ಕಲಬುರಗಿ: ಜೂನ್ 5 ರಂದು ಕೊಲೆ ಫಿರೋಜಾಬಾದ ದರ್ಗಾದ ಬಳಿ ಆರೋಪಿ ನಜಮೂದ್ದೀನ್ ಬಾವರ್ಚಿಯನ್ನ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಚ್ಚಿಬೀಳಿಸಿದೆ. ಕೊಲೆಗೂ ಮುನ್ನ ಹಂತಕರು ನಜಮೂದ್ದೀನ್ ಗೆ ಅಡ್ಡಗಟ್ಟುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಜೇವರ್ಗಿ ಕಡೆ ತೆರಳುತ್ತಿದ್ದ ನಜಮೂದ್ದೀನ್ ಕಾರನ್ನು, ಇನ್ನೋವಾ ಕಾರಿನಲ್ಲಿ ನಾಲ್ಕೈದು ಜನ ಹಂತಕರು ಫಾಲೋ ಮಾಡಿಕೊಂಡು ಹೋಗಿದ್ದಾರೆ, ಹೊರವಲಯದ ಸೆಂಟ್ರಲ್ ಜೈಲ್ ಸಮೀಪದಲ್ಲೇ ತಲ್ವಾರ್ ಹಿಡಿದುಕೊಂಡು ನಜಮೊದ್ದಿನ್ ಕಾರ್ ಮೇಲೆ ದಾಳಿ ನಡೆಸಿದ್ದಾರೆ. ಸೆಂಟ್ರಲ್ ಜೈಲ್ ಬಳಿಯಿಂದ ತಪ್ಪಿಸಿಕೊಂಡು ಜೇವರ್ಗಿ ಕಡೆ ತೆರಳಿದ್ದ ನಜಮೊದ್ದಿನಗೆ, ಮುಂದೆ ಫಿರೋಜಬಾದ್ ದರ್ಗಾದ ಬಳಿ ಆತನ ಕಾರ್ ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.
ನಡು ರಸ್ತೆಯಲ್ಲೆ ಮಾರಾಕಾಸ್ತ್ರಗಳಿಂದ ಹಿಡಿದು ಅಟ್ಯಾಕ್ ಮಾಡುತ್ತಿರುವ ಸಿಸಿಟಿವಿ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಕಳೆದ ಡಿಸೆಂಬರ್ ನಲ್ಲಿ ಕೊಲೆಯಾದ ರೌಡಿ ಶೀಟರ್ ಖಲೀಲ್ ಸಹೋದರರು ಮತ್ತು ಅವರ ಗ್ಯಾಂಗ್ ನಿಂದ ನಜಮೊದ್ದಿನ್ ಕೊಲೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.