ಬೆಂಗಳೂರು-ಬೀದರ್ ವಿಶೇಷ ರೈಲು; ಕಲಬುರಗಿ, ಶಹಾಬಾದ್ ನಲ್ಲಿ ನಿಲುಗಡೆ

Date:

Share post:

ಕಲಬುರಗಿ: ಕೇಂದ್ರ ರೈಲ್ವೆ ಸೋಲಾಪುರ ವಿಭಾಗದಿಂದ ಕಲಬುರಗಿ ಮತ್ತು ಶಹಾಬಾದ್ ರೈಲ್ವೆ ನಿಲ್ದಾಣಗಳಲ್ಲಿ SMVT ಬೆಂಗಳೂರು-ಬೀದರ್ ವಿಶೇಷ ರೈಲನ್ನು ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸೋಲಾಪುರ ವಿಭಾಗದ ಕೇಂದ್ರ ರೈಲ್ವೆಯ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

      ಈ ವಿಶೇಷ ರೈಲು  SMVT ಬೆಂಗಳೂರು-ಬೀದರ್ (6 ಟ್ರಿಪ್‍ಗಳು) 06589 ವಿಶೇಷ ರೈಲುಗಳು SMVT ಬೆಂಗಳೂರಿನಿಂದ ಮೇ 22, ಮೇ 24 ಹಾಗೂ ಮೇ 26 ರಂದು ರಾತ್ರಿ 21:15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 10.15 ಕ್ಕೆ ಬೀದರಿಗೆ ತಲುಪಲಿವೆ.  ಅದೇ 06590 ವಿಶೇಷ ರೈಲು (3 ಟ್ರಿಪ್‍ಗಳು) ಬೀದರ್‍ನಿಂದ ಮೇ 23, ಮೇ 25 ಮತ್ತು ಮೇ 27 ರಂದು ಮಧ್ಯಾಹ್ನ 12 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 3 ಗಂಟೆಗೆ SMVT ಬೆಂಗಳೂರಿಗೆ ಆಗಮಿಸಲಿದೆ.

     ಈ ವಿಶೇಷ ರೈಲು ಹುಮನಾಬಾದ್, ಕಲಬುರಗಿ, ಶಹಾಬಾದ್, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯ ರಸ್ತೆ, ಅದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕ ಮೂಲಕ ಸಂಚರಿಸಲಿದೆ.

        ರೈಲು ಟಿಕೇಟ್ ಬುಕಿಂಗ್ ಮತ್ತಿತರ ಹೆಚ್ಚಿನ ಮಾಹಿತಿಯನ್ನು  www.irctc.co.in  ವೆಬ್‍ಸೈಟ್ ಹಾಗೂ  UTS  ವ್ಯವಸ್ಥೆಯ ಮೂಲಕ, ಈ ವಿಶೇಷ ರೈಲುಗಳ ಸಮಯ ಮತ್ತು ನಿಲುಗಡೆಗಳಿಗಾಗಿ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in  ಗೆ ಭೇಟಿ ನೀಡಿ ಅಥವಾ NTES ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಂಡು ಪಡೆಯಬಹುದಾಗಿದೆ ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...