ಕಲಬುರಗಿ| ರಕ್ತದಾನ ಉದಾತ್ತ ಸೇವೆ, ಇದಕ್ಕಿಂತ ದೊಡ್ಡ ದಾನವಿಲ್ಲ: ರಾಹುಲ್‌ ಸಂಕನೂರ್

Date:

Share post:

ಕಲಬುರಗಿ: ಅಪಘಾತ, ಶಸ್ತ್ರಚಿಕಿತ್ಸೆ ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಹೆಚ್ಚಿದ್ದು, ನಾವೆಲ್ಲರು ನೀಡುವ ರಕ್ತ ಅವರಿಗೆ ಮರುಜೀವ ನೀಡುತ್ತದೆ. ರಕ್ತದಾನವು ನಿಜಕ್ಕೂ ಅತ್ಯಂತ ಶ್ರೇಷ್ಠ ಮತ್ತು ಉದಾತ್ತ ಸೇವೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಎಸ್. ಸಂಕನೂರ ಹೇಳಿದರು.

ಕರ್ನಾಟಕ ರಾಜ್ಯ ಏಡ್ಸ್ ಪ್ರೀವೆನ್‌ಷನ್ ಸೊಸೈಟಿ, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್, ಕಲಬುರಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಮ್ಸ್ ಮಹಾವಿದ್ಯಾಲಯ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಯುವ ರೆಡ್‌ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್‌ ಕ್ರಾಸ್ ಜಿಲ್ಲಾ ಶಾಖೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ವಿ.ಟಿ.ಯು ಪ್ರಾದೇಶಿಕ ಕೇಂದ್ರದಲ್ಲಿ ಅಯೋಜಿಸಿದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ-2026 ಉದ್ಘಾಟಿಸಿ ಮಾತನಾಡಿದರು.

ಕಲಬುರಗಿಯಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ. ಟ್ರಾಮಾ ಸೆಂಟರ್ ಇದೆ. ಅನೇಕ ಅಸ್ಪತ್ರೆಗಳು ಇಲ್ಲಿರುವುದರಿಂದ ಸಹಜವಾಗಿಯೆ ರೋಗಿಗಳಿಗೆ ಇಲ್ಲಿ ರಕ್ತದ ಅವಶ್ಯಕತೆಯು ಹೆಚ್ಚಿರುತ್ತದೆ. ಇಂದಿನ ರಕ್ತದಾನ ಶಿಬಿರಕ್ಕೆ ಸರ್ಕಾರಿ-ಖಾಸಗಿ ಬ್ಲಡ್ ಬ್ಯಾಂಕ್ ಸಹ ಕೈಜೋಡಿಸಿದ್ದು ಶ್ಲಾಘನೀಯವಾಗಿದ್ದು, ಇದೇ ರೀತಿ ಮುಂದೆಯೂ ಜಿಲ್ಲೆಯ ಪ್ರಗತಿಗೆ ಎಲ್ಲರು ಒಟ್ಟಾಗಿ ಶ್ರಮಿಸೋಣ ಎಂದರು.

 

ದೇಶದ ಗಡಿಯಲ್ಲಿ ಎಲ್ಲರಿಗೂ ಸೇವೆ ಸಲ್ಲಿಸಲು ಅವಕಾಶ ಸಿಗಲ್ಲ. ಆದರೆ ನಾಡಿನೊಳಗೆ ರಕ್ತದಾನದಂತಹ ಅಳಿಲು ಸೇವೆ ನಮ್ಮಿಂದ ಸಾಧ್ಯ. ಇಂದಿಲ್ಲಿ ವಿಶೇಷವಾಗಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸಬೇಕು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

 

ಜಿಲ್ಲಾ ಏಡ್ಸ್‌ ನಿಯಂತ್ರಣ ಅಧಿಕಾರಿ ಡಾ.ಮಹ್ಮದ ಗಫಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ನಿರ್ದೇಶನದಂತೆ ಇಂದು ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಏಕಕಾಲದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದೆ. ಕಲಬುರಗಿ ಜಿಲ್ಲೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂದು 21 ಕಡೆ ಈ ರಕ್ತದಾನ ಶಿಬಿರ ಆಯೋಜಿಸಿದ್ದು, ಸರ್ಕಾರಿ ಮತ್ತು ಖಾಸಗಿ ರಕ್ತನಿಧಿ ಕೇಂದ್ರಗಳು ಸಹಕಾರ‌ ನೀಡಿವೆ. 18 ವರ್ಷ ಮೇಲ್ಪಟ್ಟ 45 ಕೆ.ಜಿಕ್ಕಿಂತ ಹೆಚ್ಚಿನ ತೂಕ ಮತ್ತು 12.5 ಗ್ರಾಂ/ಡೆಸಿಲೀಟರ್ ಹಿಮೋಗ್ಲೋಬಿನ್ ಇರುವಂತ ವ್ಯಕ್ತಿ ರಕ್ತದಾನ ಮಾಡಬಹುದಾಗಿದೆ ಎಂದು ಹೇಳಿದರು.

 

*ರಕ್ತದಾನಿಗಳಿಗೆ ವಿಶೇಷ‌ ಸನ್ಮಾನ:*

 

53 ಬಾರಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 70 ವರ್ಷದ ರವೀಂದ್ರ‌ ಶಾಬಾದಿ, 28 ಬಾರಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ಕಾರಣೀಕರ್ತರಾದ ಕಲಬುರಗಿ ಕೆ.ಜಿ.ಐ.ಡಿ. ಇಲಾಖೆಯ ಅಧೀಕ್ಷಕ ಸಿದ್ದಲಿಂಗಯ್ಯ ಮಠಪತಿ ಮತ್ತು ಪ್ರತಿ ವರ್ಷ ಜೇವರ್ಗಿ ತಾಲೂಕಿನಲ್ಲಿ ರಕ್ತದಾನ ಕ್ಯಾಂಪ್‌ ಆಯೋಜನೆ ಮಾಡುತ್ತಾ ಇದೂವರೆಗೆ 25 ಬಾರಿ ರಕ್ತದಾನ ಮಾಡಿರುವ ಯುವಕ ನಾಗೇಶ ಓಂಕಾರ ಅವರಿಗೆ ಸಿ.ಇ.ಓ ರಾಹುಲ್ ಸಂಕನೂರ ಅವರು ವಿಶೇಷ ಸನ್ಮಾನ ಮಾಡಿ ಗೌರವ ಸಲ್ಲಿಸಿದರು. ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಸುಮಾರು 60 ಜನ ರಕ್ತದಾನ ಮಾಡಿದರು.

 

ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾದ ಡಾ.ಶುಭಾಂಗಿ ಡಿ.ಸಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಎಚ್.ಓ ಡಾ.ಸಿದ್ರಾಮಪ್ಪ ಪಾಟೀಲ್, ಪ್ರಾದೇಶಿಕ ಕೇಂದ್ರದ ಇ & ಸಿ. ವಿಭಾಗದ ಪ್ರಾಧ್ಯಾಪಕ ಬಸವರಾಜ ಗಾದಗೆ, ಭಾರತೀಯ ರೆಡ್ ಕ್ರಾಸ್ ಕಲಬುರಗಿ ಜಿಲ್ಲಾ ಶಾಖೆಯ ಸಭಾಪತಿ ಅರುಣಕುಮಾರ ಲೊಯಾ,

ವಿ.ಟಿ.ಯು. ಕಾರ್ಯಕ್ರಮ ಅಧಿಕಾರಿ

ಡಾ.ಶರಣಗೌಡ ಎಸ್. ಬಿರಾದಾರ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಅಮರದೀಪ ಪವಾರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ರವಿಕಾಂತಿ ಖ್ಯಾತನಳ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂತೋಷ ಆಲಗೂಡ್, ರಕ್ತ ನಿಧಿ ಮೆಡಿಕಲ್ ಓಫೀಸರ್ ಡಾ. ಜಗದೀಶ್ ಕಟ್ಟಿಮನಿ, ಜಿಲ್ಲಾ ತಂಬಾಕು ವ್ಯಸನ ಮುಕ್ತ ಸೈಕಾಲಜಿಸ್ಟ್ ಕೌನ್ಸಲರ್ ಮಂಜುನಾಥ ಕಂಬಾಳಿಮಠ, ಡಿ.ಈ.ಎಚ್ ಅಧಿಕಾರಿ ಶಶಿಕಾಂತ್, ಮಲ್ಲಪ್ಪ ಪೂಜಾರಿ ಸೇರಿದಂತೆ ವಿ.ಟಿ.ಯು ಪ್ರಾದೇಶಿಕ ಕೇಂದ್ರದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ಜಿಲ್ಲಾ ಏಡ್ಸ್ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಬಿರಾದಾರ್ ಸ್ವಾಗತಿಸಿ ನಿರೂಪಿಸಿದರು. ಅರ್ಚನಾ ವಂದಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಕಾಂಗ್ರೆಸ್ ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ: ರಾಜನಾಥ್ ಸಿಂಗ್ ಕಿಡಿ

ಕಲಬುರಗಿ: ಕಾಂಗ್ರೆಸ್ ಪಕ್ಷ ಅರಾಜಕತೆ ಸೃಷ್ಟಿಸುವ ಮೂಲಕ ಅಧಿಕಾರಕ್ಕೆ ಮರಳುವ ಪ್ರಯತ್ನ...

ಕಲಬುರಗಿ| ಹಿರಾಪೂರ ಸರ್ಕಲ್‌ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ; 750ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

ಕಲಬುರಗಿ: ನಗರದ ಹಿರಾಪೂರ ಸರ್ಕಲ್‌ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಸಂವಿಧಾನದ...

ಕಲಬುರಗಿ| 5 ಕೋಟಿ ರೂ.ವೆಚ್ಚದ ಮಾಡಿಯಾಳ-ದೇವಂತಗಿ ರಸ್ತೆ ಕಾಮಗಾರಿಗೆ ಶಾಸಕ ಬಿ.ಆರ್.ಪಾಟೀಲ್ ಚಾಲನೆ

ಕಲಬುರಗಿ: ಸಾರ್ವಜನಿಕ ಕೇಲಸ ನಿರ್ಮಾಣ ಮಾಡುವಾಗ ಯಾವುದೇ ಗುತ್ತಿಗೇದಾರರು ಜನಹಿತ ಗಮನದಲಿರಿಸಿ...

ಕಲಬುರಗಿ| ಶರಣಬಸವ ವಿವಿ ಕ್ರೀಡಾಕೂಟ: ಸೋಮೇಶ್ವರ, ರಮ್ಯಾ ಅತ್ಯಂತ ವೇಗದ ಓಟಗಾರರು

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ನಾಲ್ಕು ದಿನಗಳ ವಾರ್ಷಿಕ ಕ್ರೀಡಾಕೂಟದ 100 ಮೀಟರ್...