ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹಾಗೂ ಲೋಕೋಪಯೋಗಿ ಅಧೀಕ್ಷಕ ಅಭಿಯಂತರ ಮುಖಕ್ಕೆ ಕಪ್ಪುಮಸಿ ಬಳಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾಶಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮತ್ತು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಮಹೇಶ ಹೂಗಾರ, ಧರ್ಮರಾಜ ಜವಳಿ, ಶರಣರಾಜ ಚಪ್ಪರಬಂದಿ, ಮಲ್ಲಿನಾಥ ಮಂಗಲಗಿ, ಶಾಂತಕುಮಾರಪಾಟೀಲ, ಮಾರ್ಥಂಡಶಾಸ್ತ್ರೀ, ಸಿದ್ಧಲಿಂಗಯ್ಯ ಮಠಪತಿ, ಶಶಿಕಾಂತ ಹೊಳಕರ, ಪಪ್ಪು ಪಟೇಲ, ಮುಸ್ತಾಕ್ ಮೊಹಮ್ಮದ್ ಸೇರಿದಂತೆ ಹಲವರು ಇದ್ದರು.


