ಕಲಬುರಗಿ | ಉದ್ಯಾನವನ ಅಭಿವೃದ್ಧಿಗೆ ಬದ್ಧ : ಶಾಸಕ ಅಲ್ಲಮಪ್ರಭು ಪಾಟೀಲ

Date:

Share post:

ಕಲಬುರಗಿ: ಉದ್ಯಾನವನಗಳ ಅಭಿವೃದ್ಧಿಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲು ಸಿದ್ಧ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಎನ್ಜಿಓ ಕಾಲೋನಿ ವಾರ್ಡ ಸಂಖ್ಯೆ 52 ರಲ್ಲಿ ಬರುವ ಶ್ರೀನಗರ ಉದ್ಯಾನವನದಲ್ಲಿ ಶುಕ್ರವಾರ ನಡೆದ ವನಮಹೋತ್ಸವ ಸರಳ ಕಾರ್ಯಕ್ರಮದಲ್ಲಿ ಸಸಿ ನೆಟ್ಟಿ ಬಡಾವಣೆ ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸಿದ ಅವರು, ಸುಂದರ ಉದ್ಯಾನವನ ನಿರ್ಮಾಣಕ್ಕಾಗಿ ಬೋರವೆಲ್ ಅಳವಡಿಕೆ, ಯೋಗಾಸನ ಮಾಡುವ ಸಾಧನಗಳು, ಮಕ್ಕಳ ಆಟಿಕೆಗಳು, ವಾಕಿಂಗ್ ಟ್ರ್ಯಾಕ್ ಸೇರಿದಂತೆ ಹೈಮಾಸ್ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

 

ಈಗಾಗಲೇ ಹೈಮಾಸ್ ಅಳವಡಿಕೆಯಾಗಿದ್ದು, ಅದಕ್ಕೆ ಬೇಕಾದ ಬೆಳಕಿನ ವ್ಯವಸ್ಥೆ ಇಷ್ಟರಲ್ಲಿಯೇ ಮಾಡಲಾಗುವುದು. ಬಡಾವಣೆ ನಿವಾಸಿಗಳು ನೆಮ್ಮದಿಯಿಂದ ಇರಲು ಶಾಸಕನಾಗಿ ಅಗತ್ಯ ಸೌಲಭ್ಯ ನೀಡಲು ಬದ್ಧನಾಗಿರುವೆ ಎಂದರು.

ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಹೇರೂರ, ಮುಖಂಡರಾದ ಶರಣಗೌಡ, ಮಲ್ಲೇಶಪ್ಪ ಜಾಂಬಗೌಡ, ಶಾಂತು ಪಾಟೀಲ, ಮಾರುತಿ ಪ್ರೇಸ್ಟಿಜ್ ಫ್ಯ್ಲಾಟ ಓನರ್ಸ ಅಸೋಸಿಯೇಶನ್ ಅಧ್ಯಕ್ಷ ರಮೇಶ್ಚಂದ್ರ ದೇಶಮುಖ, ಉಪಾಧ್ಯಕ್ಷರಾದ ದೀಪಕಕುಮಾರ, ದೇವಿದಾಸ ಅರ್ಥಂ, ಜಯತೀರ್ಥ ಪಾಟೀಲ, ಉಮೇಶ ಕುಲಕರ್ಣಿ, ಜಗನ್ನಾಥ ಉಟಗಿ, ರಾಜಶೇಖರ ಹಾವಪ್ಪಗೋಳ, ಸಂಪತ್ಕುಮಾರ ದೇಶಪಾಂಡೆ, ದೇವಿಂದ್ರಪ್ಪ ಗೋಗಿ ಮುಂತಾದವರಿದ್ದರು.

Share post:

spot_imgspot_img

Popular

More like this
Related

ಭೀಕರ ಅಪಘಾತ| ದಂಪತಿ ಸೇರಿ ನಾಲ್ವರು ಸಾವು; ಓರ್ವ ಗಂಭೀರ ಗಾಯ

ಕಲಬುರಗಿ/ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ...

ಕಲಬುರಗಿ| ಡಾ.ಫ.ಗು. ಹಳಕಟ್ಟಿ ಅವರಿಂದ ವಚನ ಸಾಹಿತ್ಯ ಮರು ಹುಟ್ಟು: ಡಾ. ಹೂವಿನಭಾವಿ

ಕಲಬುರಗಿ: ವಚನ ಸಂಶೋಧನಾ ಪಿತಾಮಹ ಡಾ. ಫ ಗು ಹಳಕಟ್ಟಿ ಅವರ...

ಕಲಬುರಗಿ| ಜುಲೈ 7 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ...

ಕಲಬುರಗಿ| ಜುಲೈ 8 ರಂದು ಮಿನಿ ಉದ್ಯೋಗ ಮೇಳ

ಕಲಬುರಗಿ: ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಜುಲೈ...