ಕಲಬುರಗಿ| ಗುಲಬರ್ಗಾ ವಿವಿಯಲ್ಲಿ ಶ್ರೀ ಕನಕದಾಸರ 538ನೇ ಜಯಂತ್ಯೋತ್ಸವ

Date:

Share post:

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತ್ಯೋತ್ಸವ ಕಾರ್ಯಕ್ರಮ ಶನಿವಾರ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಚಂದ್ರಕಲಾ ಬಿದರಿ ಮಾತನಾಡಿ, ಅನೇಕ ದಾರ್ಶನಿಕರ ಜಯಂತಿಗಳು ಮಾಡುವ ಉದ್ದೇಶವೆಂದರೇ ಕನಕದಾಸರು ಎಲ್ಲಿಯೂ ತಾವು ದೊಡ್ಡವರೆಂದು ಹೇಳಿಕೊಳ್ಳಲಿಲ್ಲ, ತಮ್ಮನ್ನು ತಾವು ಚಿಕ್ಕವರೆಂದು ಭಾವಿಸಿ ಅಗಾದವಾದ ವಿಚಾರಗಳು ಜಾತಿಪಂಥ, ಮೇಲೂ ಕೀಳೂ, ಸಿರಿಧ್ಯಾನ ಹಾಗೂ ಬಾಳೆಹಣ್ಣಿನ ಉದಾಹರಣೆ ನೀಡಿ ಮಾರ್ಮಿಕವಾಗಿ ಮಾತನಾಡಿದರು.

 

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಹಿಂದಿನ ದಾಸರು, ಶರಣರು, ಸಂತರು ತಮ್ಮ ಜೀವನದ ಕಹಿ ಅನುಭವಗಳನ್ನು ಮುಂದಿನ ಪೀಳಿಗೆಗೆ ಕೀರ್ತನ ಹಾಗೂ ಸಾಹಿತ್ಯದ ಮೂಲಕ ಬೆಳಕು ಚೆಲ್ಲಿದ್ದಾರೆ. ಕನಕದಾಸರು ಉಡುಪಿಯ ದೇವರ ಸನ್ನಿಧಿಗೆ ಹೋದಾಗ ಅವರಿಗೆ ಧನ ಕಾಯುವವರಿಗೆ ದೇವರ ಗುಡಿಯಲ್ಲಿ ಪ್ರವೇಶವಿಲ್ಲ ಎಂದು ಅರ್ಚಕರು ಎಂದಾಗ ಕನಕದಾಸರು ಒಳಗಿನ ದೇವರು ಕೂಡಾ ಧನ ಕಾಯುವನೆ ಎಂದು ಹೇಳಿದರು.

 

ದೇವರಿಲ್ಲ ಅನ್ನವವರಿಗೆ ದೇವರಿದ್ದಾನೆ ಎಂಬುವಂಥಾ ಸನ್ನಿವೇಶ ಉಡುಪಿಯ ಶ್ರೀಕೃಷ್ಣನು ಜನರಿಗೆ ಬೆನ್ನುಕೊಟ್ಟು ಕನಕನ ಭಕ್ತಿಗೆ ಮೆಚ್ಚಿ ದರ್ಶನಕೊಟ್ಟು ಭಕ್ತಿಯ ಶಕ್ತಿಯನ್ನು ತೋರಿದರು ಎಂದರು.

 

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ರಮೇಶ ಲಂಡನಕರ್, ವಿದ್ಯಾವಿಷಯಕ ಪರಿಷತ್ ಸದಸ್ಯರಾದ ಪ್ರೊ. ಜಿ.ಎಂ. ವಿದ್ಯಾಸಾಗರ, ಕುಲಸಚಿವರು (ಮೌಲ್ಯಮಾಪನ) ಡಾ. ಎನ್. ಜಿ. ಕಣ್ಣೂರ, ವಿತ್ತಾಧಿಕಾರಿಗಳಾದ ಶ್ರೀಮತಿ ಜಯಾಂಬಿಕ, ಕನಕದಾಸ ಜಯಂತ್ಯೋತ್ಸವದ ಸಂಚಾಲಕರಾದ ರಿಷಿಕುಮಾರ ಎಂ. ಹೊರಕೇರಿ, ವಿವಿಧ ವಿಭಾಗದ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗೀತ ವಿಭಾಗದಿಂದ ದಾಸರ ಕೀರ್ತನೆಯನ್ನು ಹಾಡಿದರು, ಕಾರ್ಯಕ್ರಮದ ನಿರೂಪಣೆ ಡಾ. ಚಂದ್ರಕಾಂತ ಬಿರಾದಾರ, ವಂದನಾರ್ಪಣೆಯನ್ನು ಸೂರ್ಯಕಾಂತ ಅಮರೆ ನಿರೂಪಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...