ಕಲಬುರಗಿ| ಮನ್‌ ಕೀ ಬಾತ್ ನಲ್ಲಿ “ಕಲಬುರಗಿ ರೊಟ್ಟಿ” ಪ್ರಸ್ತಾಪಿಸಿದ ಪಿ.ಎಂ ಮೋದಿ.: ಕಲಬುರಗಿ ಸಿರಿಧಾನ್ಯದ ಶಕ್ತಿ ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ಸಹಕಾರಿ: ಬಿ.ಫೌಜಿಯಾ ತರನ್ನುಮ್

Date:

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರವಿವಾರ ತಮ್ಮ ಮನ್ ಕೀ ಬಾತ್ (ಮನದಾಳದ ಮಾತುಗಳಲ್ಲಿ) “ಕಲಬುರಗಿ ರೊಟ್ಟಿ” ಪ್ರಸ್ತಾಪಿಸಿರುವುದು ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯವೇ ಹೆಮ್ಮೆಪಡುವ ಸಂಗತಿಯಾಗಿದೆ ಎಂದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಇದು ಕಲಬುರಗಿ ರೊಟ್ಟಿ ಜಾಗತೀಕವಾಗಿ ಮಾರುಕಟ್ಟೆ ವಿಸ್ತರಣೆಗೂ ಸಹಕಾರಿಯಾಗಲಿದೆ ಎಂದಿದ್ದಾರೆ.

 

ಮಹಿಳಾ‌ ಸ್ವ-ಸಹಾಯ ಸಂಘದ ಸದಸ್ಯರು ಉತ್ಪಾದಕರ ಒಕ್ಕೂಟದ ಮೂಲಕ ಪ್ರತಿ ದಿನ 3,000 ರೊಟ್ಟಿ ಮಾರಾಟ ಮಾಡುತ್ತಿದ್ದು, ಸಿರಿಧಾನ್ಯ ಶಕ್ತಿ ಹಳ್ಳಿ ದಾಟಿ ಪಟ್ಟಣಕ್ಕೆ ಕಾಲಿಟ್ಟಿದೆ. ಬೆಂಗಳೂರುದಂತಹ ಮೆಟ್ರೋ ಸಿಟಿಯಲ್ಲಿ ವಿಶೇಷ ಕೌಂಟರ್ ನಲ್ಲಿ ರೊಟ್ಟಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದನ್ನು ನೋಡಿದರೆ ಇದರ ಬೇಡಿಕೆ ಅರಿವಾಗುತ್ತದೆ. ಇದರಿಂದಾಗಿ ಸಹಜವಾಗಿಯೆ ಮಹಿಳೆಯರ ಅದಾಯ ಉತ್ಪನ್ನ ಹೆಚ್ಚಳಗೊಳ್ಳುತ್ತಿದೆ ಎಂದು ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಅವರು ಹೇಳಿದ್ದರು.

 

ಶೇ.90ರಷ್ಟು ಮಳೆಯಾಶ್ರಿತ ಬಿತ್ತನೆ ಪ್ರದೇಶ ಹೊಂದಿರುವ ಕಲಬುರಗಿ ಜಿಲ್ಲೆಯ ಪ್ರಮುಖ ಬೆಳೆ “ಜೋಳ”. ಜೋಳದ ರೊಟ್ಟಿ ಜಿಲ್ಲೆಯ ಮೂಲ ಆಹಾರ. ಜೋಳದ ರೊಟ್ಟಿಯಂತೆ ಸಜ್ಜೆ ರೊಟ್ಟಿ ಸಹ ಬಲುರುಚಿ. ಬೇರೆಡೆಯಿಂದ ಕಲಬುರಗಿಗೆ ಬರುವವರು ಕಲಬುರಗಿ ರೊಟ್ಟಿ ರುಚಿ ನೋಡದೆ ಹೋದವರಲ್ಲ. ವಿಶೇಷವಾಗಿ ಚಿತ್ತಾಪುರ ತಾಲ್ಲೂಕಿನಲ್ಲಿ ಬೆಳೆಯುವ ಬಿಳಿ ಜೋಳ ಮುತ್ತಿನಂತಿದ್ದು, ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಸಿದ್ಧವಾಗಿದೆ ಎಂದು ಡಿ.ಸಿ. ಫೌಜಿಯಾ ಅವರು ತಿಳಿಸಿದ್ದಾರೆ.

 

ಉತ್ತಮ ಆರೋಗ್ಯಕ್ಕಾಗಿ ಮತ್ತು ಸಿರಿಧ್ಯಾನ ಶಕ್ತಿ ಪಸರಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತವು ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಹಾಗೂ ಇತರೆ ಇಲಾಖೆಗಳ ವಿವಿಧ ಯೋಜನೆಗಳ ಸಹಾಯಧನದಿಂದ ಈವರೆಗೆ ಜಿಲ್ಲೆಯಲ್ಲಿ 100ಕ್ಕೂ ಅಧಿಕ ರೊಟ್ಟಿ ಮಾಡುವ ಯಂತ್ರಗಳನ್ನು ನೀಡಿ ಮಹಿಳೆಯರಿಗೆ ಮತ್ತು ಮಹಿಳಾ ಸ್ವಸಹಾಯ ಸಂಘದವರಿಗೆ ನೀಡಲಾಗಿದೆ. ಕೃಷಿ ಇಲಾಖೆಯು ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ 5 ಲಕ್ಷ ರೂ. ಮತ್ತು ಸಕ್ಕರೆ ಕಾರ್ಖಾನೆಗಳಿಂದ ಸಿ.ಎಸ್.ಆರ್ ನಿಧಿಯಡಿ 6 ಲಕ್ಷ ರೂ. ಅನುದಾನ ಒದಗಿಸಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

 

ಪರಿಣಾಮ ಪ್ರತಿ ದಿನ ಮಹಿಳೆಯರು ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದು, ಮಾಸಿಕ 15-20 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಜೋಳಕ್ಕೆ ಬೇಡಿಕೆ ಹೆಚ್ಚಾಗಿ ರೈತರ ಆದಾಯ ದ್ವಿಗುಣವಾಗಲಿದೆ ಎಂದರು.

 

ಇನ್ನು ಕಲಬುರಗಿ ರೊಟ್ಟಿ ಅಧಿಕ ಮಾರಾಟಕ್ಕೆ ಕಲಬುರಗಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ “ಕಲಬುರಗಿ ರೊಟ್ಟಿ” ಎನ್ನುವ ಬ್ರ್ಯಾಂಡ್ ಹೆಸರಿನೊಂದಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಕಲಬುರಗಿ ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿ ಅದರ ಮೂಲಕ ರೊಟ್ಟಿ ಮಾರಾಟಕ್ಕೆ ಪ್ರೋತ್ಸಾಹಿಸಲಾಗಿದೆ. ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹೈದ್ರಾಬಾದ, ಬೀದರ, ಪುಣೆ, ಮುಂಬೈ, ನವದೆಹಲಿಯಲ್ಲಿಯೂ ಕೂಡಾ ಮಾರಾಟ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ. ಈಗಾಗಲೆ ಅಮೆಜಾನ್, ಜೊಮಾಟೋ ನಲ್ಲಿಯೂ ಕಲಬುರಗಿ ರೊಟ್ಟಿ ಸಿಗುತ್ತಿದೆ. ಗ್ರಾಹಕರು www.kalaburagirotti.com ಮೂಲಕ ನೋಂದಣಿ ಮಾಡಿಸಿ ಡೋರ ಡೆಲಿವರಿ ಸೇವೆ ಪಡೆಯಬಹುದಾಗಿದೆ.

“ಕಲಬುರಗಿ ರೊಟ್ಟಿ” ಯಲ್ಲಿರುವ ಪೋಷಕಾಂಶಗಳನ್ನು ಪರೀಕ್ಷೆ ಮಾಡಿಸಿ ಜಿ.ಎಸ್.ಟಿ, ಪ್ಯಾನ್ ನೊಂದಣಿ ಹಾಗೂ ಎಪ್.ಎಸ್.ಎಸ್.ಎ.ಐ ನಿಂದ ಆಹಾರ ಸುರಕ್ಷತೆ ಗುಣಮಟ್ಟದ ಪ್ರಮಾಣ ಪತ್ರಗಳನ್ನು ಪಡೆಯುವ ಮೂಲಕ ಗುಣಮಟ್ಟ ಕಾಪಾಡಿಕೊಳ್ಳಲಾಗಿದೆ. ಪ್ರಸ್ತುತ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿರುವ ಕಲಬುರಗಿ ರೊಟ್ಟಿ ಹೊರ ದೇಶಕ್ಕು ಸರಬರಾಜು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ “ಕಲಬುರಗಿ ರೊಟ್ಟಿ” ಜಿಲ್ಲೆಯಲ್ಲಿ ಕನಿಷ್ಟ 1,000 ಮಹಿಳೆಯರಿಗೆ ನೇರ ಉದ್ಯೋಗ ಹಾಗೂ ಸಾವಿರಾರು ಜನರಿಗೆ ಪರೋಕ್ಷವಾಗಿ ಉದ್ಯೋಗಾವಕಾಶ ದೊರೆಯಲು ಕಾರಣವಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ಶಿಲ್ಪಕಲಾವಿದ ಮಹಾದೇವಪ್ಪ ಶಿಲ್ಪಿ ಇನ್ನಿಲ್ಲ 

ಕಲಬುರಗಿ: ಕರ್ನಾಟಕ ರಾಜ್ಯ ಶಿಲ್ಪಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗ...

ಕಲಬುರಗಿ| ಡಾ.ಎಸ್.ಎಸ್.ಗುಬ್ಬಿ ಅವರ `ಹೃದಯವಂತ’ ಅಭಿನಂದನಾ ಗ್ರಂಥ ಬಿಡುಗಡೆ

ಕಲಬುರಗಿ: ನೊಂದವರ, ಬೆಂದವರ ಬದುಕಿನಲ್ಲಿ ಭರವಸೆಯ ಬೆಳಕು ನೀಡುವ ಮೂಲಕ ವೈದ್ಯಕೀಯ...

ಕಲಬುರಗಿ| ಆಳಂದ್‌ನಲ್ಲಿ ಶಾಸಕ ಪಾಟೀಲ್, ಗುತ್ತೇದಾರ್ ಭ್ರಷ್ಟಾಚಾರ, ಅಡ್ಜಸ್ಟ್ಮೆಂಟ್ ರಾಜಕಾರಣ: ಮಹೇಶ್ವರಿ ವಾಲಿ 

ಕಲಬುರಗಿ: ಆಳಂದ ತಾಲೂಕಿನ ಆರು ಗ್ರಾಮ ಪಂಚಾಯಿತಿಗಳಲ್ಲಿ ರಾಜೀವ್ ಗಾಂಧಿ ವಸತಿ...

ಕಲಬುರಗಿ| ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ

ಕಲಬುರಗಿ: ಚಿಂಚೋಳಿ ತಾಲೂಕಿನ ಸುಲೇಪೆಟ್ ಪಟ್ಟಣದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ...