ಕಲಬುರಗಿ: ಗ್ರಾಮೀಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಶಿಕ್ಷಣ, ಕುಡಿಯುವ ನೀರು ನೈರ್ಮಲ್ಯ, ರೈತರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೋಳ್ಳಬೇಕು ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್ ಹೇಳಿದರು.
ಕಮಲಾಪೂರ ಪಟ್ಟಣದ ಮೈರಾಡ ಅವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ನಾನಾ ಸಮಸ್ಯೆಗಳ ಕುರಿತು ಚರ್ಚಿಸಿ ಮಾತನಾಡಿದರು.
ಗ್ರಾಮೀಣ ಮತಕ್ಷೇತ್ರದಲ್ಲಿ ಆಳಂದ ತಾಲೂಕಿನ ಎರಡು ಜಿಪಂ ಕ್ಷೇತ್ರಗಳು ನನ್ನ ವ್ಯಾಪ್ತಿಗೆ ಬರುತ್ತವೆ, ಆ ಗ್ರಾಮಗಳ ಅನುದಾನ ನಮ್ಮ ಜನರಿಗೆ ಅಧಿಕಾರಿಗಳು ವಂಚನೆ ಮಾಡದೇ ರೈತರಿಗೆ ಬೀಜ ರಸಗೊಬ್ಬರ, ತೋಟಗಾರಿಕೆಯಲ್ಲಿ ಸರಕಾರದ ಸೌಲಭ್ಯ ಸಮಾನವಾಗಿ ಹಂಚಬೇಕು, ಇದರಲ್ಲಿ ಯಾವುದೇ ತಾರತಮ್ಯ ಮಾಡಬಾದರು ಎಂದರು.
ಕಮಲಾಪುರ ಎಡಿ ಅರುಣಕುಮಾರ ಮೂಲಿಮನಿ ಮಾತನಾಡಿ, ಗ್ರಾಮೀಣ ಕ್ಷೇತ್ರದಲ್ಲಿ ಮೇ ತಿಂಗಳಲ್ಲಿ ನಿರೀಕ್ಷೆ ಮೀರಿ ಮಳೆಯಾಗಿದೆ, ಜೂನ್ ತಿಂಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ. ಇನ್ನು ಹೆಚ್ಚು ಮಳೆಯಾಗಬೇಕು. ಈ ಭಾಗದಲ್ಲಿ ರೈತರು ಮುಂಗಾರು ಶೇ.64ರಷ್ಟು ಬಿತ್ತನೆ ಮಾಡಿದ್ದಾರೆ. ಮಳೆ ಕಡಿಮೆಯಾಗಿದ್ದ ಕೆಲ ಹೊಬಳಿಯಲ್ಲಿ ಇನ್ನು ಬಿತ್ತನೆಯಾಗಬೇಕು. ಎಲ್ಲಾ ಬೀಜಗಳು ಸಾಕಷ್ಟಿವೆ. ಸೋಯಾಬಿನ್ ಕೊರತೆಯಾಗಿತ್ತು. ಮುಂದೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಮಲಾಪುರ ತಾ.ಪಂ ಇಒ ನೀಲಗಂಗಾ ಬಬಲಾದ,ಕಲಬುರಗಿ ತಾಪಂ ಇಒ ಸೈಯದ ಮಹ್ಮದ ಪಟೇಲ, ತಹಶೀಲ್ದಾರ್ ಮಹಮ್ಮದ ಮೊಸಿನ್, ಆಳಂದ ಇಒ ಮಾನಪ್ಪ ಕಟ್ಟಿಮನಿ, ಆಳಂದ ಅಣ್ಣಾರಾವ ಪಾಟೀಲ್, ಶಹಬಾರ ತಹಸೀಲ್ದಾರ್ ಜಗದೀಶ ಎಸ್. ಚೌರ್, ಶಹಾಬಾದ ಇಒ ಮಲ್ಲಿನಾಥ ರಾವೂರ ಸೇರಿ ಇತರರು ಇದ್ದರು.