ಕಲಬುರಗಿ: ಚಾಂದ್ ಬಿಬಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

Date:

ಕಲಬುರಗಿ: ಮಹಿಳೆಯರು ತಮ್ಮಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಬಲಪಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಚಾಂದ್ ಬಿಬಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರುಖ್ಸಿಂದಾ ಹೀನಾ ಅಕಬರಿ ಹೇಳಿದರು.

ನಗರದ ಚಾಂದ್ ಬಿಬಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಶನ್ ಅವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳಾ ಸಬಲೀಕರಣವು ಸಮಗ್ರ ಸಮಾಜದ ಪ್ರಗತಿಯ ಮೂಲಸ್ತಂಭವಾಗಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಪಡೆದು ಮುನ್ನಡೆಯಬೇಕು ಎಂದು ಹೇಳಿದರು.

 

ಸಂಪನ್ಮೂಲ ವ್ಯಕ್ತಿಗಳಾದ ಅನ್ವರ್ ಜಮಾದಾರ್ ಅವರು ಮಾತನಾಡಿ, “ಮಹಿಳೆಯರು ಸದೃಢ ಸಮಾಜದ ನಿರ್ಮಾತೃಗಳು. ಮಹಿಳೆಯ ಶಕ್ತಿ, ಜ್ಞಾನ ಮತ್ತು ಸಹನೆಯೇ ಸಮಾಜದ ನಿಜವಾದ ಬಲ” ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಆಯೋಜಕರಾದ ಡಾ.ಶರಬಯ್ಯ ಸ್ವಾಮಿ, “ಮಹಿಳೆಯರು ಎಂದರೆ ಕೇವಲ ಮಹಿಳೆಯಲ್ಲ; ಅವರು ತಂಗಿಯಾಗಿ, ತಾಯಿಯಾಗಿ, ಮಾಡದಿಯಾಗಿ, ರಾಜಕಾರಣಿಯಾಗಿ, ಪ್ರಧಾನಮಂತ್ರಿಯಾಗಿ ಹಾಗೂ ರಾಷ್ಟ್ರಪತಿಯಾಗಿ ವಿವಿಧ ಪಾತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಹೇಳಿದರು. ಮಹಿಳೆಯರ ಸಬಲೀಕರಣವು ಕುಟುಂಬದ ಶಕ್ತೀಕರಣದ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ದಾರಿ ತೋರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕವಿತಾ ಹಾಗೂ ನೂರಂದಪ್ಪ ಅವರು ಸಹ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಹಿಳಾ ಹಕ್ಕುಗಳು, ಶಿಕ್ಷಣದ ಅಗತ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು.

 

ಮಹಿಳಾ ದಿನ ಆಚರಣೆ ನಿಮಿತ್ತವಾಗಿ ಪೋಸ್ಟರ್ ಪ್ರಸ್ತುತಿಕೆ ಹಾಗೂ ಕ್ವಿಜ್ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿದರು.

ಈ ಸಂದರ್ಭದಲ್ಲಿ ಖುಸ್ರೋ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಟ್ರಸ್ಟಿಗಳಾದ ಡಾ. ಎಂ.ಡಿ. ಅಶ್ಫಾಕ್ ಚುಲ್ಬುಲ್, ಉಪನ್ಯಾಸಕರಾದ ಡಾ. ಉಮಾಕಾಂತ್ ಗೌಡ, ಡಾ. ಖಮರ್ ಜಹಾನ್, ಡಾ. ನಿಲೋಫರ್, ಡಾ. ಸಮೀನಾ ತಹಸೀನ್ ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.

ಡಾ. ಶಂಕರಪ್ಪ ಚಲವಾದಿ ನಿರೂಪಿಸಿದರು. ದೈಹಿಕ ನಿರ್ದೇಶಕರಾದ ಮಲ್ಲಿಕಾರ್ಜುನ ಡೊಂಣ್ಣೂರ್ ವಂದಿಸಿದರು.

ವಿದ್ಯಾರ್ಥಿನಿಗಳಾದ ಭವಾನಿ, ಪ್ರೇಮಾ, ಮುತ್ತಮ್ಮ ಹಾಗೂ ಚೈತ್ರ ಅವರು ಪ್ರಾರ್ಥನೆ ಗೀತೆಯನ್ನು ಹಾಡಿದರು.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ವಿಪತ್ತು ತರುವ ಆಪತ್ತಿನ ಸಂದರ್ಭದಲ್ಲಿ ಸಮಯ ಪ್ರಜ್ಞೆ, ಜಾಗೃತಿ ಮುಖ್ಯ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

ಕಲಬುರಗಿ: ದುರ್ಘಟನೆಗಳು ಸಂಭವಿಸಿದಾಗ ವಿಪತ್ತು ನಿರ್ವಹಣಾ ತಂಡದ ಮೊದಲ ಜವಬ್ದಾರಿ ಅಲ್ಲಿ...

ಕಲಬುರಗಿ: ಸಿಡಿಲು ಬಡಿದು ಯುವಕ ಬಲಿ

ಕಲಬುರಗಿ: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಶಾದಿಪುರ...

ಕಲಬುರಗಿ| ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡಿದಲ್ಲಿ ಏಜೆನ್ಸಿ ಕಪ್ಪು ಪಟ್ಟಿಗೆ: ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಮಧ್ಯ ಪ್ರಾಚ್ಯ ದೇಶದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಜನ ಆತಂಕಗೊಂಡು ಸಿಲಿಂಡಿರ್...

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮಕ್ಕಾಗಿ ಮುಖ್ಯಮಂತ್ರಿಗಳಿಂದ ಕಾಫಿ ಟೇಬಲ್ ಪುಸ್ತಕ, ಬ್ರೋಶರ್ ಬಿಡುಗಡೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು...