ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ವಿದ್ಯಾರ್ಥಿಗಳ ಉಚಿತ/ರಿಯಾಯಿತಿ ಬಸ್‍ಪಾಸ್‍ಗಾಗಿ ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು https://sevasindhuservices.karnataka.gov.in/buspassservices ವೆಬ್‍ಸೈಟ್ ನಲ್ಲಿ ಕಲಬುರಗಿ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ ಘಟಕ ಹಾಗೂ ಪಾಸ್ ವಿತರಿಸುವ ಬಿಂದುಗಳನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ ಈ ಕೆಳಕಂಡ ಕೆ-1 ಕೇಂದ್ರಗಳಲ್ಲಿ ನಿಗದಿತ ಬಸ್‍ಪಾಸ್ ದರ ಪಾವತಿಸಿ ಬಸ್‍ಪಾಸ್ ಮುದ್ರಿಸಿಕೊಳ್ಳಬಹುದಾಗಿದೆ.
ಕಲಬುರಗಿ ಘಟಕ-1ಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಕಲಬುರಗಿಯ ರಾಷ್ಟ್ರಪತಿ ಚೌಕ ಹಾಗೂ ಖರ್ಗೆ ಪೆಟ್ರೋಲ್ ಪಂಪ್ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಕಲಬುರಗಿ ಮಿನಿ ವಿಧಾನಸೌಧದಲ್ಲಿನ ಕೆ-1 ಕೇಂದ್ರದಲ್ಲಿ ಬಸ್‍ಪಾಸ್ ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕ ಇಬ್ರಾಹಿಂ-9611792140 ಹಾಗೂ ಹಣಮಂತ-8197034666 ಇವರನ್ನು ಸಂಪರ್ಕಿಸಬೇಕು.
ಕಲಬುರಗಿ ಘಟಕ-4ಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಕಲಬುರಗಿ ಎಸ್.ಟಿ.ಬಿ.ಟಿ. ಬಸ್ ನಿಲ್ದಾಣ, ಗುಲಬರ್ಗಾ ವಿಶ್ವವಿದ್ಯಾಲಯ, ರೈಲು ನಿಲ್ದಾಣ ಬಸ್ ನಿಲ್ದಾಣ ಹಾಗೂ ಸೂಪರ ಮಾರ್ಕೇಟ್ ಬಸ್ ನಿಲ್ದಾಣದ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಸೇಡಂ ರಿಂಗ್ ರಸ್ತೆ ಹತ್ತಿರದ ಕೆಎಚ್‍ಬಿ ಕಾಂಪ್ಲೇಕ್ಸ್ ಕೆ-1 ಕೇಂದ್ರ, ಮಿನಿವಿಧಾನ ಸೌಧ ಕೆ-1 ಕೇಂದ್ರ ಹಾಗೂ ಮಹಾನಗರಪಾಲಿಕೆ ಕೆ-1 ಕೇಂದ್ರ ಇಲ್ಲಿ ಬಸ್‍ಪಾಸ್ ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಾರಿಗೆ ನಿಯಂತ್ರಕರಾದ ಶರಣಮ್ಮ-9686812466, ಶ್ರೀಮಂತ-9972898325, ಮಹಮ್ಮದಸಾಬ್-6361177933, ಭಾರತಿ-8884516009 ಹಾಗೂ ಕಾಂಚನಾ-8123047073 ಗಳಿಗೆ ಸಂಪರ್ಕಿಸಬೇಕು.
ಚಿಂಚೋಳಿ ಘಟಕಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಚಿಂಚೋಳಿ ಬಸ್ ನಿಲ್ದಾಣ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಚಿಂಚೋಳಿ ಚಂದಾಪೂರದ ಕೆ-1 ಕೇಂದ್ರ ಇಲ್ಲಿ ಬಸ್‍ಪಾಸ್ ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕ ಕಲಮೇಶ-6362884028 ಇವರನ್ನು ಸಂಪರ್ಕಿಸಬೇಕು.
ಚಿತ್ತಾಪೂರ ಘಟಕಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಚಿತ್ತಾಪೂರ ಬಸ್ ನಿಲ್ದಾಣ ಮತ್ತು ಶಹಾಬಾದ ಬಸ್‍ನಿಲ್ದಾಣ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಚಿತ್ತಾಪೂರ ಕೆ-1 ಕೇಂದ್ರ ಮತ್ತು ಶಹಾಬಾದ ಕೆ-1 ಕೇಂದ್ರ ಇಲ್ಲಿ ಬಸ್‍ಪಾಸ್‍ನ್ನು ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕರಾದ ಅನಸೂಯಾ-7676205526 ಮತ್ತು ಶಾಂತಾಬಾಯಿ ಇವರನ್ನು ಸಂಪರ್ಕಿಸಬೇಕು.
ಸೇಡಂ ಘಟಕಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸೇಡಂ ಬಸ್‍ನಿಲ್ದಾಣ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಸೇಡಂ ಕೆ-1 ಕೇಂದ್ರದಲ್ಲಿ ಬಸ್‍ಪಾಸ್‍ನ್ನು ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕ ರಾಜೇಂದ್ರ-8073612310 ಇವರನ್ನು ಸಂಪರ್ಕಿಸಬೇಕು.
ಕಾಳಗಿ ಘಟಕಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕಾಳಗಿ ಬಸ್ ನಿಲ್ದಾಣ ಬಿಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳು ಕಾಳಗಿ ಕೆ-1 ಕೇಂದ್ರದಲ್ಲಿ ಬಸ್‍ಪಾಸ್ ಮುದ್ರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ನಿಯಂತ್ರಕ ದೇವಿದಾಸ-8095454473 ಇವರನ್ನು ಸಂಪರ್ಕಿಸಬೇಕು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.


