ಕಲಬುರಗಿ| ನದಿ ನೀರು ಪಾಲಾಗಿದ್ದ ಭಾಗೇಶನ ಶವ ಎರಡು ದಿನಗಳ ಬಳಿಕ ಪತ್ತೆ

Date:

Share post:

ಕಲಬುರಗಿ: ಅಫಜಲಪುರ ತಾಲ್ಲೂಕಿನ ಮಣೂರ ಗ್ರಾಮದ ಸಮೀಪದ ಭೀಮಾ ನದಿಯಲ್ಲಿ ನೀರುಪಾಲಾಗಿದ್ದ ಯುವಕನ ಶವ ಎರಡು ದಿನಗಳ ಬಳಿಕ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.

ಮಣೂರ ಗ್ರಾಮದ ನಿವಾಸಿ ಭಾಗೇಶ್ ರೇವಣಸಿದ್ದಪ್ಪ(19) ಎಂಬ ಯುವಕ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಶನಿವಾರ ನೀರುಪಾಲಾಗಿದ್ದ. ಎರಡು ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಆತನ ಶವ ದೇವಣಗಾಂವ ಗ್ರಾಮದ ಭೀಮಾ ನದಿಯ ತೀರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವ ಪತ್ತೆಯಾದಾಗ ಆತನ ಕುಟುಂಬಸ್ಥರು ಗುರುತಿಸಿದ ಬಳಿಕ ಅಫಜಲಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.
ಮೃತ ಭಾಗೇಶ್ ನ ಅಂತಿಮ ಸಂಸ್ಕಾರವನ್ನು ಕುಟುಂಬಸ್ಥರು ಸೋಮವಾರ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಿದರು.

Share post:

spot_imgspot_img

Popular

More like this
Related

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮಕ್ಕಾಗಿ ಮುಖ್ಯಮಂತ್ರಿಗಳಿಂದ ಕಾಫಿ ಟೇಬಲ್ ಪುಸ್ತಕ, ಬ್ರೋಶರ್ ಬಿಡುಗಡೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು...

ಕಲಬುರಗಿ| ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ,ಹೆಚ್ಚು ಅಂಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿ: ಭಂವರ್ ಸಿಂಗ್ ಮೀನಾ

ಕಲಬುರಗಿ: ಪ್ರಸಕ್ತ 2025-26ನೇ ಶೈಕ್ಷಣಿಕ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18...

ಕಲಬುರಗಿ| ಸೆಂಟ್ರಲ್ ಜೈಲಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಕಡಗಂಚಿ ಕಾರ್ಮೇಲ್ ಜ್ಯೋತಿ ಪಬ್ಲಿಕ್...

ಕಲಬುರಗಿ| ಎಸ್ಸೆಸ್ಸೆಲ್ಸಿ ಪರೀಕ್ಷೆ: ಒತ್ತಡ ಬಿಟ್ಟು ಸಂತೋಷದಿಂದ ಪರೀಕ್ಷೆ ಬರೆಯುವಂತೆ ಜಿಲ್ಲಾಧಿಕಾರಿ ಪತ್ರ

ಕಲಬುರಗಿ: ಪ್ರಸಕ್ತ 2025-26ನೇ ಶೈಕ್ಷಣಿಕ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18...