಅಕ್ಕಲಕೋಟ ಪಟ್ಟಣದ ವಿರೂಪಾಕ್ಷ ಮುಸ್ಕೆ ಎಂಬುವರ ಮಗಳು ಶ್ರೆಯಾ ಅವಳನ್ನು ಆಳಂದ ತಾಲೂಕಿನ ಬಸವಣ್ಣ ಸಂಗೋಳಿ ಗ್ರಾಮದ ಚನ್ನವೀರಪ್ಪ ಮಾಯಿ ಎಂಬವರ ಮಗ ಬಸವರಾಜ ಚನ್ನವೀರಪ್ಪ ಮಾಯಿ ಎಂಬುವರೊoದಿಗೆ ಆರು ವರ್ಷಗಳ ಹಿಂದೆ (31 ಡಿಸೆಂಬರ್ 2019ರಂದು) ವಿವಾಹ ನಡೆದಿದ್ದು, ವಿವಾಹ ಸಂದರ್ಭದಲ್ಲಿ 11 ತ್ವಲೆ ಚಿನ್ನ ಹಾಗೂ 1.25ಲಕ್ಷ ರೂಪಾಯಿ ವರದಕ್ಷಣೆ ಸೇರಿ ಸುರಿಗೆ ಸಾಮಗ್ರಿ ನೀಡಲಾಗಿತ್ತು. ಎರಡು ವರ್ಷದವರೆಗೆ ಕುಟುಂಬದಲ್ಲಿ ಸರಿಯಾಗಿದ್ದರು. ನಾಲ್ಕು ವರ್ಷದ ಗಂಡು ಮಗುವಿದ್ದು, ಮಗು ಜನಿಸಿದ ಒಂದು ವರ್ಷದ ಮೇಲೆ ತವರಿನಿಂದ ಹಣ ತರುವಂತೆ ಪಿಡಿಸಿ ಐದು ತ್ವಲೆ ಚಿನ್ನ ಹಾಗೂ 1 ಲಕ್ಷ ರೂಪಾಯಿ ತರುವಂತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮಗಳನ್ನು ಒಂದುವರೆ ವರ್ಷದಿಂದ ಮನೆಯಲ್ಲೇ ಇರಿಸಿಕೊಂಡಿದ್ದರು. ಈಗ ಮೊನ್ನೆ ಮೇ 29  ರಂದು ಮಗಳನ್ನು ನಡೆಸಿಕೊಳ್ಳುವಂತೆ ಬಸವಣ್ಣಸಂಗೋಳಗಿ ಗ್ರಾಮಕ್ಕೆ ಅಕ್ಕಲಕೋಟದಿಂದ ತಂದೆ ವಿರೂಪಾಕ್ಷ ಮುಸ್ಕೆ ಅವರು ತಮ್ಮ ಮಗಳು ಶ್ರೇಯಾಳೊಂದಿಗೆ ಕುಟುಂಬಸ್ಥರು ಹಾಗೂ ಆಳಂದ ಕೆಲವು ಮುಖಂಡರನ್ನು ಕರೆದುಕೊಂಡು ಹೋಗಿ ಕೇಳುವಾಗ ಅಳಿಯ ಬಸವರಾಜ ಚನ್ನವೀರಪ್ಪ ಮಾಯಿ ಅಳಿಯನ ಸಹೋದರ ಮೋಹನಂದ ಚನ್ನವೀರಪ್ಪ ಮಾಯಿ ನಡು ಬೀದಿಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಅಳಿಯ ಸೇರಿ ಏಳು ಜನರ ಮೇಲೆ ವರದಕ್ಷಣೆ ಕಿರುಕುಳ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬoಧಿಸಿದoತೆ ನರೋಣಾ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ರೇಯಾ ಪತಿ ಬಸವರಾಜ ಹಾಗೂ ಆತನ ತಂದೆ ಚನ್ನವೀರಪ್ಪ, ತಾಯಿ ಗುಂಡಮ್ಮ, ಸೋಹದರ ಮೋಹನಂದ ಹಾಗೂ ಶ್ರೀದೇವಿ ಮೋಹನಂದ ಹಾಗೂ ಇನ್ನೋರ್ವ ಸಹೋದರ ಗಜಾನಂದ ಹಾಗೂ ಶಿವುಕುಮಾರ ಸೇರಿ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ. ಈ ಪೈಕಿ ಬಸವರಾಜ ಮತ್ತು ಮೋಹನಂದ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...