ಕಲಬುರಗಿ| ವಾರಕ್ಕೆ 5 ದಿನದ ಕೆಲಸ ಜಾರಿಗೆ ಒತ್ತಾಯಿಸಿ ಬ್ಯಾಂಕ್ ನೌಕರರ ಮುಷ್ಕರ

Date:

Share post:

ಕಲಬುರಗಿ: 12ನೆಯ ದ್ವೀಪಕ್ಷಿಯ ವೇತನ ಒಪ್ಪಂದದಂತೆ ಬ್ಯಾಂಕುಗಳಲ್ಲಿ ವಾರಕ್ಕೆ 5 ದಿನದ ಕೆಲಸ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಗ್ರಾಮೀಣ ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆಯ ವತಿಯಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಕುಸನೂರ ರಸ್ತೆ ಆವರಣದಲ್ಲಿ ಮುಷ್ಕರ ನಡೆಸಲಾಯಿತು.

ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷ ಶಿವಕುಮಾರ್ ಬಗಲೂರ ಅವರು, 2024 ರ ಮಾರ್ಚ್ 8ರಂದು IBA ಮತ್ತು UFBU ನಡುವೆ 12ನೆಯ ದ್ವೀಪಕ್ಷಿಯ ವೇತನ ಒಪ್ಪಂದದಂತೆ ವಾರಕ್ಕೆ 5 ದಿನದ ಬ್ಯಾಂಕಿಂಗ್ ಒಡಂಬಡಿಕೆಗೆ ಸಹಿ ಹಾಕಿದ್ದು, ಕೇಂದ್ರ ಸರ್ಕಾರಕ್ಕೆ ಜಾರಿಗೊಳಿಸಲು ಶಿಫಾರಸ್ಸು ಮಾಡಿತ್ತು. ಆದರೆ ಒಂದುವರೆ ವರ್ಷ ಕಳೆದರೂ ಕೇಂದ್ರ ಸರ್ಕಾರ ಜಾರಿಗೆ ತರುವಲ್ಲಿ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪ ಮಾಡಿದರು.

ಈಗಾಗಲೇ RBI,NABARD,LIC,GIC,SEBI, SHARE MARKET ಎಲ್ಲವೂ ವಾರಕ್ಕೆ 5 ದಿನದ ಕೆಲಸ ಜಾರಿಯಲ್ಲಿದ್ದು, ಬ್ಯಾಂಕ್ ನೌಕರರಿಗೆ ಮಲತಾಯಿ ಧೋರಣೆ ತೋರಲಾಗುತ್ತಿದೆ. ಇದನ್ನು ಖಂಡಿಸುತ್ತಾ ಆದಷ್ಟು ಬೇಗ ಬ್ಯಾಂಕಿಂಗ್ ವಲಯಕ್ಕೂ ವಾರಕ್ಕೆ 5 ದಿನದ ಕೆಲಸ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ SC ST welfare Association ಪ್ರಧಾನ ಕಾರ್ಯದರ್ಶಿ ರಾಹುಲ್ ಹರವಾಳ, ಖಜಾಂಚಿ ಕಿರಣ ಭಾವಿಮನಿ, ರಾಕೇಶ್, ಭೀಮಪ್ಪ, ಅಧಿಕಾರಿಗಳ ಸಂಘದ ಕಾರ್ಯಾಧ್ಯಕ್ಷ ಸಿದ್ದಣ್ಣ, ದತ್ತಾತ್ರೇಯ ಕುಲಕರ್ಣಿ, ಪ್ರಸನ್ನ ಕುಲಕರ್ಣಿ, ಶಿವಾನಂದ, ಅಭಿಷೇಕ, ಅರುಣಕುಮಾರ, ಕಿರಣ ರೆಶ್ಮಿ, ಜ್ಯೋತಿ ವಾಲಿಶೆಟ್ಟಿ,ಹೇಮಾ ಸಕ್ರಿ, ಅಧಿಕಾರಿಗಳ ಜಿಲ್ಲಾ ಅಧ್ಯಕ್ಷ ಸಚಿನ್ ತೆಗ್ಗಿನ, ಕಾರ್ಯದರ್ಶಿ ಶ್ರೀನಿವಾಸ ನೌಕರರ ಸಂಘದ ಕಾರ್ಯಾಧ್ಯಕ್ಷ ವಿಶ್ವನಾಥ್ ರೆಡ್ಡಿ, ಹನುಮಾನ್ ಸಿಂಗ್ ಜಿಲ್ಲಾಧ್ಯಕ್ಷ ಆನಂದ, ಶಿವಲಿಂಗ, ನಿವೃತ್ತ ನೌಕರರಾದ ಎಸ್ ಎಸ್ ಕುಲಕರ್ಣಿ, ರಾಜೇಂದ್ರ ಮದಕುಂಟಿ, ರಾಜಶೇಖರ ಬಬಲಾದಕರ್, ಸೇರಿದಂತೆ ನೂರಾರು ನೌಕರರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಕಲಾ ವಿಭಾಗದಲ್ಲಿ ಸೃಷ್ಟಿ ಮಲ್ಲಿನಾಥ ರಾಜ್ಯಕ್ಕೆ ಪ್ರಥಮ

ಕಲಬುರಗಿ: ಪ್ರಸಕ್ತ ದ್ವಿತೀಯ ಪಿ.ಯು.ಸಿ-1 ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕಲಬುರಗಿಯ...

ಕಲಬುರಗಿ| ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಬಗೆಯ ಸುಮಾರು 62 ಲಕ್ಷ ರೂ. ಮೊತ್ತದ ಸಾಧನ ಸಲಕರಣೆಗಳ ವಿತರಣೆ

ಕಲಬುರಗಿ: ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (HUDCO) ಸಂಸ್ಥೆಯ...

ಕಲಬುರಗಿ| ಲಾರಿ – ಬೈಕ್ ಢಿಕ್ಕಿ; ಬೈಕ್ ಸವಾರ ಮೃತ್ಯು; ಇನ್ನೋರ್ವ ಗಂಭೀರ ಗಾಯ

ಕಲಬುರಗಿ: ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್...

ಕಲಬುರಗಿ| ರಾಮನವಮಿ ಆಚರಣೆ; ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶ

ಕಲಬುರಗಿ: ರಾಮ ನವಮಿ ಆಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ...