ಕಲಬುರಗಿ| ಪಾಲಿಕೆ ಮೇಯರ್ ಆಗಿ ವರ್ಷಾ ಜಾನೆ, ಉಪ ಮೇಯರ್ ಆಗಿ ತೃಪ್ತಿ ಎಸ್.ಅಲ್ಲದ ಅಧಿಕಾರ ಸ್ವೀಕಾರ

Date:

Share post:

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮಹಾಪೌರರಾಗಿ ಆಯ್ಕೆಯಾಗಿದ್ದ ವರ್ಷಾ ರಾಜೀವ ಜಾನೆ ಮತ್ತು ಉಪ ಮಹಾಪೌರಾಗಿ ಆಯ್ಕೆಯಾಗಿದ್ದ ತೃಪ್ತಿ ಎಸ್. ಅಲ್ಲದ (ಲಾಖೆ) ಅವರು ಸೋಮವಾರ ಪಾಲಿಕೆಯ ತಮ್ಮ‌ ಕೊಠಡಿಯಲ್ಲಿ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಮೇಯರ್, ಉಪ ಮೇಯರ್ ಅವರು ಜಿಲ್ಲಾ ಉಸ್ತುವಾರಿ ಸಚಿವ‌ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿ ಸ್ಮಾರ್ಟ್ ಸಿಟಿ ಮಾಡುವ ಕನಸು ನನಸು ಮಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಲಾಗುವುದು. ಕಲಬುರಗಿ ಉತ್ತರ ಮತ್ತು ದಕ್ಷಿಣದ ಶಾಸಕರು-ಸಚಿವರ ಜೊತೆಗೂಡಿ ನಗರವನ್ನು ಸ್ವಚ್ಛ ಕಲಬುರಗಿ ಮಾಡುವುದಾಗಿ ತಿಳಿಸಿದ ಅವರು, ಪಾಲಿಕೆಯ ಪ್ರತಿಯೊಂದು ಕಾರ್ಯಕ್ಕೆ ಮಹಾಜನತೆ ಸಹಕಾರ ನೀಡಬೇಕೆಂದರು.

ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕ‌ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಪಾಲಿಕೆಯ ಸದಸ್ಯರು, ಅಧಿಕಾರಿ-ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...