ಕಲಬುರಗಿ| ಶರಣ ಬಸವೇಶ್ವರ ಕಾಲೇಜಿನಲ್ಲಿ ಶಿಕ್ಷಣ ದಿನಾಚರಣೆ

Date:

Share post:

ಕಲಬುರಗಿ: ಇಲ್ಲಿನ ಶರಣ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸಲಾಯಿತು.

ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜೀವನವು ರಾಷ್ಟ್ರೀಯ ಶಿಕ್ಷಣ ಸ್ವಾತಂತ್ರ್ಯ ಹೋರಾಟ ಪತ್ರಕರ್ತ ರಾಜಕಾರಣಿ ಶಿಕ್ಷಣ ತಜ್ಞರಾಗಿ ಪಾತ್ರವಹಿಸಿತು, ಅವರು ಸೌದಿ ಅರೇಬಿಯಾದ ಮೆಕ್ಕದಲ್ಲಿ 11 ನವೆಂಬರ್ 1888 ಜನಿಸಿದರು, ಉರ್ದು ಪರ್ಷಿಯನ್ ಭಾಷೆಯಲ್ಲಿ ವಿದ್ವಾಂಸರಾಗಿ ಬೆಳೆದರು ಅವರ ತಂದೆ ಅರಬಿಕ್ ವಿದ್ವಾಂಸರು ಮನೆಯಲ್ಲಿ ಅರೇಬಿಕ್ ಪರಿಚಯನ್ ಗಣಿತ ತತ್ವಶಾಸ್ತ್ರ ವಿಜ್ಞಾನ ಇತಿಹಾಸ ಇಂಗ್ಲಿಷ್ ಶಿಕ್ಷಣವನ್ನು ತಂದೆಯಿಂದ ದಾರಿಯೆಗೆ ತೆಗೆದುಕೊಂಡು ಸಮಾಜಕ್ಕಾಗಿ ಮನುಕುಲದ ಒಳಿತಿಗಾಗಿ ಪ್ರಜ್ಞಾವಂತ ಮಾನವ ಸಂಪನ್ಮೂಲವನ್ನು ಬೆಳೆಸುವುದರಲ್ಲಿ ತಮ್ಮ ಬದುಕನ್ನು ರಾಷ್ಟ್ರದ ಹೋರಾಟಕ್ಕಾಗಿ ಮನುಕುಲದ ಶಿಕ್ಷಣಕ್ಕಾಗಿ ಸಮರ್ಪಿಸಿಕೊಂಡ ಮಹಾಂತತ್ವಜ್ಞಾನಿ ಶಿಕ್ಷಣ ಮಂತ್ರಿ ರಾಜಕೀಯ ನಿಪುಣರು ಮೌಲನ ಅಬ್ದುಲ್ ಕಲಾಂ ಆಜಾದ್ ಇಂತಹ ಮಹಾನ್ ವ್ಯಕ್ತಿಗಳ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಆದರ್ಶ ಪ್ರಾಯ ವಾದಂತಹ ಇವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯ ಡಾ. ಕುಣಿಚಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಯು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಸೃಜನಶೀಲ ವ್ಯಕ್ತಿಯಾಗಿ ಹೊರಹೊಮ್ಮಬೇಕು ಜೀವನದಲ್ಲಿ ನಿಜವಾದ ಸಾಧನೆಗಳಿಗೆ ಸಾಗಬೇಕು ನಮ್ಮ ಜ್ಞಾನ ರಾಷ್ಟ್ರ ಮನುಕುಲಕ್ಕಾಗಿ ಸಮರ್ಪಣೆ ಯಾಗಬೇಕು ಶಿಕ್ಷಣ ಕೇವಲ ಪದವಿ ಪತ್ರ ಅಂಕಗಳಿಗೆ ಸೀಮಿತವಾಗದೆ ಅಪಾರವಾದಂತಹ ಜ್ಞಾನ ವೃದ್ಧಿ ಆಗಬೇಕು ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಗುರಿ ಇರಬೇಕು ಎಂದರು.

 

ಬದುಕಿನಲ್ಲಿ ಸಮಯ ಪರಿಪಾಲನೆ ಬಹಳ ಮುಖ್ಯವಾಗಿದೆ ಜೀವನದ ಹಂತ ಹಂತವಾಗಿ ವಯಸ್ಸಿಗೆ ಅನುಸಾರವಾಗಿ ತರಗತಿಗೆ ಅನುಸಾರವಾಗಿ ಜ್ಞಾನ ಹೊಂದಿರಬೇಕು ಓದುವ ಹಂತದಲ್ಲಿ ನಮಗೆ ಸಿಕ್ಕ ಸೌಲಭ್ಯಗಳನ್ನು ಶ್ರದ್ದಾಪೂರ್ವಕವಾಗಿ ಸ್ವಚ್ಛಂದ ಮನಸ್ಸಿನಿಂದ ಪ್ರಾಮಾಣಿಕವಾಗಿ ಅವುಗಳನ್ನು ಬಳಸಿಕೊಳ್ಳಬೇಕು ಅಂದಾಗ ಶಿಕ್ಷಣದಿಂದ ಅರಿವು ಜ್ಞಾನ ಸಮಾಜದಲ್ಲಿ ಗೌರವ ಪ್ರಶಸ್ತಿ ಪುರಸ್ಕಾರ ಸುಂದರ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

 

ನಂತರ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಬಿ ರಾಮಕೃಷ್ಣ ರೆಡ್ಡಿ ಮಾತನಾಡುತ್ತಾ, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರು ಹುಟ್ಟಿ ಇಂದಿಗೆ 137 ದಿನಗಳನ್ನು ಕಳೆದರೂ ಅವರು ನೆನಪಿಗಾಗಿ ಇಂದು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ಭಾರತದ ಪ್ರಥಮ ಶಿಕ್ಷಣ ಸಚಿವರಾಗಿ ರಾಜಕೀಯ ನಿಪುಣರಾಗಿ ಸ್ವಾತಂತ್ರ ಹೋರಾಟಗಾರರಾಗಿ ಸಮಾಜ ಸೇವಕರಾಗಿ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಿಸಿಕೊಂಡ ಮೇಲೆ ವ್ಯಕ್ತಿತ್ವ ಮೌಲನ ಅಬ್ದುಲ್ ಕಲಾಂ ಅಜಾದ್ ಅವರಿಗೆ ಸಲ್ಲುತ್ತದೆ, ಇಂತಹ ವ್ಯಕ್ತಿತ್ವ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಬ್ಬ ಸಾಹಿತಿ ಅಬ್ಬ ಕಲಾವಿದ ಒಬ್ಬ ಸಮಾಜ ಸೇವಕ ಒಬ್ಬ ಹೋರಾಟಗಾರ ದೇಶಕ್ಕಾಗಿ ಸಮಾಜಕ್ಕಾಗಿ ಅರ್ಪಣಾ ಮಾನವ ಭಾವನೆಯನ್ನು ಬೆಳೆಸಿಕೊಳ್ಳುವಂತಹ ಯುವಕರು ಇಂದು ದೇಶಕ್ಕೆ ಮಾದರಿಯಾಗಿ ಬೆಳೆಯಬೇಕು ಎಂದು ಹೇಳಿದರು.

ಇದೇ ವೇಳೆಯಲ್ಲಿ ಶ್ರೀನಿವಾಸ್ ಕುಲಕರ್ಣಿ, ಸ್ವರೂಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಮಾನವ ಹಕ್ಕುಗಳ ಸಂರಕ್ಷಣೆ ಅಗತ್ಯ: ಕರುಣಾ ಪಾಟೀಲ

ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಜನರು ಯಂತ್ರಗಳಿಗೆ ತಮ್ಮ ಸಮಯ ಮೀಸಲಿಟ್ಟಿದ್ದಾರೆ,...

ಕಲಬುರಗಿ| ಭೀಕರ ಅಪಘಾತ; ಸ್ಥಳದಲ್ಲೇ ಮೂವರ ಸಾವು; ಮೂವರು ಗಂಭೀರ

ಕಲಬುರಗಿ: ಜೀಪ್ ಹಾಗೂ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ...

ಕಲಬುರಗಿ| ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬಿನ್ ಖರೀದಿ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ...

ಕಲಬುರಗಿ| ಅಂಬೇಡ್ಕರ್ ರವರನ್ನು ನಿಜವಾಗಿಯೂ ಗೌರವಿಸಿದ್ದು ಬಿಜೆಪಿ, ಕಾಂಗ್ರೆಸ್ ಅಲ್ಲ: ಅಶೋಕ್ ಬಗಲಿ

ಕಲಬುರಗಿ: ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್...