ಕಲಬುರಗಿ: ಅಡತ್‌ನಲ್ಲಿ ಮಾಲೀಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎಪಿಎಂಸಿ ಗಂಜ್‌ನಲ್ಲಿರುವ ನಡೆದಿದೆ.
ಈರಣ್ಣ ಹವಾ (34) ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಅಡತ್ ಮಾಲೀಕರೆಂದು ಗುರುತಿಸಲಾಗಿದೆ.
ನಗರದ ಸುಲ್ತಾನಪುರದ ನಿವಾಸಿಯಾಗಿದ್ದ ಈರಣ್ಣ ಅವರು ಎಪಿಎಂಸಿಯಲ್ಲಿ ಅಡತ್ ಅಂಗಡಿ ಇಟ್ಟು ರೈತರ ಬೆಳೆದ ಬೆಳಗಳನ್ನು ಖರೀದಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದರು ಎನ್ನಲಾಗಿದೆ. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನಲೆ ಗುರುವಾರ ತಡರಾತ್ರಿ ಅಂಗಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.