ಕಲಬುರಗಿ| ಚಾಂದ್ ಬೀಬೀ ಮಹಿಳಾ ಕಾಲೇಜಿನಲ್ಲಿ “ಭಾರತೀಯ ಸಂವಿಧಾನ ದಿನ” ಆಚರಣೆ

Date:

Share post:

ಕಲಬುರಗಿ: ನಗರದ ಚಾಂದ್ ಬೀಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ” ಭಾರತೀಯ ಸಂವಿಧಾನ ದಿನ” ವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ.ರುಕ್ಷಿಂದಾ ಹೀನಾ ಅಕ್ಬರಿ ಅವರು ಭಾರತರತ್ನ, ಸಂವಿಧಾನ ನಿರ್ಮಾತೃ ಡಾ. ಬಿ. ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಶರಬಯ್ಯ ಸ್ವಾಮಿ ಮಾತನಾಡಿ, “ಭಾರತೀಯ ಸಂವಿಧಾನ ದಿನ” ವನ್ನು ಪ್ರತಿವರ್ಷ ನವೆಂಬರ್ 26ರಂದು ಆಚರಿಸಲಾಗುತ್ತದೆ. ಈ ದಿನ 1949 ರಂದು ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸ್ಮರಣಾರ್ಥವಾಗಿದೆ. ನಮ್ಮ ಸಂವಿಧಾನವು ದೇಶದ ಪ್ರಜಾಪ್ರಭುತ್ವದ ಮೂಲಭೂತ ಆಧಾರವಾಗಿ, ಪ್ರತಿಯೊಬ್ಬ ನಾಗರಿಕನಿಗೂ ಹಕ್ಕುಗಳು, ಕರ್ತವ್ಯಗಳು, ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಒದಗಿಸುತ್ತದೆ. ಸಂವಿಧಾನದ ಮುಖ್ಯ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಅಪಾರ ಕೊಡುಗೆಯನ್ನು ಗೌರವಿಸುವ ದಿನವೂ ಇದಾಗಿದೆ ಎಂದರು.

2015 ರಲ್ಲಿ ಭಾರತ ಸರ್ಕಾರವು ನವೆಂಬರ್ 26 ಅನ್ನು ಅಧಿಕೃತವಾಗಿ “ಸಂವಿಧಾನ ದಿನ” ವೆಂದು ಘೋಷಿಸಿತು.ನಾವೆಲ್ಲರೂ ಈ ದಿನ ಸಂವಿಧಾನದ ಮೌಲ್ಯಗಳನ್ನು ಅರಿತು, ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಜವಾಬ್ದಾರಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಸಂವಿಧಾನವು ನಮಗೆ ಪ್ರೇರೇಪಣೆ ನೀಡುತ್ತದೆ ಎಂದು ಹೇಳಿದರು.

 

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಮಲ್ಲಿಕಾರ್ಜುನ್ ಡೊನ್ನೂರ್ ಅವರು ಸಂವಿಧಾನದ ಪೀಠಿಕೆಯನ್ನು ಗಟ್ಟಿಯಾಗಿ ಓದಿ ವಿದ್ಯಾರ್ಥಿಗಳಿಗೂ ಓದಿಸಿದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಗೌರವಪೂರ್ಣವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಡಾ. ಸಮೀನಾ ತಹಸೀನ್ ಮಾಡಿದರು. ಸ್ವಾಗತವನ್ನು ಉಪನ್ಯಾಸಕರಾದ ಡಾ. ಉಮಾ ಕಾಂತ ಗೌಡ ನೆರವೇರಿಸಿದರು. ಕಾಲೇಜಿನ ವಿದ್ಯಾರ್ಥಿನಿಯಾದ ಸುಮಾ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು. ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

Share post:

spot_imgspot_img

Popular

More like this
Related

ಕಲಬುರಗಿ| ಕಲಾ ವಿಭಾಗದಲ್ಲಿ ಸೃಷ್ಟಿ ಮಲ್ಲಿನಾಥ ರಾಜ್ಯಕ್ಕೆ ಪ್ರಥಮ

ಕಲಬುರಗಿ: ಪ್ರಸಕ್ತ ದ್ವಿತೀಯ ಪಿ.ಯು.ಸಿ-1 ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕಲಬುರಗಿಯ...

ಕಲಬುರಗಿ| ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಬಗೆಯ ಸುಮಾರು 62 ಲಕ್ಷ ರೂ. ಮೊತ್ತದ ಸಾಧನ ಸಲಕರಣೆಗಳ ವಿತರಣೆ

ಕಲಬುರಗಿ: ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (HUDCO) ಸಂಸ್ಥೆಯ...

ಕಲಬುರಗಿ| ಲಾರಿ – ಬೈಕ್ ಢಿಕ್ಕಿ; ಬೈಕ್ ಸವಾರ ಮೃತ್ಯು; ಇನ್ನೋರ್ವ ಗಂಭೀರ ಗಾಯ

ಕಲಬುರಗಿ: ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್...

ಕಲಬುರಗಿ| ರಾಮನವಮಿ ಆಚರಣೆ; ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶ

ಕಲಬುರಗಿ: ರಾಮ ನವಮಿ ಆಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ...