ಕಲಬುರಗಿ: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರವಾನಗಿ ರಹಿತ ಖಾಸಗಿ ಶಾಲೆಗಳು ಹಾಗೂ ಅನಧಿಕೃತ ಕೋಚಿಂಗ್ ಸೆಂಟರ್‍ಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲೋಕ ರಕ್ಷಕ ಭ್ರಷ್ಟಾಚಾರ ವಿರೋಧಿ ಮತ್ತು ಮಾನವ ಹಕ್ಕುಗಳು ಸಂಸ್ಥೆಯ ವತಿಯಿಂದ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ರಾಜ್ಯ ಸರಕಾರದಿಂದ ಅಧಿಕೃತವಾಗಿ ಪರವಾನಗಿ ಪಡೆಯದೆ ಕೆಲವು ಖಾಸಗಿ ಶಾಲೆಗಳು ಹಾಗೂ ಕೋಚಿಂಗ್ ಸೆಂಟರ್‍ಗಳು ಕಾರ್ಯನಿರ್ವಹಿಸುತ್ತಿವೆ. ಅನಧಿಕೃತ ಖಾಸಗಿ ಶಾಲೆಗಳು ಹಾಗೂ ಕೋಚಿಂಗ್ ಸೆಂಟರ್‍ಗಳು ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಮುಗ್ಧ ಪೆÇೀಷಕರನ್ನು ಸುಲಿಯುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಶಾಲೆಗಳು ಹಾಗೂ ಕೋಚಿಂಗ್ ಸೆಂಟರ್‍ಗಳನ್ನು ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ದಯಾನಂದ ಯಂಕಂಚಿ, ಶ್ರೀಶೈಲ್ ಸೊರಡೇ, ಸಾಜೀದ್ ಅಹ್ಮದ್, ಕಿರಣ್ ಕಾವೇಟಿ, ಪ್ರಮೋದ್, ಅಭಿಷೇಕ್ ಪಾಟೀಲ್, ದಿನೇಶ್ ಜೇವರ್ಗಿ, ಸಿದ್ದು ಸೋನಾರ್, ಸಂದೀಪ್ ರಾಠೋಡ್ ಇನ್ನಿತರರಿದ್ದರು.