ಕಲಬುರಗಿ: ಚಾಂದ ಬೀ ಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೆಯ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.
ಆರಂಭದಲ್ಲಿ ಉಪನ್ಯಾಸಕ ಡಾ. ಶರಬಯ್ಯ ಸ್ವಾಮಿ ಅವರು ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಎಂ. ಡಿ. ಅಶ್ಫಾಕ್ ಚುಲಬುಲ್ ಅವರು ಉಪಸ್ಥಿತರಿದ್ದು, ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರುಕ್ಸಿಂದಾ ಹೀನಾ ಅಕ್ಬರಿ ಅವರು ವಹಿಸಿದ್ದರು. ಅವರು ಸಂವಿಧಾನದ ಮೌಲ್ಯಗಳು ಮತ್ತು ನಾಗರಿಕರ ಕರ್ತವ್ಯಗಳ ಕುರಿತು ಅಧ್ಯಕ್ಷೀಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಕು. ಲಾಲಬಿ ಹಾಗೂ ಕು. ಆಫೀಯಾ ಅವರು ರಾಷ್ಟ್ರಭಕ್ತಿ ಮತ್ತು ಸಂವಿಧಾನ ಮೌಲ್ಯಗಳ ಕುರಿತು ಅರ್ಥಪೂರ್ಣ ಭಾಷಣಗಳನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಕು. ರಕ್ಷಿತಾ ಅವರು ಸಮರ್ಥವಾಗಿ ನಿರ್ವಹಿಸಿದರು.
ಈ ವೇಳೆ ಉಪನ್ಯಾಸಕರಾದ ಡಾ. ಶರಬಯ್ಯ ಸ್ವಾಮಿ, ಡಾ. ಮಲ್ಲಿಕಾರ್ಜುನ ಡೊಂಣ್ಣೂರ್ ಹಾಗೂ ಮಲಿಕ್ ರೆಹಮಾನ್ ಅತ್ತರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೇರಣಾದಾಯಕವಾಗಿ ಮಾತನಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ಸಮ್ಮಿನಾ ತಹಸೀನ್ ಅವರು ನೆರವೇರಿಸಿದರು.
ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸಂವಿಧಾನ ಜಾಗೃತಿ ಹಾಗೂ ನಾಗರಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಯಿತು.


