ಕಲಬುರಗಿ: ಬುದ್ಧ-ಬಸವ-ಅಂಬೇಡ್ಕರ ಅವರು ಜಾಗತಿಕ ದಾರ್ಶನಿಕರು ಅವರ ಚಿಂತನೆಗಳುಬಿಂದಿಗೂ ಪ್ರಸ್ತುತ ಹೀಗಾಗಿ ತ್ರಿರತ್ನರಾಗಿದ್ದಾರೆ. ಅವರ ತತ್ತ್ವ ಸಿದ್ಧಾಂತಗಳ ಮೇಲೆ ನಡೆದು ಅನುಸರಿಸಿ ತೋರಿಸಬೇಕಾಗಿದೆ ಅಂದಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯವೆಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ ಲಂಡನಕರ್ ಅಭಿಪ್ರಾಯ ಪಟ್ಟರು.
ರಂಗಾಯಣದಲ್ಲಿ ಸಿರಿಗನ್ನಡ ವೇದಿಕೆ ಹಮ್ಮಿಕೊಂಡ ಬುದ್ಧ- ಬಸವ- ಅಂಬೇಡ್ಕರ್ ಜಯಂತಿ ನಿಮಿತ್ಯ ಹಮ್ಮಿ ಕೊಂಡ ವಿಶೇಷ ಉಪನ್ಯಾಸ- ತ್ರಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಇಂತಹ ಪ್ರಶಸ್ತಿ ಪಡೆದ ನೀವು ಧನ್ಯರು.ಇನ್ನು ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ಆಗಲಿ ಎಂದರು.
ಪುಸ್ತಕೋದ್ಯಮಿ ಡಾ.ಬಸವರಾಜ ಕೊನೇಕ ಅವರು ಸಿರಿಗನ್ನಡ ವೇದಿಕೆ ಒಳ್ಳೆಯ ಕೆಲಸ ಮಾಡಿದೆ.ನಾಡು-ನುಡಿ ಸೇವೆಯನ್ನು ಮಾಡಲಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮವೆಂದರು. ವಿಶೇಷ ಉಪನ್ಯಾಸ ನೀಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯ ದೇವಿ ಗಾಯಕವಾಡ ಅವರು ಭಾರತ ದೇಶದ ಮೂರು ವಸಂತ ಕಾಲವೆಂದರೆ ಬುದ್ಧ- ಬಸವ- ಅಂಬೇಡ್ಕರ್ ಅವರು ಅವರ ಚಿಂತನೆಗಳು ಸಮಸಮಾಜ,ಜಾತಿಮತ ಧರ್ಮ ಮೀರಿದ ಮನುಕುಲದ ಉದ್ಧಾರಕರು ಅವರು ಎಲ್ಲಾ ಕಾಲಕ್ಕೂ ಪ್ರಸ್ತುತ ವೆಂದರು.
ಅತಿಥಿಯಾಗಿ ಅಗಮಿಸಿದ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಪ್ರಾಂಶುಪಾಲರಾದ ಡಾ.ರತಿಕಾಂತಿ ಎಸ್.ಕ್ಯಾತನಳ್ಳಿ ಅವರು ಬುದ್ಧನ ಆಸೆಯೇ ದುಃಖಕ್ಕೆ ಮೂ ಲವರಂದರೆ ಬಸವಣ್ಣನವರು ಕಾಯಕವೇ ಕೈಲಾಸವೆಂದ ರು ಅಂಬೇಡ್ಕರ್ ಸಂವಿಧಾನ ನೀಡಿ ಸಮಾನತೆ ತಂದವರು ಈ ಭಾಗ ಹಿಂದುಳಿದಿದೆ ಮೌಢ್ಯದಿಂದ ಹೊರಬರಲು ಕೋರಿದರು.
ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ವೇದಿಕೆ ಮೂಲಕ ಕನ್ನಡ ಭಾಷೆ,ಸಂಸ್ಕøತಿ ಬೆಳೆ ದುವ ಮತ್ತು ಸಾಹಿತಿಗಳ ಮನೆಯಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳುವ ಯೋಜನೆ ಇದೆ.ಜಗತ್ತಿನ ಮೂರು ಮಹಾತ್ಮರಲ್ಲಿ ಬುದ್ಧ,ಬಸವ ಅಂಬೇಡ್ಕರ್ ವಿಚಾರಧಾರೆ ಮನುಕುಲ ಉದ್ಧಾರವಾಗಿದೆ ಎಂದರು. ಸ್ವಾಗತವನ್ನು ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಕೋರಿದರು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ಶೀಲಾದೇವಿ ಎಸ್.ಬಿರಾದಾರ ವಂದಿಸಿದರು.
ಡಾ. ಶಂಕರ ಟಿ. ಬತ್ತಾಸಿ, ಡಾ. ಸೈಯದ ಆರಿಫ್ ಮುರ್ಷಿದ್, ಡಾ. ವಿಜಯಕುಮಾರ ಬಿ. ಬೀಳಗಿ, ಡಾ. ಕಾಳಪ್ಪ ಭೀಮಪ್ಪ ಮಾದರ, ಡಾ. ಸುಖದೇವಿ ಮಾದಪ್ಪ ಗಂಟೆ, ಸವಿತಾ ಸುನಿಲಕುಮಾರ ಕಾಂಬಳೆ, ಪೂರ್ಣಿಮಾ ನಾಗನಾಥರಾವ, ಜಗದೇವ ಭೀಮರಾಯ, ಡಾ. ವೆಂಕಟೇಶ್ವರ ಕಾಶಣ್ಣ ಕೊಲ್ಲಿ, ಡಾ. ಶೃತಿ ಸುನೀಲದತ್ತ ದೊಡ್ಡಮನಿ, ಡಾ. ಪೀರಪ್ಪ ಭೂಷಣ ಸಜ್ಜನ, ಬಸವರತ್ನ ಪ್ರಶಸ್ತಿ, ಡಾ. ರಾಜಾರಾಮ್ ಚವ್ಹಾಣ, ಜಗದೇವಿ ಡಿ. ತೆಗನೂರ, ಡಾ. ಕೈಲಾಸ ದೋಣಿ, ಡಾ. ಅಪ್ಪಯ್ಯ ಹೊಸಮನಿ, ಡಾ. ರವಿಕುಮಾರ ಎಂ. ಕೆ., ಡಾ. ಅವಿನಾಶ ಸಿದ್ರಾಮಪ್ಪ ದೇವನೂರ, ಅಣ್ಣಾರಾವ ಯಲಮಡಗಿ, ಡಾ. ನಾಗರತ್ನ, ಸಚಿದಾನಂದ ಆರ್. ತೊಬರೆ, ಡಾ.ಸ್ಥಿತಾ ಬಿರಾದಾರ, ಡಾ. ನಾಗರಾಜ ಪಿ. ಹೊರಪೇಟೆ, ಡಾ. ಶೈಲಾ ಕೊಡ್ಲೆ, ಅಡಿವೆಪ್ಪ ಹಡಪದ, ಡಾ. ವಿದ್ಯಾಧರ ಧುತ್ತರಗಿ, ಹುಚ್ಚೇಶ ಎಂ. ನಾಗಲಿಕರ್, ಪೂಜಾ ಎಸ್. ಪಾಟೀಳ, ಮಹಾದೇವ ರಾಮತೀರ್ಥ, ಡಾ. ಪರಶುರಾಮ ಕವಡಿಮಟ್ಟಿ, ಮಳೆಪ್ಪ ಸಿದ್ದಪ್ಪ ಡಾಂಗೆ, ವಿದ್ಯಾಸಾಗರ ದೊಡ್ಡಮನಿ, ಡಾ. ರವಿಕುಮಾರ ಅಂತಪ್ಪ, ಡಾ. ಬಾಬಾಸಾಹೇಬ ಬಿ.ಆರ್. ಅಂಬೇಡ್ಕರ್ ರತ್ನ ಪ್ರಶಸ್ತಿ, ಪ್ರೊ. ವಾಮನ ಗಾಜರೆ, ತ್ರಿವಿಕ್ರಮ ಶಿವಶರಣಪ್ಪ, ಅರುಣ ಕಲ್ಯಾಣರಾವ್, ಡಾ. ಸುನಿಲಕುಮಾರ ಕಾಂಬಳೆ, ಡಾ. ಅಂಜಪ್ಪ ತಿಪ್ಪಣ್ಣ, ದಿಲೀಪ. ಮಾ. ದೊಡಮನಿ, ಶರಣಪ್ಪ ಚಿಕ್ಕಪ್ಪ ಆರೆಗೋಳ, ಶಾನೂರ ಮಹಾದೇವ ಐಹೊಳೆ, ಸುನಿಲ್ ಜಿ. ಕಾಂಬಳೆ, ಭಾರತಿ ತುಳಸಿರಾಮ ಚವ್ಹಾಣ, ಶಾಂತಪ್ಪ ತೊಂಡಪ್ಪ ಚಲವಾದಿ, ಡಾ. ದುರಗಪ್ಪ ಮುಂಡಗಿ, ಶೇಖರ ಎಲ್. ಕಾಂಬಳೆ, ಡಾ. ನಾಗಿಣಿ ಶಿವಶರಣಪ್ಪ ಅವರಿಗೆ ಶ್ರೀ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜಗದೇವಿ ದಶರಥ ತೆಗನೂರು, ಸಿದ್ದಮ್ಮ ಸಿದ್ದಣ್ಣ ತೆಗನೂರು, ಕುಸನೂರ ಇವರುಗಳಿಗೆ 35ನೇ ವಿವಾಹ ವಾರ್ಷಿಕೋತ್ಸವ ಗೌರವ ಸನ್ಮಾನ ಮಾಡಿ ಸತ್ಕರಿಸಲಾಯಿತು.


