ಕಲಬುರಗಿ| ಪಿಡಿಎ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ಎನ್ ಪಿ ಟಿ ಇ ಎಲ್ ನ ಪ್ರಶಸ್ತಿ

Date:

Share post:

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿಗೆ ಎನ್ ಪಿ ಟಿ ಇ ಎಲ್ ಮೂಲಕ ಆನ್ಲೈನ್ ಕಲಿಕೆಯಲ್ಲಿ ಅತ್ಯುತ್ತಮವಾಗಿ ಭಾಗವಹಿಸುತ್ತಿರುವುದಕ್ಕಾಗಿ ಎನ್ ಟಿ ಇ ಎಲ್ ಸಂಸ್ಥೆಯಿಂದ ಸ್ಪೇಷಲ್ ಆಕ್ಟೀವ್ ಆಸ್ಪಿರಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸ್ವಯಂ ಎನ್ ಪಿ ಟಿ ಇ ಎಲ್ ಜುಲೈ 5 ರಂದು ಚೆನ್ನೈ ನ ಐಐಟಿಯಲ್ಲಿ ನಡೆದ ಸ್ಪೋಕ್ ಕಾರ್ಯಾಗಾರದಲ್ಲಿ ಈ ಪ್ರಶಸ್ತಿ ನೀಡಲಾಯಿತು.

ಐಐಟಿ ಮತ್ತು ಐಐಎಸ್ಸಿ ಜಂಟಿ ಭಾಗವಾಗಿರುವ ಎನ್ ಪಿ ಟಿ ಎಲ್ ( ನ್ಯಾಷನಲ್ ಪ್ರೋಗ್ರಾಂ ಆನ್ ಟೆಕ್ನಾಲಜಿ ಎನ್ ಹಾನ್ಸ್ ಲರ್ನಿಂಗ್) ಭಾರತದಲ್ಲಿ ಆನ್ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ಮಾಡಿದೆ. ತನ್ನ ಶ್ರೇಷ್ಠ ಹಾಗೂ ಪ್ರಮಾಣಿಕೃತ ಕೋರ್ಸ್ಗಳ ಮೂಲಕ ಗಮನ ಸೆಳೆದಿದೆ. ಎನ್ ಪಿ ಟಿ ಎಲ್ ನ ಆನ್ಲೈನ್ ಶಿಕ್ಷಣ ನೀಡುತ್ತಿರುವ ಅಧ್ಯಾಪಕರು ದೇಶದ ಶ್ರೇಷ್ಠ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವರಾಗಿದ್ದು ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.

ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫ್ಯಾಕಲ್ಟಿ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (ಎಪ್ ಎಸ್ ಡಿ ಸಿ) ನಿರ್ದೇಶಕಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಮತ್ತು ಎನ್ ಪಿ ಟಿ ಎಲ್ ಗಾಗಿ ಸಿಂಗಲ್ ಪಾಯಿಂಟ್ ಆಫ್ ಕಾಂಟ್ಯಾಕ್ಟ್ (ಸ್ಪೋಕ) ಡಾ ಜಯಶ್ರೀ ಅಗರಖೇಡ ಸಂಸ್ಥೆಯ ಪರವಾಗಿ ಪ್ರಶಸ್ತಿ ಪಡೆದುಕೊಂಡರು. ಸ್ವಯಂ ಎನ್ ಪಿ ಟಿ ಎಲ್ ಲೋಕಲ್ ಚಾಪ್ಟರನ್ ಸ್ಪೋಕ್ ಆಗಿದೆ ಅವರು ನೀಡಿದ ಕೊಡುಗೆಗಾಗಿ ಅವರಿಗೆ ವೈಯಕ್ತಿಕವಾಗಿ ಪ್ರಮಾಣಪತ್ರ ನೀಡಲಾಯಿತು.

ಚೆನ್ನೈನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಎನ್ ಪಿ ಟಿ ಇ ಎಲ್ ನ ಸಂಯೋಜಕ ಮತ್ತು ಐಐಟಿ ಮದ್ರಾಸ್‌ನ ಎಲೆಕ್ಟಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಆಂದ್ರೂ ತಂಗರಾಜ್, ಐಐಟಿ ಮದ್ರಾಸ್‌ನ ಎನ್ ಪಿ ಟಿ ಎಲ್ ನ ಸಂಯೋಜಕ ಪ್ರೊ. ವಿಶ್ಲೇಶ್ ಮುತ್ತುವಿಜಯನ್ ಮತ್ತು ಕಾರ್ಯಾಚರಣೆ ಮುಖ್ಯಸ್ಥೆ ಶ್ರೀಮತಿ ಭಾರತಿ ಅವರು ಉಪಸ್ಥಿತರಿದ್ದರು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಅವರು ಡಿಜಿಟಲ್ ಕಲಿಕೆಯ ಹೆಚ್ಚುತ್ತಿರುವ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಆನ್‌ಲೈನ್ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಭಾಗವಹಿಸುವ ಸಂಸ್ಥೆಗಳ ಪ್ರಯತ್ನಗಳನ್ನು ಶ್ಲಾಘಿಸಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಎನ್ ಪಿ ಟಿ ಇ ಎಲ್ ಕೋರ್ಸ್ ಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ನೀಡುತ್ತಾ ನಿರಂತರವಾಗಿ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಬೆಳೆಸುತ್ತಿದ್ದಾರೆ. ಇಲ್ಲಿಯ ಅಧ್ಯಾಪಕರ ನಿರಂತರ ಸಹಕಾರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಕಾಲೇಜಿಗೆ ಈ ಪ್ರಶಸ್ತಿ ಲಭಿಸಲು ಕಾರಣವಾಗಿದೆ.

ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೋಂದು ವಿಶೇಷತೆಯೆಂದರೆ ಪಿಡಿಎ ಕಾಲೇಜಿನ ಮೂವರು ಅಧ್ಯಾಪಕರನ್ನು ಎನ್ ಪಿ ಟಿ ಇ ಎಲ್ ಸ್ಟಾರ್ ಅಧ್ಯಾಪಕರೆಂದು ಗುರುತಿಸಲಾಗಿದೆ.

ಈ ರೀತಿ ಗೌರವಕ್ಕೆ ಪಾತ್ರರಾದ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್ ಹಾಗೂ ಡಾ ಜಯಶ್ರೀ ಅಗರಖೇಡ ಅವರನ್ನು ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ

Share post:

spot_imgspot_img

Popular

More like this
Related

ಕಲಬುರಗಿ| ಜೇವರ್ಗಿ ಆಸ್ಪತ್ರೆಯ ಒಪಿಡಿ ಪುಸ್ತಕದಲ್ಲಿ ‘ಪೂಜಿಸಲೆಂದೇ ಹೂಗಳ ತಂದೆ’ ಗೀತೆ ಪ್ರತ್ಯಕ್ಷ

ಕಲಬುರಗಿ: ಆಸ್ಪತ್ರೆಯ ಹೊರ ರೋಗಿಗಳ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ...

ಕಲಬುರಗಿ| ರಾಷ್ಟ್ರೀಯ ಲೋಕ್ ಅದಾಲತ್‍ದಲ್ಲಿ 1,76,324 ಪ್ರಕರಣಗಳು ಇತ್ಯರ್ಥ

ಕಲಬುರಗಿ: ಗೌರವಾನ್ವಿತ ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ...

ಕಲಬುರಗಿ| ಬಾಲಕನ ಪೋಷಕರ ಪತ್ತೆಗೆ ಮನವಿ

ಕಲಬುರಗಿ: ಕಲಬುರಗಿ ಚೈಲ್ಡ್‍ಲೈನ್ ಸಂಸ್ಥೆ ಮೂಲಕ 8 ವರ್ಷದ ವಿಷ್ಣು ನಾಯಕ...

ಕಲಬುರಗಿ: ಜುಲೈ 15ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ...