ಕಲಬುರಗಿ| ಹಳೆಯ ವೈಷಮ್ಯ; ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಭೀಕರ ಕೊಲೆ

Date:

Share post:

ಕಲಬುರಗಿ: ಹಳೆಯ ವೈಷಮ್ಯದಿಂದಾಗಿ ಮದ್ಯಪಾನ ಮಾಡಿಸಿ ಪಾರ್ಟಿ ಮಾಡುತ್ತಲ್ಲೇ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಶ್ರೀನಿವಾಸ ಸರಡಗಿಯ ನಿವಾಸಿಯಾಗಿದ್ದ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀಮಂತರಾಯ ತಂದೆ ಕವಿರಾಜ (32) ಎಂಬಾತನೇ ಕೊಲೆಯಾಗಿದ್ದಾನೆ.

ಕೊಲೆಯಾದ ಶ್ರೀಮಂತರಾಯನು ಕಳೆದ ಕೆಲವು ವರ್ಷಗಳ ಹಿಂದೆ ಕೊಲೆಯೊಂದರಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದ್ದು ಇದೇ ಹಳೆಯ ವೈಷಮ್ಯದಿಂದಾಗಿ ಗ್ರಾಮದಲ್ಲಿ ಕೆಲವು ದುಷ್ಕರ್ಮಿಗಳು ಸೇರಿಕೊಂಡು ಶುಕ್ರವಾರ ರಾತ್ರಿ ಶ್ರೀಮಂತರಾಯನೊಂದಿಗೆ ಕೂಡಿಕೊಂಡು ಮದ್ಯಪಾನ ಮಾಡುತ್ತ ಪಾರ್ಟಿ ಮಾಡಿದ್ದಾರೆ, ಇದೇ ವೇಳೆ ಸಮಯವನ್ನು ಸಾಧಿಸಿದ ದುಷ್ಕರ್ಮಿಗಳು ಶ್ರೀಮಂತರಾಯನ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಕೊಲೆ ಸುದ್ದಿ ಅರಿತ ಎಸಿಪಿ, ಪಿ.ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸ್ಥಳವನ್ನು ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಶ್ವ ವಿದ್ಯಾಲಯ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವ್ಯಾಪಕ ಜಾಲವನ್ನು ಬೀಸಿದ್ದಾರೆಂದು ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳ ಪರಾರಿ; ತೀವ್ರ ಶೋಧ ಆರಂಭ

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಿಂದ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ...

ಕಲಬುರಗಿ| ಎಸ್ಐಆರ್: ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ: ವಿ.ಅನ್ಬುಕುಮಾರ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿ.ಎಲ್.ಓ.ಗಳು ತಮ್ಮ ಬಳಿ...

ಕಲಬುರಗಿಗೆ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಮುಗಿಸಿ: ಸಚಿವ ಯತೀಂದ್ರ ಸಿದ್ಧರಾಮಯ್ಯ ವಾರ್ನಿಂಗ್

ಕಲಬುರಗಿ: ಕಲಬುರಗಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ 24x7 ಯೋಜನೆಯ...

Kalaburagi| ಊಟ ಸೇವನೆಯಿಂದ ಮಕ್ಕಳ ಅಸ್ವಸ್ಥ ಪ್ರಕರಣ: ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತ್ತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ...