ಕಲಬುರಗಿ| ನಮ್ಮ ಕರ್ನಾಟಕ ಸೇನೆಯ ಕಚೇರಿ ಉದ್ಘಾಟನೆ

Date:

Share post:

ಕಲಬುರಗಿ: ನಗರದ ಐವಾನ್-ಏ-ಶಾಹಿನಲ್ಲಿರುವ ವಿಜ್ಜು ವುಮೇನ್ಸ್ ಕಾಲೇಜು ಹತ್ತಿರ ಜಾಜಿ ಕಾಂಪ್ಲೇಕ್ಸ್ನಲ್ಲಿ ನೂತನವಾಗಿ ಆರಂಭಗೊಳ್ಳಲಿರುವನಮ್ಮ ಕರ್ನಾಟಕ ಸೇನೆಯ ಕಚೇರಿಯನ್ನು ಮಾಜಿ ಮೇಯರ್ ವಿಶಾಲ ದರ್ಗಿ ಉದ್ಘಾಟಿಸಿದರು.

ಜಿಲ್ಲೆಯ ಜಿಲ್ಲಾಧ್ಯಕ್ಷ ಸುಧೀಂದ್ರ ಎಂ.ಈಜೇರಿ ಮಾತನಾಡಿ, ನಮ್ಮ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಬಸವರಾಜ್ ಎಂ ಪಡಕೋಟೆ ಅವರ ಆದೇಶದಂತೆ ಅವರು ನಡೆದ ಬಂದ ಹಾದಿಯನ್ನು ಅನುಸರಿಸುತ್ತ ನಮ್ಮಸಂಘಟನೆಯ ಸಿದ್ಧಾಂತಗಳು ಕಾರ್ಯ ಚಟುವಟಿಕೆಗಳು ಹೋರಾಟದ ಚಾಕಚ್ಯತೆಯ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡು ಮಾತನಾಡಿದ ಅವರು ತಾಯಿ ಕನ್ನಡಾಂಬೆಯ ನಾಡು,ನುಡಿಗಾಗಿ’ ನಮ್ಮಉಸಿರಿರುವರೆಗೂ ಪ್ರಯತ್ನ ಬಿಡುವುದು ಬೇಡ ಎಂಬ ಗಟ್ಟಿ ನಿರ್ಧಾರದ ಮಾತನಾಡಿದರು.

ಮುಂಬರುವ ದಿನಮಾನಗಳಲ್ಲಿ ಕಲಬುರ್ಗಿ ಜಿಲ್ಲೆಯ ಸಮಸ್ತ ಅಭಿವೃದ್ಧಿಗೆ ನಾವೆಲ್ಲ ಒಗ್ಗಟ್ಟಿನ ಭಲ ತೋರಿಸೋಣ ಜೊತೆಗೆ ನಗರ ಘಟಕ ಅಧ್ಯಕ್ಷರು ಒಳಗೊಂಡು ಸಂಪೂರ್ಣ ಜಿಲ್ಲಾ ಹಾಗೂ ತಾಲೂಕು ಕುಟುಂಬದ ಸದಸ್ಯರೊಂದಿಗೆ ಬದಲಾವಣೆಯ ಭವಿಷ್ಯ ಕಂಡುಕೊಳ್ಳೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಬಿಜೆಪಿ ಮುಖಂಡ ರಾಜು ಆರ್ ವಾಡೆಕರ್, ಡಾ. ಫಾರೂಕ್ ಮಣೂರ, ಮಾದಿಗ ಸಮಾಜದ ಹಿರಿಯ ಮುಖಂಡ ದಶರಥ ಕಲಗುರ್ತಿ, ನಗರ ಘಟಕ ಅಧ್ಯಕ್ಷ ಸುರೇಶ್ ಜಿ ಹೊಸಮನಿ ಹಾಗೂನಗರ ಯುವ ಘಟಕ ಅಧ್ಯಕ್ಷ ಸಾಗರ್ ಡಿ ಅಭಿಷಾಳ ಸೇರಿದಂತೆ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳ ಪರಾರಿ; ತೀವ್ರ ಶೋಧ ಆರಂಭ

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಿಂದ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ...

ಕಲಬುರಗಿ| ಎಸ್ಐಆರ್: ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ: ವಿ.ಅನ್ಬುಕುಮಾರ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿ.ಎಲ್.ಓ.ಗಳು ತಮ್ಮ ಬಳಿ...

ಕಲಬುರಗಿಗೆ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಮುಗಿಸಿ: ಸಚಿವ ಯತೀಂದ್ರ ಸಿದ್ಧರಾಮಯ್ಯ ವಾರ್ನಿಂಗ್

ಕಲಬುರಗಿ: ಕಲಬುರಗಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ 24x7 ಯೋಜನೆಯ...

Kalaburagi| ಊಟ ಸೇವನೆಯಿಂದ ಮಕ್ಕಳ ಅಸ್ವಸ್ಥ ಪ್ರಕರಣ: ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತ್ತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ...