ನಟ, ಮಾಜಿ IAS ಅಧಿಕಾರಿ ಕೆ. ಶಿವರಾಮ್ ನಿಧನ.. ಅವರ ಸಾಧನೆಗಳೇನು ಗೊತ್ತಾ?

Date:

Share post:

ಕನ್ನಡದ ಖ್ಯಾತ ನಟ, ಮಾಜಿ ಐಎಎಸ್​ ಅಧಿಕಾರಿ, ರಾಜಕಾರಣಿಯೂ ಆಗಿದ್ದ ಕೆ. ಶಿವರಾಮ್ ಮೃತಪಟ್ಟಿದ್ದಾರೆ. 71 ವಯಸ್ಸಿನ ಶಿವರಾಂಮ್, ಹೃದಯಾಘಾತಕ್ಕೆ ಒಳಗಾಗಿ ಕಳೆದ 25 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಅವರ ನಿಧನಕ್ಕೆ ರಾಜ್ಯದ ರಾಜಕೀಯ ನಾಯಕರು, ಚಲನಚಿತ್ರ ನಟರು ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

K. Shivaram
K. Shivaram

ಶಿವರಾಮ್ ಅವರು 1953ರ ಏಪ್ರಿಲ್ 6ರಂದು. ರಾಮನಗರದಲ್ಲಿ ಜನಿಸಿದರು. 1985ರಲ್ಲಿ ಮೊದಲು ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ ಡಿವೈ ಎಸ್ ಪಿ ಆಗಿ ತರಬೇತಿ ಪಡೆಯುತ್ತಿರುವಾಗಲೇ ಐಎಎಸ್ ಪರೀಕ್ಷೆಯನ್ನು ಪಾಸಾದರು. ವಿಶೇಷವೆಂದರೆ ಕನ್ನಡ ಭಾಷೆಯಲ್ಲಿ ಪಾಸ್ ಆಗಿ IAS ಅಧಿಕಾರಿಯಾದ ಮೊದಲ ವ್ಯಕ್ತಿ ಇವರೆನಿಸಿದ್ದಾರೆ.

ಈ ಹುದ್ದೆಗೆ ಏರಿದ ಬಳಿಕ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಆಯುಕ್ತರಾಗಿ ಉತ್ತಮ ಕೆಲಸ ಮಾಡಿದ್ದರು. ಜನರ ಸೇವೆಗೆ ಇಂದಿಗೂ ತಮ್ಮನ್ನೇ ತಾವು ತೊಡಗಿಕೊಂಡಿದ್ದರು. 1986ರಿಂದ 2013ರ ತನಕ IAS ಅಧಿಕಾರಿಯ ಸ್ಥಾನದಲ್ಲಿದ್ದರು.

ನಟನೆಯಲ್ಲೂ ಸೈ ಎನಿಸಿಕೊಂಡ ಶಿವರಾಮ್!

ಶಿವರಾಮ್ ಅವರು ಕೇವಲ ಅಧಿಕಾರಿಯಾಗದೆ ಒಬ್ಬ ಸಕಲ ಕಲಾ ವಲ್ಲಭರೂ ಆಗಿದ್ದರು. ಸಿನಿಮಾ ಆಸಕ್ತಿ ಹೆಚ್ಚಿರುವ ಅವರು ಕನ್ನಡದಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 1993ರ ‘ಬಾ ನಲ್ಲೆ ಮಧುಚಂದ್ರಕೆ’ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರು. 2017ರಲ್ಲಿ ರಿಲೀಸ್ ಆದ ‘ಟೈಗರ್’ ಅವರ ನಟನೆಯ ಕೊನೆಯ ಚಿತ್ರವಾಗಿದೆ.

ರಾಜಕೀಯದಲ್ಲಿಯೂ ಸೇರಿದ್ದರು:

K. Shivaram
K. Shivaram

ಶಿವರಾಮ್ ಅವರು 2013ರಲ್ಲಿ ಕಾಂಗ್ರೆಸ್ ಸೇರಿ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟರು. ಬಳಿಕ 2014ರಲ್ಲಿ ಜೆಡಿಎಸ್ ಸೇರಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅದೇ ವರ್ಷದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಅವರ ಜೀವನ ಬಹಳಷ್ಟು ಜನರಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದರೆ ತಪ್ಪಾಗಲಾರದು.

 

‘ರಾವುತ’ ಚಿತ್ರದ ಪೋಸ್ಟರ್ ಬಿಡುಗಡೆ

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...