ಕಲಬುರಗಿ| ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ

Date:

Share post:

ಕಲಬುರಗಿ: ವಿದ್ಯಾರ್ಥಿಗಳುಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಕರೆ ಕೊಟ್ಟರು.

ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಪಿ. ಜಿ. ಬಿಲ್ಡಿಂಗ್ ಸಭಾಂಗಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ), (ನ್ಯಾಕ್ ನಿಂದ ಬಿ+ ಶ್ರೇಣಿ ಮರು ಮಾನ್ಯತೆ ಪಡೆದಿದ್ದು, 2025-26 ನೇಯ ಶೈಕ್ಷಣಿಕ ಸಾಲಿನ ವಿವಿಧ ಘಟಕಗಳಾದ ಸಾಂಸ್ಕøತಿಕ, ಕ್ರೀಡಾ, ಎನ್.ಎಸ್.ಎಸ್., ಎನ್. ಸಿ. ಸಿ., ರೆಡ್ ಕ್ರಾಸ್, ರೆಡ್ ರಿಬ್ಬನ್, ಸೌಟ್ಸ್ ಮತ್ತು ಗೈಡ್ಸ್, ಡಾ. ಬಿ. ಆರ್. ಅಂಬೇಡ್ಕರ ವೇದಿಕೆ, ಕಾರ್ಯಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಒಂದು ಸಮಯದಲ್ಲಿಹೆಣ್ಣು ಮಕ್ಕಳೆಂದರೆ ಕೇವಲ ಅಡುಗೆ ಮನೆಗೆ ಸೀಮಿತವನ್ನಾಗಿ ಮಾಡಲಾಗಿತ್ತು ಆದರೆ ಸ್ವಾತಂತ್ರ್ಯ ನಂತರ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದರು. ಹಾಗಾಗಿ ಇಂದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಲು ಸಂವಿಧಾನದತ್ತವಾಗಿ ನಮಗೆ ಅವಕಾಶಗಳು ದೊರೆತಿವೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪೆÇ್ರ ಶಿವಶರಣ ಗೊಳ್ಳೆ,ಮಹಾನಗರ ಪಾಲಿಕೆಯ ವಲಯ ಒಂದರ ಆಯುಕ್ತ ಗೌತಮ್ ಕಾಂಬಳೆ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಡಾ. ಬಲ ಭೀಮ ಸಾಂಗ್ಲಿಯವರು ನಿರ್ವಹಿಸಿದರು.

ಡಾ.ಟಿ.ವ್ಹಿ ಅಡಿವೇಶ, ಡಾ. ಮಲ್ಲೇಶಪ್ಪ ಎಸ್.ಕುಂಬಾರ, ಡಾ.ವಿಜಯಕುಮಾರ ಸಾಲಿಮನಿ, ಡಾ.ರಾಜಕುಮಾರ ಸಲಗರ, ಡಾ. ದೌಲಪ್ಪ ಬಿ.ಹೆಚ್, ಡಾ.ರಾಜಶೇಖರ ಮಡಿವಾಳ, ಅಜಯಸಿಂಗ್ ತಿವಾರಿ,ಡಾ.ಶ್ರೀಮಂತ ಹೋಳಕರ, ವಿಜಯಲಕ್ಷ್ಮೀ, ಶಿವಾನಂದ ಸ್ವಾಮಿ ಸೇರಿದಂತೆ ಎಲ್ಲಾ ಘಟಕಗಳ ಸಂಯೋಜಕರು, ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿಗಳು ಇದ್ದರು. ಡಾ.ರವೀಂದ್ರಕುಮಾರ ಭಂಡಾರಿ ಅವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಾ. ಬಸಂತ ಸಾಗರ ಅವರ ವಂದನಾರ್ಪಣೆ ಮಾಡಿದರು.

Share post:

spot_imgspot_img

Popular

More like this
Related

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...

ಕಲಬುರಗಿ: 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಗಣೇಶ್ ಬೋಸ್ಲೆ ಫಸ್ಟ್ ರ್ಯಾಂಕ್

ಕಲಬುರಗಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿ ತಾಲೂಕಿನ...

ಕಲಬುರಗಿ: ಗುಂಡಿನ ದಾಳಿ; ವ್ಯಕ್ತಿಯ ಭೀಕರ ಕೊಲೆ

ಕಲಬುರಗಿ: ಬಲರಾಮ ಚೌಕ್ ನಿಂದ ವಾಡಿ ಪಟ್ಟಣಕ್ಕೆ ಸ್ಕೂಟಿ ಮೇಲೆ ಹೋಗುತ್ತಿದ್ದ...

ಕಲಬುರಗಿ| ಏ.15 ರಿಂದ 17ರ ವರೆಗೆ ಹೀಟ್ ವೇವ್ ಆರೆಂಜ್ ಅಲರ್ಟ್: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ 

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಇದೇ ಏಪ್ರೀಲ್ 15 ರಿಂದ 17ರ ವರೆಗೆ...