ಜ.22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಇಡೀ ದೇಶವೇ ಕಾದು ಕುಳಿತಿದೆ. ಸಮಾರಂಭಕ್ಕೆ ಗಣ್ಯರನ್ನು ಆಹ್ವಾನಿಸಲಾಗಿದೆ. ವಿಶೇಷವೆಂದರೆ, ಈ ಅಹ್ವಾನ ಪತ್ರಿಕೆಯಲ್ಲಿ ಶ್ರೀರಾಮನ ಲೋಗೋ ತಯಾರಾಗಿರುವುದು ಕಲಬುರಗಿ ಜಿಲ್ಲೆಯಲ್ಲಿ. ಹೌದು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಲೋಗೋ ತಯಾರಿಸಲು ಕರೆ ನೀಡಿತ್ತು. ಅದರಂತೆಯೇ ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್ ಅವರು ಡಿಸೈನ್ ಮಾಡಿದ್ದರು. ಸಾವಿರಾರು ಲೋಗೋಗಳಲ್ಲಿ ರಮೇಶ್ ಮಾಡಿರುವ ಲೋಗೋವನ್ನು ಟ್ರಸ್ಟ್ ಆಯ್ಕೆಮಾಡಿದೆ.