ಕಲಬುರಗಿ| ಸ್ವಾತಂತ್ರ್ಯದ ಹಿಂದೆ ತ್ಯಾಗ ಬಲಿದಾನವಿದೆ: ಮಾಜಿ ಶಾಸಕ ಸುಭಾಷ್ ಗುತ್ತೇದಾರ

Date:

Share post:

ಕಲಬುರಗಿ: ಹಲವಾರು ಜನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಸಂಕೇತವೇ ಸ್ವಾತಂತ್ರ್ಯ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅಭಿಪ್ರಾಯಪಟ್ಟರು.

ಶುಕ್ರವಾರ ಆಳಂದ ಪಟ್ಟಣದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‌ಆರ್‌ಜಿ ಫೌಂಡೇಶನ್‌ನ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಶಾಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರö್ಯ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

ಭಾರತದ ಸ್ವಾತಂತ್ರ‍್ಯಕ್ಕೆ 1857 ರಿಂದ 1947 ರವರೆಗೆ ಹಲವು ದಶಕಗಳ ಕಾಲ ನಮ್ಮ ಪೂರ್ವಜರು ಹೋರಾಡಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಸ್ವಾತಂತ್ರ‍್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಗೆ ಈ ಭಾರತದಲ್ಲಿ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿಯ ಸ್ವಾತಂತ್ರ‍್ಯ ಇದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಾತಂತ್ರ‍್ಯ ಹಕ್ಕಿನಿಂದ ಮತ್ತೊಬ್ಬರ ಸ್ವಾತಂತ್ರ‍್ಯಕ್ಕೆ ಅಡ್ಡಿ ಆಗುವ ಯಾವುದೇ ಕೆಲಸವನ್ನು ಮಾಡಬಾರದು ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಈ ಮಾತನ್ನು ಪೋಷಕರು, ಶಿಕ್ಷಕರು ಎಲ್ಲ ಮಕ್ಕಳಿಗೆ ಹೇಳಿಕೊಟ್ಟು, ಅರ್ಥ ಮಾಡಿಸಬೇಕು. ಹೆಚ್ಚಿನ ನೈತಿಕ ಶಿಕ್ಷಣವನ್ನು ನೀಡಲೇಬೇಕು ಎಂದು ಕರೆ ನೀಡಿದರು.

ಬ್ರಿಟಿಷರಿಂದ ಸ್ವಾತಂತ್ರ‍್ಯಗೊoಡ ನಂತರ ಭಾರತ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲು ಸಹ ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ‍್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ‍್ಯ ಇರುತ್ತದೋ, ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ‍್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ‍್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ. ಅದಕ್ಕೆ ಇಂದಿನ ಭಾರತವೇ ಸಾಕ್ಷಿ ಎಂದು ಹೇಳಿದರು.

ಮುಖ್ಯ ಅತಿಥಿ ಬಾಬುರಾವ ಸರಡಗಿ ಮಾತನಾಡಿ, ಸ್ವಾತಂತ್ರ‍್ಯ ಭಾರತದಲ್ಲಿ ಇಂದಿಗೂ ಸಹ ಹಲವು ಕಡೆಗಳಲ್ಲಿ ನಾವು ಅಸಮಾನತೆ, ದೌರ್ಜನ್ಯ, ಮಹಿಳೆಯರ ಮೇಲಿನ ಎಲ್ಲ ತರಹದ ಕಿರುಕುಳಗಳು, ಆಸಿಡ್ ದಾಳಿ, ಸರ್ಕಾರಗಳ ಮೇಲಿನ ಭ್ರಷ್ಟಾಚಾರಗಳು, ಜನರಿಂದ ಆಯ್ಕೆಯಾದ ನಾಯಕರುಗಳೇ ಎದುರಿಸುತ್ತಿರುವ ಅಪಾಧನೆಗಳು, ಅವರ ಅಪರಾಧಗಳು, ರಾಜಕೀಯ ಪಕ್ಷಗಳ ಒಬ್ಬರ ಮೇಲ್ಲೋಬ್ಬರ ಮಾತಿನ ಕೆಸರೆರಚಾಟಗಳು ಎಲ್ಲವನ್ನು ನೋಡಿದರೆ ನಮಗೆ ಸಹಿಲಾಗದ ದುಃಖವಾಗುತ್ತದೆ. ಇದಕ್ಕೆ ಕೊನೆ ಎಂದು, ದೇಶ ಶಾಂತಿಯಿoದ ಇರುವುದೆಂದು, ಐಕ್ಯತೆ ಸಾರುವುದು ಎಂದು ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ ಎಂದರು.

ಇಂದಿನ ಪ್ರಜೆಗಳಾದ ನಾವು ಮುಂದೆ ದೊಡ್ಡವರಾದ ನಂತರ ನಾವೆಲ್ಲರೂ ಸಹ ಒಂದೊoದು ಕ್ಷೇತ್ರದಲ್ಲಿ ಯಾರು ಏನಾದರೂ ಸಾಧಿಸುವ ಅವಕಾಶ ನಮಗಿದೆ. ಅಂದು ದೇಶಕ್ಕೆ ಸ್ವಾತಂತ್ರ ತಂದುಕೊಡಲು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ತಿಲಕ್ ರವರು, ಶಾಸ್ತ್ರೀಜಿ ಹೀಗೆ ಅನೇಕರು ಹೋರಾಟ ಮಾಡಿದರು. ತಮ್ಮ ಜೀವನವನ್ನು ದೇಶದ ಜನರ ಸಂತೋಷಕ್ಕಾಗಿ ಮೀಸಲಿಟ್ಟರು. ಹಾಗೆಯೇ ಇಂದು ನಮ್ಮ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಲು ನಾವು ಜ್ಞಾನವನ್ನು ಹೆಚ್ಚಿಸಿಕೊಂಡು ಕೆಲಸ ಮಾಡಬೇಕಿದೆ. ದೇಶ ಸೇವೆಗೆ ಮುಂದಾಗಬೇಕಿದೆ. ಅದು ಯಾವ ಕ್ಷೇತ್ರದಲ್ಲಾದರೂ ಸರಿಯೇ. ಉತ್ತಮ ಕೆಲಸ, ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ಬೆಳೆಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆ, ಎಂಎಆರ್‌ಜಿ ಪಿಯು ಕಾಲೇಜು, ವಿಕೆಜಿ ಪದವಿ ಕಾಲೇಜು, ಪಿಎಸ್‌ಆರ್‌ಎಂಎಸ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯ ಮೇಲೆ ಪ್ರಾಚಾರ್ಯರಾದ ಡಾ. ಅಶೋಕರೆಡ್ಡಿ, ಕಲ್ಯಾಣಿ ಸಾವಳಗಿ, ಡಾ. ಅಪ್ಪಾಸಾಬ್ ಬಿರಾದಾರ, ಜ್ಯೋತಿ ವಿಶಾಖ್, ಬಾಬುರಾವ ಸರಡಗಿ, ಶಶಿಕಾಂತ ಪಾಟೀಲ ಇದ್ದರು.

ಅಮೃತ ಕೋಳಿ ಸ್ವಾಗತಿಸಿದರೆ, ಚಂದ್ರಕಲಾ ನಿರೂಪಿಸಿದರು. ಪ್ರೀತಿ ಉದ್ದನಶೆಟ್ಟಿ ವಂದಿಸಿದರು.

 

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....