ಕಲಬುರಗಿ| ವಿದ್ಯಾರ್ಥಿಗಳ ಉಚಿತ ಬಸ್‍ಪಾಸ್‍ಗಾಗಿ ಅರ್ಜಿ ಆಹ್ವಾನ

Date:

Share post:

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ವಿದ್ಯಾರ್ಥಿಗಳ ಉಚಿತ/ರಿಯಾಯಿತಿ ಬಸ್‍ಪಾಸ್‍ಗಾಗಿ ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು https://sevasindhuservices.karnataka.gov.in/buspassservices ವೆಬ್‍ಸೈಟ್ ನಲ್ಲಿ ಕಲಬುರಗಿ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ ಘಟಕ ಹಾಗೂ ಪಾಸ್ ವಿತರಿಸುವ ಬಿಂದುಗಳನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ ಈ ಕೆಳಕಂಡ ಕೆ-1 ಕೇಂದ್ರಗಳಲ್ಲಿ ನಿಗದಿತ ಬಸ್‍ಪಾಸ್ ದರ ಪಾವತಿಸಿ ಬಸ್‍ಪಾಸ್ ಮುದ್ರಿಸಿಕೊಳ್ಳಬಹುದಾಗಿದೆ.

ಕಲಬುರಗಿ ಘಟಕ-1ಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಕಲಬುರಗಿಯ ರಾಷ್ಟ್ರಪತಿ ಚೌಕ ಹಾಗೂ ಖರ್ಗೆ ಪೆಟ್ರೋಲ್ ಪಂಪ್ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಕಲಬುರಗಿ ಮಿನಿ ವಿಧಾನಸೌಧದಲ್ಲಿನ ಕೆ-1 ಕೇಂದ್ರದಲ್ಲಿ ಬಸ್‍ಪಾಸ್ ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕ ಇಬ್ರಾಹಿಂ-9611792140 ಹಾಗೂ ಹಣಮಂತ-8197034666 ಇವರನ್ನು ಸಂಪರ್ಕಿಸಬೇಕು.

ಕಲಬುರಗಿ ಘಟಕ-4ಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಕಲಬುರಗಿ ಎಸ್.ಟಿ.ಬಿ.ಟಿ. ಬಸ್ ನಿಲ್ದಾಣ, ಗುಲಬರ್ಗಾ ವಿಶ್ವವಿದ್ಯಾಲಯ, ರೈಲು ನಿಲ್ದಾಣ ಬಸ್ ನಿಲ್ದಾಣ ಹಾಗೂ ಸೂಪರ ಮಾರ್ಕೇಟ್ ಬಸ್ ನಿಲ್ದಾಣದ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಸೇಡಂ ರಿಂಗ್ ರಸ್ತೆ ಹತ್ತಿರದ ಕೆಎಚ್‍ಬಿ ಕಾಂಪ್ಲೇಕ್ಸ್ ಕೆ-1 ಕೇಂದ್ರ, ಮಿನಿವಿಧಾನ ಸೌಧ ಕೆ-1 ಕೇಂದ್ರ ಹಾಗೂ ಮಹಾನಗರಪಾಲಿಕೆ ಕೆ-1 ಕೇಂದ್ರ ಇಲ್ಲಿ ಬಸ್‍ಪಾಸ್ ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಾರಿಗೆ ನಿಯಂತ್ರಕರಾದ ಶರಣಮ್ಮ-9686812466, ಶ್ರೀಮಂತ-9972898325, ಮಹಮ್ಮದಸಾಬ್-6361177933, ಭಾರತಿ-8884516009 ಹಾಗೂ ಕಾಂಚನಾ-8123047073 ಗಳಿಗೆ ಸಂಪರ್ಕಿಸಬೇಕು.

ಚಿಂಚೋಳಿ ಘಟಕಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಚಿಂಚೋಳಿ ಬಸ್ ನಿಲ್ದಾಣ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಚಿಂಚೋಳಿ ಚಂದಾಪೂರದ ಕೆ-1 ಕೇಂದ್ರ ಇಲ್ಲಿ ಬಸ್‍ಪಾಸ್ ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕ ಕಲಮೇಶ-6362884028 ಇವರನ್ನು ಸಂಪರ್ಕಿಸಬೇಕು.

ಚಿತ್ತಾಪೂರ ಘಟಕಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಚಿತ್ತಾಪೂರ ಬಸ್ ನಿಲ್ದಾಣ ಮತ್ತು ಶಹಾಬಾದ ಬಸ್‍ನಿಲ್ದಾಣ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಚಿತ್ತಾಪೂರ ಕೆ-1 ಕೇಂದ್ರ ಮತ್ತು ಶಹಾಬಾದ ಕೆ-1 ಕೇಂದ್ರ ಇಲ್ಲಿ ಬಸ್‍ಪಾಸ್‍ನ್ನು ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕರಾದ ಅನಸೂಯಾ-7676205526 ಮತ್ತು ಶಾಂತಾಬಾಯಿ ಇವರನ್ನು ಸಂಪರ್ಕಿಸಬೇಕು.

ಸೇಡಂ ಘಟಕಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸೇಡಂ ಬಸ್‍ನಿಲ್ದಾಣ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಸೇಡಂ ಕೆ-1 ಕೇಂದ್ರದಲ್ಲಿ ಬಸ್‍ಪಾಸ್‍ನ್ನು ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕ ರಾಜೇಂದ್ರ-8073612310 ಇವರನ್ನು ಸಂಪರ್ಕಿಸಬೇಕು.

ಕಾಳಗಿ ಘಟಕಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕಾಳಗಿ ಬಸ್ ನಿಲ್ದಾಣ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಕಾಳಗಿ ಕೆ-1 ಕೇಂದ್ರದಲ್ಲಿ ಬಸ್‍ಪಾಸ್ ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕ ದೇವಿದಾಸ-8095454473 ಇವರನ್ನು ಸಂಪರ್ಕಿಸಬೇಕು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ: 11 ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿಗೆ ಸಚಿವ ಶಿವಾನಂದ ಪಾಟೀಲ ಆದೇಶ

ಕಲಬುರಗಿ: ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 2025-26ನೇ ಸಾಲಿನ ಹಿಂಗಾರು ಹಂಗಾಮಿನ...

ಕಲಬುರಗಿ: ಮಾಹಿತಿ ನೀಡದ ಕಲಬುರಗಿ ಜಿ.ಪಂ ಉಪ ಕಾರ್ಯದರ್ಶಿ ಸೇರಿ 18 ಅಧಿಕಾರಿಗಳಿಗೆ ₹1.50 ಲಕ್ಷ ದಂಡ: ಬಿ. ವೆಂಕಟಸಿಂಗ್

ಕಲಬುರಗಿ: ಮಾಹಿತಿ ಹಕ್ಕು ಅಧಿನಿಯಮದಡಿ ಸಕಾಲಕ್ಕೆ ಮಾಹಿತಿ ನೀಡಲು ನಿರ್ಲಕ್ಷ್ಯ ವಹಿಸಿದುದು,...

ಕಲಬುರಗಿ–ದಾಂಡೇಲಿ ಮಧ್ಯೆ ಬಸ್ ಸಂಚಾರ ಆರಂಭ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ–1ರ ವ್ಯಾಪ್ತಿಯ...

ಕಲಬುರಗಿ: ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಲು ರೂ 208.67 ಕೋಟಿ. ಬಿಡುಗಡೆ- ಸಚಿವ ಪ್ರಿಯಾಂಕ್ ಖರ್ಗೆ 

ತುರ್ತು ಕಾಮಗಾರಿಗಳಿಗೆ ಪುನಃ 72 ಕೋಟಿ ರೂ.ಬಿಡುಗಡೆ: ಪ್ರಿಯಾಂಕ್ ಖರ್ಗೆ ಬೆಂಗಳೂರು: ರಾಜ್ಯದ...