ಕಲಬುರಗಿ| ಅಕ್ರಮ ಗಾಂಜಾ ಮಾರಾಟ; 48 ಸಾವಿರ ಮೌಲ್ಯದ 3 ಕೆಜಿ ಗಾಂಜಾ ಜಪ್ತಿ

Date:

Share post:

ಕಲಬುರಗಿ: ಮಹಾರಾಷ್ಟ್ರದ ಮೂಲದಿಂದ ಅಕ್ರಮ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ, ಅವರ ಬಳಿ 48 ಸಾವಿರ ಮೌಲ್ಯದ 3ಕೆಜಿ ಗಾಂಜಾ, 4 ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಬ್ರಹ್ಮಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಳಂದ ತಾಲೂಕಿನ ತಡಕಲ್ ಗ್ರಾಮದ ಶ್ರೀಕಾಂತ್ ಮಲ್ಲಪ್ಪ ಸಿರಸೆ, ಮಹಗಾoವ್ ಕ್ರಾಸ್ ಸಮೀಪದ ನಿವಾಸಿ ರೋಶನ್ ಪಂಡಿತ್, ಕಲಬುರಗಿ ನಗರದ ಗೊಲ್ಲರಗಲ್ಲಿ ನಿವಾಸಿ ದುರ್ಗೆಶ್ ಶಂಕರ್ ಮತ್ತು ತಡಕಲ್ ಗ್ರಾಮದ ಸಿದ್ಧರಾಮ ಪೂಜಾರಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ಉಮ್ಮರ್ಗಾ ದ ಕುರಂದವಾಡಿಯ ಬೀಶನ್ ಬಲಭೀಮ್ ಚನಕಾಪುರೆ ಎಂಬಾತನ ಬಳಿ ಖರೀದಿ ಮಾಡಿಕೊಂಡು ನಗರದ ವಿವಿಧೆಡೆ ಅಕ್ರಮ ಗಂಜಾವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಅಕ್ರಮ ಮಾರಾಟ ಮಾಡುತ್ತಿರುವುದನ್ನು ನಿಖರ ಮಾಹಿತಿ ಪಡೆದ ಬ್ರಹ್ಮಪುರ ಪೊಲೀಸರು, 48 ಸಾವಿರ ಮೌಲ್ಯದ 3ಕೆಜಿ ಗಾಂಜಾ, 4 ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...