ಕಲಬುರಗಿ: ಅಫಜಲಪುರ ತಾಲ್ಲೂಕಿನ ಶ್ರೀಕ್ಷೇತ್ರ ಗಾಣಗಾಪುರದ ಯತಿರಾಜ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನ ಯತಿರಾಜ ಪ್ರೌಢಶಾಲೆಯ ಮಕ್ಕಳು 2025-26 ನೇ ಸಾಲಿನ ಅಫಜಲಪುರ ತಾಲ್ಲೂಕಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಯಲ್ಲಿ ವಿಜೇತರಾಗಿ ಸಾಧನೆಗೈದಿದ್ದಾರೆ.
ಅಫಜಲಪೂರದ ತಾಲೂಕ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಲಕರ ಮತ್ತು ಬಾಲಕಿಯರ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ, ಬಾಲಕರ 4×100ಮೀಟರ್ ರಿಲೆಯಲ್ಲಿ ಪ್ರಥಮ ಸ್ಥಾನ, ಬಾಲಕಿಯರು ದ್ವಿತೀಯ ಸ್ಥಾನ, ಬಾಲಕರ ವಾಲಿಬಾಲ್ ಆಟದಲ್ಲಿ ಪ್ರಥಮ, ಬಾಲಕಿಯರ ತ್ರೋ ಬಾಲ್ ಆಟದಲ್ಲಿ ಪ್ರಥಮ ಹಾಗೂ ವೈಯಕ್ತಿಕ ಕ್ರೀಡೆಯಲ್ಲಿ ಕುಮಾರಿ. ಅಕ್ಷತಾ ಸಿದ್ದಪ್ಪ 100, 200, 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಭೀಮರಾವ್ ಚೌಡಾಪುರಕರ, ಸಂಸ್ಥೆಯ ಅಧ್ಯಕ್ಷರಾದ ಚಂದ್ರ ವಿಲಾಸ್‌ಭಟ್ ಪೂಜಾರಿ, ಕಾರ್ಯದರ್ಶಿ ಋಷಿಕೇಶ್ ಚೌಡಾಪುರಕರ, ಗೋವಿಂದ್ ರಾವ್ ಚೌಡಾಪುರಕರ, ಪ್ರೌಢಶಾಲೆಯ ಮುಖ್ಯ ಗುರುಗಳಾದ ಮಹೇಬೂಬ ಕಣ್ಣಿ, ದೈಹಿಕ ಶಿಕ್ಷಕಿ ಸುಜಾತ ವಾಗ್ಮೊಡೆ, ರಾಜು ವಾಗ್ಮೊರೆ, ಶಿಕ್ಷಕ ಸಂತೋಷ್ ಶಂಡಗೆ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದರೆಂದು ವಿಕಾಸ್ ಜಿ.ಪಂಚಾಳವರು ತಿಳಿಸಿದ್ದಾರೆ.