ಕಲಬುರಗಿ: ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚರ್ಮ ಕ್ಯಾನ್ಸರ್ ಜಾಗೃತಿ ಶಿಬಿರ

Date:

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಚರ್ಮರೋಗ ವಿಭಾಗದ ಅಡಿಯಲ್ಲಿ ಮೇ 4 ಚರ್ಮ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಉಚಿತ ಚರ್ಮರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು.

ಆಸ್ಪತ್ರೆಯ ಹೊರ ರೋಗಿಗಳ‌ ವಿಭಾಗ 6 ರಲ್ಲಿ ನಡೆದ ಈ ಶಿಬಿರದಲ್ಲಿ 150 ಕ್ಕಿಂತಲೂ ಹೆಚ್ಚು ರೋಗಿಗಳು ಭಾಗವಹಿಸಿ ಈ ಶಿಬಿರದ ಲಾಭ ಪಡೆದುಕೊಂಡರು. ಬಸವೇಶ್ವರ ಆಸ್ಪತ್ರೇಯ ಚರ್ಮ ರೋಗದ ತಜ್ಞ ವೈದ್ಯರು ತಂಡ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ ಅಂಬರೀಷ್ ಎಸ್ ಬಾಡದ ಅವರು ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ಚರ್ಮದ ಕ್ಯಾನ್ಸರ್ ಸೇರಿದಂತೆ ವಿವಿಧ ಚರ್ಮರೋಗಗಳ ತಪಾಸಣೆ ಮಾಡಿ ಚರ್ಮ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು. ಚರ್ಮ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣ ಪಡಿಸಬಹುದು ಎಂದು ರೋಗಿಗಳಿಗೆ ತಿಳಿಸಿದರು.

ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ಉಚಿತ ಡರ್ಮೋಸ್ಕೋಪಿ ಪರೀಕ್ಷೆ , ಸಂಭಂದಿಸಿದ ರಕ್ತ ತಪಾಸಣೆ, ಜೋತೆಗೆ ಅಗತ್ಯ ಔಷಧಿಗಳು ಹಾಗೂ ಬಿಸಿಲಿನಿಂದ ಚರ್ಮ ಕಾಪಾಡಿಕೊಳ್ಳಲು ಸನ್ ಸ್ಕ್ರೀನ್ ಲೋಷನ್ ಗಳನ್ನು ಉಚಿತವಾಗಿ ವಿತರಿಸಲಾಯಿತು

ಈ ಶಿಬಿರದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಆಸ್ಪತ್ರೇಯ ಸಂಚಾಲಕರಾದ ಡಾ ಕಿರಣ ದೇಶಮುಖ್, ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರಾದ ಡಾ ಶರಣಬಸಪ್ಪ ಹರವಾಳ,ಆಡಳಿತ ಮಂಡಳಿ ಸದಸ್ಯರಾದ ಡಾ ನಾಗೇಂದ್ರ ಮಂಠಾಳೆ, ಕಾಲೇಜಿನ ಡೀನ್ ಡಾ ಶರಣಗೌಡ ಪಾಟೀಲ, ಉಪ ಡೀನ್ ಡಾ ವಿಜಯಕುಮಾರ ಕಪ್ಪಿಕೇರಿ, ವೈದ್ಯಕೀಯ ಅಧೀಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ,ಆಡಳಿತಾಧಿಕಾರಿ ಡಾ ಎಂ ಆರ್ ಪೂಜಾರಿ ಉಪಸ್ಥಿತರಿದ್ದರ. ಬಸವೇಶ್ವರ ಆಸ್ಪತ್ರೆಯಲ್ಲಿನ ಎಲ್ಲ ವಿಭಾಗಗಳು ಇಂತಹ ಉಚಿತ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತದ್ದು ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭೀ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳ್ಳಿ ,ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ಖ್ವಾಜಾ ಬಂದಾ ನವಾಜ್ ದರ್ಗಾದ 622ನೇ ಅದ್ಧೂರಿ ಸಂದಲ್ ಮೆರವಣಿಗೆ

ಕಲಬುರಗಿ, ಮೇ 3: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರ ಹಾಗೂ...

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...

ಕಲಬುರಗಿ: 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಗಣೇಶ್ ಬೋಸ್ಲೆ ಫಸ್ಟ್ ರ್ಯಾಂಕ್

ಕಲಬುರಗಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿ ತಾಲೂಕಿನ...

ಕಲಬುರಗಿ: ಗುಂಡಿನ ದಾಳಿ; ವ್ಯಕ್ತಿಯ ಭೀಕರ ಕೊಲೆ

ಕಲಬುರಗಿ: ಬಲರಾಮ ಚೌಕ್ ನಿಂದ ವಾಡಿ ಪಟ್ಟಣಕ್ಕೆ ಸ್ಕೂಟಿ ಮೇಲೆ ಹೋಗುತ್ತಿದ್ದ...