ಕಲಬುರಗಿ: ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ ಆಯೋಗವು ನೀಡಿರುವ ವರದಿಯನ್ನು ತಡೆ ಹಿಡಿದು ತಕ್ಷಣವೆ ಉಪಸಮಿತಿ ನೇಮಿಸುವ ಮೂಲಕ ಸ್ಪಷ್ಟ ಮತ್ತು ನ್ಯಾಯ ಸಮ್ಮತವಾದ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಿ ಸಮಸ್ತ ಪರಿಶಿಷ್ಟಜಾತಿ ಬಲಗೈ ಸಮುದಾಯಕ್ಕೆ ನ್ಯಾಯ ವದಗಿಸಬೇಕು. ಇಲ್ಲವಾದಲ್ಲಿ ರಾಜ್ಯ ವ್ಯಾಪ್ತಿಯಾಗಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜೇವರ್ಗಿ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆಯನ್ನ ನೀಡಿತು.
ಜೇವರ್ಗಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆಯ ಮುಖಾಂತರ ಆಗಮಿಸಿ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಸ್ಟೀಸ್ ಹೆಚ್.ಎನ್ ನಾಗಮೋಹನದಾಸ ರವರು ಕರ್ನಾಟಕ ಸರ್ಕಾರಕ್ಕೆ ಪರಿಶಿಷ್ಟಜಾತಿಗಳ ಒಳ ಮೀಸಲಾತಿಯ ವರದಿಯನ್ನು ಸಲ್ಲಿಸಿದ್ದು. ಕನ್ನಡ ದಿನ ಪತ್ರಿಕೆಗಳಲ್ಲಿ ವರದಿಯಾದಂತೆ ಪರಿಶಿಷ್ಟಜಾತಿಯ ಬಲಗೈ ಸಮುದಾಯಕ್ಕೆ ನೀಡಿದ ಅಂಕಿ ಅಂಶಗಳು ಈ ರಿತಿಯಾಗಿವೆ. ಹೊಲೆಯ (3.20.641)+ ಛಲವಾದಿ (24,72,103)+ ಆದಿದ್ರಾವಿಡ (3,76,448)+ ಆದಿಕರ್ನಾಟಕ (1.47.199)+ ಪರೈಯನ್ + ಪರಯ (1.61.164) ಎಲ್ಲಾ ಜಾತಿಗಳು ಒಂದೇ ಆಗಿದ್ದು ಆದಿಕರ್ನಾಟಕ, ಆದಿದ್ರಾವಿಡ, ಆದಿಆಂದ್ರಾ, ಪರೈಯನ್+ಪರಯ ಈ ಜಾತಿಗಳಲ್ಲಿನ ಜನರು ಯಾವ ಒಳ ಜಾತಿಗೆ ಸೇರಿದವರೇಂದು ಪತ್ತೆ ಹಚ್ಚುವಲ್ಲಿ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ ಅವರ ಆಯೋಗವು ವಿಫಲವಾಗಿರುತ್ತದೆ.
ಅತಿ ಹೆಚ್ಚಿನ ಸಂಖ್ಯೆ ಪರಶಿಷ್ಟಜಾತಿ ಬಲಗೈ ಸಮುದಾಯ ರಾಜ್ಯದಲ್ಲಿದ್ದು ಬಲಗೈ ಸಮುದಾಯವನ್ನು ತುಳಿಯುವರೀತಿಯಲ್ಲಿ ವರದಿ ಸಲ್ಲಿಸಿದ್ದಾರೆ. ಅತೀ ಹೆಚ್ಚು ಜನಸಂಖ್ಯೆ ಇರುವ ಬಲಗೈ ಸಮುದಾಯಕ್ಕೆ ಈ ವರದಿಯಿಂದ ಅನ್ಯಾಯ ವಾಗುತ್ತಿದ್ದು ಈ ಅನ್ಯಾಯ ಸರಿಪಡಿಸಿ ಬಲಗೈ ಸಮುದಾಯಕ್ಕೆ ನ್ಯಾಯಯುತವಾಗಿ 8% ಮೀಸಲಾತಿ ಕಲ್ಪಿಸಬೇಕಾಗಿತ್ತು. ಆದರೆ ಹಾಗಾಗಿಲ್ಲ, ಇದೆ ತಿಂಗಳು ದಿನಾಂಕ 16 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸಮಗ್ರಹವಾಗಿ ಚರ್ಚಿಸಿ ಈ ಅನ್ಯಾಯವನ್ನು ಸರಿಪಡಿಸಿದರೆ ಮಾತ್ರ ಈ ವರದಿ ಜಾರಿಯಾಗಲಿ ಇಲ್ಲವೇ ಸರ್ಕಾರ ಈ ವರದಿಯನ್ನು ತಿರಸ್ಕರಿಸಲಿ. ಸಾಮಾಜಿಕವಾಗಿ ಹಿಂದುಳಿದ ಹೊಲೆಯ ಮತ್ತು ಮಾದಿಗರಿಗೆ ಅನುಕೂಲವಾಗುವ ರೀತಿಯಲ್ಲಿ ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿಯಾಗಬೇಕು.
ಚನ್ನಾಗಿ ಉಂಡವರು ಎಂಬ ಮಾನ್ಯ ಹೆಚ್. ಎನ್. ನಾಗಮೋಹನ ದಾಸ್ ರವರ ಹೇಳಿಕೆ ಒಂದು ಸಮುದಾಯವನ್ನು ಗುರಿಯಾಗಿಸಿ ಹೇಳಿದಂತಿದೆ, ಇದು ಖಂಡನಿಯವಾದದ್ದು. ಪರಿಶಿಷ್ಟ ಜಾತಿಯಲ್ಲಿನ ಒಳ ಜಾತಿಗಳ ಅಂಕಿ ಅಂಶಗಳು ಆಯಾ ಸಮುದಾಯದ ನಿರ್ದಿಷ್ಟವಾದ ಅಂಕಿ ಅಂಶಗಳನ್ನು ಪಡೆಯುವಲ್ಲಿ ವಿಫಲರಾದ ಮಾನ್ಯ ನ್ಯಾಯಮೂರ್ತಿಗಳು ಉಂಡವರು ಮತ್ತು ಹಸಿದವರು ಹೇಳಿಕೆ ತೀರಾ ಬಾಲಿಶವಾಗಿದೆ. ಕಳೆದ 75 ವರ್ಷಗಳಿಂದ ಇಂದಿಗೂ ಮೊದಲ ತಲೆಮಾರುಗಳು ಸಹ ಮೀಸಲಿನ ಫಲ ಪಡೆಯದ ಸಾವಿರಾರು ಹೊಲೆಯರ ಕುಂಟುಂಬಗಳಿವೆ. ಅವರನ್ನೇಲ್ಲ ತಿಂದವರು ಎಂದರೆ ಹೇಗೆ? ಶೋಷಿತ ಸಮುದಾಯಗಳಿಗೆ ಹಿರಿಯಣ್ಣನಂತ ಜವಾಬ್ದಾರಿಯನ್ನು ನಿಭಾಹಿಸುತ್ತಬಂದ ಸ್ವಾಭಿಮಾನಿ ಅಸ್ಪೃಶ್ಯಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಚನ್ನಾಗಿ ತಿಂದವರೆಂಬ ಪೂರ್ವಾಗ್ರಹದಿಂದ ನೀಡಿರುವ ಆಯೋಗದ ವರದಿಗೆ ನಮ್ಮ ತಿರಸ್ಕಾರವಿರುತ್ತದೆ. ಒಂದು ಜನಾಂಗದ ಜನಸಂಖ್ಯೆಯನ್ನು ತಗ್ಗಿಸಲು ಅಸಂಬದ್ಧವಾಗಿ ವರ್ಗಿಕರಿಸಿರುವ ಪ್ರಸಕ್ತ ಒಳ ಮೀಸಲು ವರದಿ ಕುರಿತು. ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ ಬಲಗೈ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಒಂದು ವೆಳೇ ಯಥಾವತ್ತಾಗಿ ಈ ವರದಿ ಜಾರಿಯಾದರೆ ಇಡೀ ರಾಜ್ಯಾದ್ಯಂತ ಉಗ್ರಸ್ವರೂಪದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜೇವರ್ಗಿ ಸರ್ಕಾರಕ್ಕೆ ಆಗ್ರಹಿಸುತ್ತದೆ.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ್ ಹರನಾಳ, ಶಾಂತಪ್ಪ ಕೂಡಲಗಿ, ಭೀಮರಾಯ ನಗನೂರ್, ಮಲ್ಲಣ್ಣ ಕೊಡಚಿ, ಮಹದೇವ ಕೊಳಕೂರ್, ದವಲಪ್ಪ ಮದನ್, ಶ್ರೀಹರಿ ಕರಕಳ್ಳಿ, ರವಿ ಕುಳಗೇರಿ, ಸಿದ್ದು ಕೆರೂರ್, ರಾಜಶೇಖರ ಶಿಲ್ಪಿ, ಮಾಪಣ್ಣ ಕಟ್ಟಿ, ವಿಶ್ವರಾಧ್ಯ ಗವ್ಹಾರ, ಮಹೇಶ್ ಕೋಕಿಲೆ, ರಾಯಪ್ಪ ಬಾರಿಗಿಡ, ಭಾಗಣ್ಣ ಸಿದ್ನಾಳ, ಭೀಮರಾಯ ಬಳಬಟ್ಟಿ, ಸಿದ್ದಪ್ಪ ಆಲೂರ್, ಭಾಗಣ್ಣ ಕೋಳಕೂರ್, ಬಾಬು ಹಿಪ್ಪರಗಿ, ಧರ್ಮಣ್ಣ ಮಾವನೂರ್, ದೇವೇಂದ್ರ ಮುದುವಾಳ, ಮರೆಯಪ್ಪ ಜನಿವಾರ, ಶ್ರೀಮಂತ ಕಿಲ್ಲೆದಾರ, ಶಿವಶರಣ ಮಂದೇವಾಲ್, ಹೈಯಾಳಪ್ಪ ಗಂಗಾಕರ್, ಯಶವಂತ ಬಡಿಗೇರ, ಕಿರಣ್ ದೊಡ್ಮನಿ, ಸಿದ್ದು ಜನಿವಾರ, ರವಿ ಬೀರನಹಳ್ಳಿ, ಶರಣಬಸಪ್ಪ ಲಕಣಪುರ್, ವಿಶ್ವರಾದ್ಯ ಗೋಪಾಲ್ಕರ್, ಘನಿ ರಾವಾಣ, ಸಾಗರ್ ಛತ್ರಿ ನೆಲೋಗಿ , ಮಿಲಿಂದ ಸಾಗರ, ಪ್ರಸನ್ ಸಿಂಗೆ ಸೇರಿದಂತೆ ಅನೇಕರಿದ್ದರು.