ಕಲಬುರಗಿ: ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ನಿಜವಾಗಿಯೂ ಗೌರವಿದ್ದು, ಅವರ ವಿಚಾರಗಳನ್ನು ಹೆಚ್ಚು ಪ್ರಚಾರ ಪಡಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿಯೇ ಹೊರತು ಕಾಂಗ್ರೆಸ್- ಕಮುನಿಷ್ಠರು ಪಕ್ಷ ಅಲ್ಲ ಎಂದು ಕಲಬುರಗಿ (ಗ್ರಾಮಾಂತರ) ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ್ ಬಗಲಿ ಹೇಳಿದರು.
ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಕಲಬುರಗಿ ನಗರದ ಜಗತ್ ಬಳಿಯಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಬಿಜೆಪಿ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇತ್ತೀಚೆಗೆ ಕಾಂಗ್ರೆಸ್ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದ ಅಂಬೇಡ್ಕರ್ ರವರಿಗೆ ಚುನಾವಣೆಯಲ್ಲಿ ಸೋಲಿಸಿದ್ದೆ ಕಾಂಗ್ರೆಸ್ ಆದರೆ ಈಗ ಅವರ ಬಗ್ಗೆ ಹಾಡಿ ಹೊಗಳುತ್ತಿದೆ ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಮತ್ತು ಅವರಿಗೆ ಸಂಬಂಧಿಸಿದಂತೆ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿ ಅಂಬೇಡ್ಕರ್ ರವರಿಗೆ ಹೆಚ್ಚು ಗೌರವ ನೀಡುತ್ತಿದೆ ಎಂದು ಹೇಳಿದರು.
ಯುವ ಮೋರ್ಚಾ ಉಪಾಧ್ಯಕ್ಷರು ಶಿವ ಅಷ್ಠಗಿ ಮಾತನಾಡಿ ಅಂಬೇಡ್ಕರ್ ರವರ ಹೋರಾಟದಿಂದ ಹಿಡಿದು ಅವರು ಪರಿನಿರ್ವಾಣ ಹೊಂದುವವರೆಗೂ ಅವರಿಗೆ ತೊಂದರೆ ನೀಡಿದವರು, ಅವರಿಗೆ ಭಾರತರತ್ನ ಕೊಡದವರು, ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್ ನಲ್ಲಿ ಅವರ ಪೋಟೋ ಹಾಕದವರಿಗೆ, ಸಂವಿಧಾನವನ್ನು ಅಮಾನತತ್ತಿನಲ್ಲಿ ಇಟ್ಟ ಪಕ್ಷದವರಿಗೆ ಈಗ ಅಂಬೇಡ್ಕರ್ ರವರ ಮತ್ತು ದಲಿತರ ಬಗ್ಗೆ ಯಾಕೋ ಹೆಚ್ಚು ಪ್ರೀತಿ ಬಂದು ಬಿಟ್ಟಿದೆ.
ನಾನು ಅಂಬೇಡ್ಕರ್ ಪ್ರತಿಪಾದಕ ಎಂದು ಹೇಳುವ ಸಚಿವರು ಒಂದು ಕಡೆ ಹೇಳುತ್ತಾರೆ ಹೌದು ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಗಾಂಧಿ ಅವರಿಗೆ ರಾಜಕೀಯ ವ್ಯತ್ಯಾಸಗಳು ಇದ್ದವು, ಅವರ ಪಕ್ಷ ಬೇರೆ ಇತ್ತು ಹಾಗಾಗಿ ಸೋಲಿಸಿದ್ದು ಎಂದು ಹೇಳುತ್ತಾರೆ ಇದರಿಂದ ಗೊತ್ತಾಗುತ್ತೆ ಇವರು ಕೇವಲ ರಾಜಕೀಯ ಸಲುವಾಗಿ ಅಂಬೇಡ್ಕರ್ ರವರ ಹೆಸರು ಉಪಯೋಗಿಸುತ್ತಿದ್ದಾರೆ ವಿನಃ ನಿಜವಾಗಿಯೂ ಅಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಆನಂದ ಪಾಟೀಲ್ ಕೊರಳ್ಳಿ, ಶರಣಗೌಡ ಪಾಟೀಲ್ ಬೆಳಗುಂಪಿ, ನಾರಾಯಣ ಜಾಹಗೀರದಾರ್ ಯುವ ಮೋರ್ಚಾ ಮುಖಂಡರಾದ ಮಲ್ಲು ರಾಯಪ್ಪಗೌಡ, ನಿಜಗುಣಗೌಡ ಯಲಗೋಡ, ಶಿವರಾಜ್ ಮೂಲಗೆ, ಡಾ. ಅಭಿಲಾಶ್ ಅವರಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


