ಕಲಬುರಗಿ| ದೀಪಗಳಿಂದ ಝಗಮಗಿಸಿದ ಕನ್ನಡ ಭವನ; ಜಿಲ್ಲಾ ಕಸಾಪದಿಂದ ಕನ್ನಡ ದೀಪೋತ್ಸವ

Date:

Share post:

ಕಲಬುರಗಿ: ದೀಪದಿಂದ ದೀಪ ಹಚ್ಚಿ ಮನವ ಬೆಳಗಿ, ಕತ್ತಲೆ ಅಳಿಸಿ ಬೆಳಕು ಹೊತ್ತಿಸಿ ಎಂಬ ಕವಿವಾಣಿಯಂತೆ ಇಲ್ಲಿಯ ಕನ್ನಡ ಭವನ ದೀಪೋತ್ಸವ ಬೆಳಕಿನಲ್ಲಿ ಇಡೀ ಕನ್ನಡ ಭವನ ಝಗಮಗಿಸುವಂತಿತ್ತು. ಕನ್ನಡ ಭವನದ ಅಂಗಳದಲ್ಲಿ ಕತ್ತಲೆ ಸೀಳಿ ಹೊತ್ತಿದ ದೀಪಗಳು ಬಣ್ಣಗಳ ಚಿತ್ತಾರ ಮೂಡಿಸಿದವು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಮಂಗಳವಾರ ಏರ್ಪಡಿಸಿದ ಕನ್ನಡ ದೀಪೋತ್ಸವ ಕಾರ್ಯಕ್ರಮ ಭಾಗವಹಿಸಿದ್ದವರ ಮನಸೂರೆಗೊಂಡಿತು.

ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸ್ತಿçÃರೋಗ ತಜ್ಞೆ ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ, ನಮ್ಮ ಮನ ಬೆಳಕಿನ ಹೊನಲಲ್ಲಿ ಕಂಗೊಳಿಸಲಿ. ಬದುಕು ಹಸನಾಗಲಿ. ಕನ್ನಡ ನಿತ್ಯೋತ್ಸವವಾಗಲಿ. ಕನ್ನಡ ಕಟ್ಟುವ ಕಾರ್ಯದ ಮುಂಚೂಣಿಯಲ್ಲಿ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ. ಕನ್ನಡವೇ ಸತ್ಯ- ಕನ್ನಡವೇ ನಿತ್ಯ ನಮ್ಮ ಬದುಕಿನ ಮಂತ್ರವಾಗಬೇಕಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿಶಿಷ್ಟ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪರಿಷತ್ತು ಜನರ ವಿಶೇಷ ಗಮ,ನ ಸೆಳೆಯುತ್ತಿದೆ. ಕನ್ನಡತೋತ್ಸವ ಪ್ರತಿ ನಿತ್ಯವೂ ಆಚರಿಸುತ್ತಿದ್ದೇವೆ ಎಂದ ಅವರು, ಕನ್ನಡ ನಮ್ಮ ಬದುಕಾಗಬೇಕು-ಉಸಿರಾಗಬೇಕಾಗಿದೆ ಎಂದರು.

ಪಾಲಿಕೆಯ ಉಪ ಮಹಾಪೌರರಾದ ತೃಪ್ತಿ ಲಾಖೆ, ಸಮಾಜ ಸೇವಕಿ ಕ್ಷಮಾ ಶಿವರಾಜ ಇಂಗಿನಶೆಟ್ಟಿ ಮಾತನಾಡಿದರು. ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಮಾತನಾಡಿದರು.

ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ, ದಿನೇಶ ಮದಕರಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂಧಿ, ಚಂದ್ರಕಾAತ ಸೂರನ್, ಹೆಚ್.ಎಸ್. ಬರಗಾಲಿ, ಶಿವಕುಮಾರ ವರ್ಮಾ, ಜಿಲ್ಲಾ ಕಸಾಪ ದ ಮಹಿಳಾ ಪ್ರತಿನಿಧಿಗಳಾದ ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ, ವೆಂಕುಬಾಯಿ ರಜಪೂತ, ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೇಣುಕಾ ಡಾಂಗೆ, ಪೂಜಾ ಬಂಕಲಗಿ, ವಿಶಾಲಕ್ಷಿ ಮಾಯಣ್ಣವರ್, ಕವಿತ ಕವಳೆ, ಭಾಗ್ಯಶ್ರೀ ಮರಗೋಳ, ರವಿಕುಮಾರ ಶಹಾಪೂರಕರ್, ಗೀತಾ ಪಾಟೀಲ, ಶ್ವೇತಾ ಶೆಟ್ಟಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

Share post:

spot_imgspot_img

Popular

More like this
Related

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...

ಕಲಬುರಗಿ| ಐರಾವತ – ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ; ಇಬ್ಬರು ಚಾಲಕರ ಮೃತ್ಯು

ಕಲಬುರಗಿ: ಐರಾವತ ಬಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ ಸಂಭವಿಸಿ...

ಕಲಬುರಗಿ–ಮೈಸೂರು, ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ ಬಸ್ ಕಾರ್ಯಾಚರಣೆಗೆ ಚಾಲನೆ

ಮೂರು ತಿಂಗಳಲ್ಲಿ‌ 120 ಹೊಸ ಬಸ್ ಸೇರ್ಪಡೆ: ಅರುಣಕುಮಾರ ಪಾಟೀಲ ಕಲಬುರಗಿ: ಕಲ್ಯಾಣ...