ಕಲಬುರಗಿ| ವಿ.ಜಿ ವಿಮೆನ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ

Date:

Share post:

ಕಲಬುರಗಿ: ಇಲ್ಲಿನ ಶ್ರೀಮತಿ ವೀರಮ್ಮ ಗಂಗಾಸಿರಿ ಮಹಿಳಾ ಮಹಾವಿದ್ಯಾಲಯದ ಶಿಕ್ಷಣ ವಿಭಾಗ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು “ಅಂತರ್ಗತ ಗುಣಮಟ್ಟದ ಶಿಕ್ಷಣ (Inclusive Quality Education)” ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಯಿತು.

ಈ ದಿನವನ್ನು ಪ್ರತಿ ವರ್ಷ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಅಂಗವಾಗಿ, ಶಿಕ್ಷಣ ಕ್ಷೇತ್ರಕ್ಕೆ ಅವರ ಅಮೂಲ್ಯ ಕೊಡುಗೆಗಾಗಿ ಆಚರಿಸಲಾಗುತ್ತದೆ.

ಈ ಕಾರ್ಯಕ್ರಮಕ್ಕೆ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಾಗರತ್ನ ಎಲ್. ಇಂಡಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಪ್ರೇರಣಾದಾಯಕ ಭಾಷಣ ಮಾಡಿದರು.

ಅವರು ಮೌಲಾನಾ ಆಜಾದ್ ಅವರ ಶಿಕ್ಷಣದ ದೃಷ್ಟಿಕೋನವನ್ನು ವಿವರಿಸಿ, ಶಿಕ್ಷಣವು ಪ್ರತಿಯೊಬ್ಬ ನಾಗರಿಕನಿಗೂ ತಲುಪುವಂತಾಗಬೇಕು ಎಂದು ಹೇಳಿದರು.

RTE ಕಾಯ್ದೆ (Right to Education Act – 2009) ಯ ಕುರಿತು ವಿವರಿಸಿ, 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಮಹತ್ವವನ್ನು ಸ್ಪಷ್ಟಪಡಿಸಿದರು. “ಪ್ರಾಥಮಿಕ ಶಿಕ್ಷಣವೇ ಮಾನವ ಅಭಿವೃದ್ಧಿಯ ಮೂಲ”. ಈ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕತೆ, ವಿಚಾರಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಬೇಕು. ಹಾಗೂ ಅಂತರ್ಗತ ಮತ್ತು ಗುಣಮಟ್ಟದ ಶಿಕ್ಷಣದ ಅಗತ್ಯತೆಯನ್ನು ಪ್ರಸ್ತಾಪಿಸಿ, ಉಪನ್ಯಾಸಕರು ವಿದ್ಯಾರ್ಥಿ ಕೇಂದ್ರಿತ ಮತ್ತು ಪರಸ್ಪರ ಕ್ರಿಯಾಶೀಲ ಬೋಧನಾ ವಿಧಾನಗಳನ್ನು ಅನುಸರಿಸಬೇಕೆಂದು ಕೋರಿದರು.

ಮೌಲಾನಾ ಆಜಾದ್ ಅವರ ಮಾತುಗಳನ್ನು ಉಲ್ಲೇಖಿಸಿ — “ಶಿಕ್ಷಣವನ್ನು ನಿರ್ಲಕ್ಷಿಸುವ ರಾಷ್ಟ್ರ ಪ್ರಗತಿ ಸಾಧಿಸಲಾರದು” ಎಂದು ಹೇಳಿ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು.

 

ಬಳಿಕ ಪ್ರಾಚಾರ್ಯರು ಡಾ. ರಾಜೇಂದ್ರ ಕೊಂಡಾ ಅಧ್ಯಕ್ಷೀಯ ಭಾಷಣದಲ್ಲಿ ಶಿಕ್ಷಣವು ಇಂದಿನ ಯುವ ಪೀಳಿಗೆಗೆ ಸಬಲತೆ, ಸ್ವಾವಲಂಬನೆ ಮತ್ತು ನವೋದ್ಯಮದ ದಾರಿಯಾಗಿದೆ ಎಂದು ಹೇಳಿದರು. ಹಾಗೂ ವಿದ್ಯಾರ್ಥಿನಿಯರು ಶಿಕ್ಷಣದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

 

ಕಾರ್ಯಕ್ರಮವು ಕು.ಸಾವಿತಾ (ಬಿ.ಎ. ಪ್ರಥಮ ಸೆಮಿಸ್ಟರ್) ಅವರಿಂದ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಅತಿಥಿ ಪರಿಚಯವನ್ನು ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ಎಸ್. ಮಾಡಿದರು. ಕು. ಸ್ವಾತಿ (ಬಿ.ಎ. ಪ್ರಥಮ ಸೆಮಿಸ್ಟರ್) ನಿರೂಪಣೆಯನ್ನು ಮತ್ತು ವಂದನಾರ್ಪಣೆಯನ್ನು ಕು. ಆಶಾರಾಣಿ (ಬಿ.ಎ. ಪ್ರಥಮ ಸೆಮಿಸ್ಟರ್) ಮಾಡಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಶ್ರೀದೇವಿ, ಗೀತಾ ಪಾಟೀಲ್, ಕವಿತಾ ಎ.ಎಂ., ಬಸಮ್ಮ, ಅಶ್ವಿನಿ, ಮೌಷೀನಾ ಫಾತಿಮಾ ಹಾಗೂ ಬಿ.ಎ. ಎಲ್ಲಾ ಸೆಮಿಸ್ಟರ್‌ನ 41 ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು ಎಂದು ಮಾಧ್ಯಮ ಸಮಿತಿಯ ಡಾ.ಮಹೇಶ ಗಂವ್ಹಾರ ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...