ಕಲಬುರಗಿ| ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ತರಬೇತಿ ಕೇಂದ್ರಗಳು ಸಹಾಯಕ: ಶಶೀಲ್ ನಮೋಶಿ 

Date:

Share post:

ಕಲಬುರಗಿ: ಚೆನ್ನಾಗಿ ಓದಬೇಕು ಮತ್ತು ಉತ್ತಮ ಭವಿಷ್ಯವನ್ನು ಹೊಂದಬೇಕು ಎಂಬ ಕನಸಿನೊಂದಿಗೆ ಬಹಳಷ್ಟು ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಿಗೆ ಹೋಗುತ್ತಿರುವದು ಈಗ ಸಾಮಾನ್ಯವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಅಭಿಪ್ರಾಯ ಪಟ್ಟರು.

ಅವರು ಧಾರವಾಡದಲ್ಲಿ ಮನೆ ಮಾತಾಗಿರುವ ಜ್ಞಾನ ದೀಪ ಕೋಚಿಂಗ್ ಸೆಂಟರ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ತರಬೇತಿ ಕೇಂದ್ರವು ಮೂಲತಃ ಕೆಲವು ವಿಶೇಷ ಬೋಧನಾ ವಿಧಾನಗಳನ್ನು ಬಳಸುತ್ತದೆ ಮತ್ತು ವಿದ್ಯಾರ್ಥಿಯನ್ನು ಬರೆಯಲು ಯೋಜಿಸುತ್ತಿರುವ ಪರೀಕ್ಷೆಗೆ ನಿರ್ದಿಷ್ಟವಾಗಿ ಸಿದ್ಧಪಡಿಸಲು ಪ್ರಯತ್ನಿಸುತ್ತದೆ ಎಂದರು.

ಅವರು ಹೊಂದಿರುವ ಅಪಾರ ಅನುಭವದಿಂದಾಗಿ, ಈ ಜನರು ವಿಷಯಗಳ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ ಮತ್ತು ಸಮಸ್ಯೆಗಳನ್ನು ಕಡಿಮೆ ಸಮಯದಲ್ಲಿ ಪರಿಹರಿಸಲು ಸಾಕಷ್ಟು ಸಲಹೆಗಳು ಮತ್ತು ತಂತ್ರಗಳನ್ನು ಸಹ ಹೊಂದಿರುತ್ತಾರೆ. ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಶಾಲೆ ಅಥವಾ ಕಾಲೇಜಿನಲ್ಲಿ ಸಿಗದ ನಿಯೋಜನೆಗಳು, ಸಾರಾಂಶ, ಪರೀಕ್ಷಾ ಕಿರುಪುಸ್ತಕಗಳು, ಅಣಕು ಪರೀಕ್ಷಾ ಪತ್ರಿಕೆಗಳು ಇತ್ಯಾದಿಗಳ ರೂಪದಲ್ಲಿ ಉತ್ತಮ ಅಧ್ಯಯನ ಸಾಮಗ್ರಿಗಳನ್ನು ಸಹ ಒದಗಿಸುತ್ತವೆ. ಈ ಎಲ್ಲಾ ಅಂಶಗಳು ವಿದ್ಯಾರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ತಯಾರಿ ಮಾಡಲು ಸಹಾಯ ಮಾಡುತ್ತವೆ ಎಂದು ಹೇಳಿದರು.

ಧಾರವಾಡದಲ್ಲಿ ಪ್ರಸಿದ್ಧಿ ಹೊಂದಿರುವ ಈ ತರಬೇತಿ ಕೇಂದ್ರ ಕಲಬುರ್ಗಿಯಲ್ಲಿ ಶಾಖೆ ತೆರೆಯುತ್ತಿರುವದು ಸಂತಸದ ವಿಷಯವಾಗಿದ್ದು ಈ ತರಬೇತಿ ಕೇಂದ್ರ ನಮ್ಮ ಜಿಲ್ಲೆಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಫಲಿತಾಂಶ ಹೆಚ್ಚಿಸಲು ಪ್ರಯತ್ನ ಪಡಲಿ ಎಂದು ಹೇಳಿದರು.

ಜ್ಞಾನ ದೀಪ ತರಬೇತಿ ಕೇಂದ್ರದ ಮುಖ್ಯಸ್ಥರು ಧಾರವಾಡದ ಪ್ರತಿಷ್ಠಿತ ಪಿ ಎಸ್ ಹಂಚಿನಮನಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಾಜು ಕಡೆಮನಿ ಮಾತನಾಡಿ ಪ್ರತಿವರ್ಷ ನಮ್ಮ ತರಬೇತಿ ಕೇಂದ್ರಕ್ಕೆ ಬೇಸಿಗೆ ರಜೆಯಲ್ಲಿ ಕಲ್ಯಾಣ ಕರ್ನಾಟಕದ ಬಹಳಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದು ತರಬೇತಿ ಪಡೆಯುತ್ತಿದ್ದಾರೆ ದೂರದಿಂದ ಬರುತ್ತಿರುವುದನ್ನು ಗಮನಿಸಿದ ನಾವು ಅವರಿಗೆ ಅನೂಕೂಲವಾಗಲೆಂದು ಕಲಬುರ್ಗಿಯಲ್ಲಿ ಶಾಖೆ ಪ್ರಾರಂಭಿಸುತ್ತಿದ್ದೇವೆ ಕಳೆದ 23 ವರ್ಷಗಳಿಂದ ಈ ತರಬೇತಿ ಕೇಂದ್ರ ನಡೆಯುತ್ತಿದ್ದು ಇಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ ಯಲ್ಲಿ ರ್ಯಾಂಕ್ ಪಡೆದಿದ್ದಾರೆ ಎಂದು ಹೇಳಿದರು. ಬೇಸಿಗೆ ರಜೆಯಲ್ಲಿ ವಸತಿ ಸಹಿತ ರಾಜ್ಯ ಪಠ್ಯಕ್ರಮ ಹಾಗೂ ಸಿಬಿಎಸ್ ಇ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಬೇತಿ ಪ್ರಾರಂಭಿಸುತ್ತಿದ್ದು ಧಾರವಾಡದ ಅನೇಕ ನುರಿತ ಉಪನ್ಯಾಸಕರ ವಿಜ್ಞಾನ,ಗಣಿತ ವಿಷಯಗಳ ತರಬೇತಿ ನೀಡಲಿದ್ದಾರೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಹೂಗಾರ ಎನ್ ಪಿ ಎಸ್ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿಗಳಾದ ಸುರೇಶ್ ಬುಲಬುಲೆ, ಮೋಯಿನುದ್ದೀನ್, ಅಮಿತ್ ಲೋಯಾ, ಸಂಗಮೇಶ ಮಹಾಗಾಂವ, ಧಾರವಾಡದ ಕಿಟೇಲ್ ಕಾಲೇಜಿನ ಪ್ರಾಧ್ಯಾಪಕ ಪಟ್ಟಣಶೆಟ್ಟಿ, ವಿಜಯಪುರ ಬಿ ಎಲ್ ಡಿ ಈ ಶಿಕ್ಷಣ ಸಂಸ್ಥೆಯ ವಾಘ್ಮೋರೆ , ಉಮರ್ಜೀ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಡಾ ಪರಮೇಶ ಬಿರಾದಾರ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...