ಕಲಬುರಗಿ| ಪ್ರವಾಹ ಪೀಡಿತ ಸ್ಥಳಗಳಿಗೆ ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ್ ಭೇಟಿ, ಪರಿಹಾರಕ್ಕೆ ಒತ್ತಾಯ

Date:

Share post:

ಕಲಬುರಗಿ: ಅಫಜಲಪುರ ತಾಲೂಕಿನ ಬೋರಿ ಹಳ್ಳದ ತೀರದಲ್ಲಿರುವ ಜೇವರ್ಗಿ (ಕೆ), ಜೇವರ್ಗಿ (ಬಿ), ದಿಕ್ಸಂಗಾ ಗ್ರಾಮದ ವಿವಿಧ ಗ್ರಾಮಗಳಲ್ಲಿ ಪ್ರವಾಹದ ತೀವ್ರ ಹಾವಳಿಯಿಂದ ಮನೆಮಠ, ಜಮೀನು ಹಾಗೂ ಬೆಳೆಗಳು ಹಾನಿಗೊಳಗಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ರೈತರು ಹಾಗೂ ನಾಗರಿಕರೊಂದಿಗೆ ಮಾತನಾಡಿ, ಅವರ ಸಂಕಷ್ಟವನ್ನು ಆಲಿಸಿದರು.

ಪ್ರವಾಹದಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ತತ್ತರಿಸುತ್ತಿರುವುದನ್ನು ಉಲ್ಲೇಖಿಸಿ, “ಇಂತಹ ಕಷ್ಟದ ಸಂದರ್ಭದಲ್ಲಿ ಸರ್ಕಾರವು ತಕ್ಷಣವೇ ಪೀಡಿತ ಕುಟುಂಬಗಳಿಗೆ ನೆರವಾಗಬೇಕು. ವಿಶೇಷವಾಗಿ ಜೀವನೋಪಾಯಕ್ಕೆ ಅವಲಂಬಿತರಾಗಿರುವ ರೈತರನ್ನು ಗಮನದಲ್ಲಿಟ್ಟುಕೊಂಡು ಎಕರೆಗೆ ಕನಿಷ್ಠ ₹25,000 ತುರ್ತು ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

ಸ್ಥಳೀಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪೀಡಿತ ಪ್ರದೇಶಗಳಲ್ಲಿ ಶೀಘ್ರ ಸರ್ವೆ ನಡೆಸಿ ಹಾನಿಗೊಳಗಾದ ಪ್ರತಿಯೊಂದು ಕುಟುಂಬದ ಹೆಸರು ಪಟ್ಟಿಯನ್ನು ತಯಾರಿಸುವಂತೆ ಸೂಚಿಸಿದರು. ಸರಕಾರ ಜನರ ಜೀವ-ಜೀವನದೊಂದಿಗೆ ಆಟವಾಡಬಾರದು. ತ್ವರಿತ ಪರಿಹಾರ ಮಾತ್ರ ಜನರಲ್ಲಿ ನಂಬಿಕೆ ಮೂಡಿಸಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರವಾಹದಿಂದಾಗಿ ಬೆಳೆ ನಾಶಗೊಂಡಿರುವ ರೈತರ ಸಂಕಷ್ಟಗಳ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿದರು. ಕೃಷಿ ಇಲಾಖೆಯಿಂದ ತಾಂತ್ರಿಕ ಹಾಗೂ ಆರ್ಥಿಕ ನೆರವು ಒದಗಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಶ್ವನಾಥ ರೇವೂರ್, ಚಂದು ಬಡದಾಳ,ಸಿದ್ದಾರಾಮ್ ಸಬದ್, ಶಿವಾನಂದ ತಳವಾರ್,ಬಸವರಾಜ ತಳಕೇರಿ ಸೇರಿದಂತೆ ಸ್ಥಳೀಯ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಅಧಿಕಾರಿಗಳು ಹಾಜರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...