ಕಲಬುರಗಿ | ಬಸ್ ನಿಲ್ದಾಣದಲ್ಲಿ ಶಿಶು ಆಹಾರ ಕೋಣೆ ಉದ್ಘಾಟನೆ

Date:

Share post:

ಕಲಬುರಗಿ: ನಗರದ ಸುಪರ್ ಮಾರ್ಕೆಟಿನ ಸಿಟಿ ಬಸ್ ನಿಲ್ದಾಣದ ಫ್ಲಾಟ ನಂ. 3 ರಲ್ಲಿ 10 ಎಕ್ಸ್ 10 ಅಡಿಯ ವಿಸ್ತೀರ್ಣದ ಶಿಶು ಆಹಾರ ಕೋಣೆಯನ್ನು ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ ಹಾಗೂ ಚಂದ್ರಕಾಂತ ಪಾಟೀಲ್ ಉದ್ಘಾಟಿಸಿದರು.

ರೋಟರಿ ಕ್ಲಬ್ ಗುಲಬರ್ಗಾ ಸನ್‍ಸಿಟಿ ಇವರ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೆಕೆಆರ್‍ಟಿಸಿ) ಈ ಕೋಣೆಯನ್ನು ಸ್ಥಾಪಿಸಿದರು. ಪ್ರಯಾಣ ಅವಧಿಯಲ್ಲಿ ಮಾತೆಯರು ತಮ್ಮ ಮಕ್ಕಳಿಗೆ ಎದೆಹಾಲುಣೆಸಲು ಆರಾಮದಾಯಕ, ಸ್ವಚ್ಛ ಹಾಗೂ ಖಾಸಗಿ ಸ್ಥಳಾವಕಾಶ ಒದಗಿಸುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಸಿಟಿ ಬಸ್ ಸ್ಟ್ಯಾಂಡದ ಫ್ಲಾಟ ನಂ. 3 ರಲ್ಲಿ 10 ಎಕ್ಸ್ 10 ಅಡಿಯ ವಿಸ್ತೀರ್ಣದ ಕೋಣೆಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಒಟ್ಟಿಗೆ 3 ಜನ ಕುಳಿತ ಮಕ್ಕಳಿಗೆ ಹಾಲುಣಿಸುವ ಸೌಲಭ್ಯ, ವಿದ್ಯುತ್, ಫ್ಯಾನನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ ಎಂದು ಗುಲಬರ್ಗಾ ಸನ್‍ಸಿಟಿ ಅಧ್ಯಕ್ಷ ವಿವೇಕ ರಾಮ ಪವಾರ ತಿಳಿಸಿದರು.

ಕೆಕೆಆರ್‍ಟಿಸಿ. ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ, ಸಂಚಾರಿ ವ್ಯವಸ್ಥಾಪಕರಾದ ಸಂತೋಷಕುಮಾರ ವಿ. ಎಚ್. ವಿಭಾಗೀಯ ನಿಯಂತ್ರಕರಾದ ಚಂದ್ರ ಕೆ. ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಆಯೋಜಕರಾದ ಮಂದಕನಳ್ಳಿ ಬ್ರೇನ್ ಮತ್ತು ಮೈಂಡ್ಸ್ ನ್ಯೂರೋ ಫಿಜಿಟರಿ ಕ್ರಿಟಿಕಲ್ ಕೇಯರ್ ಸೆಂಟರ್ ಇವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ಕಾರ್ಯದರ್ಶಿಯಾದ ಡಾ. ರಾಹುಲ ಮಂದಕನಳ್ಳಿ, ಡಾ. ರಾಗಿನಿ ಮಂದಕನಳ್ಳಿ, ಡಾ. ಕವಿರಾಜ ಮೊತಕಪಳ್ಳಿ, ಶಶಾಂಕ ಬಲದವಾ, ಸಿ.ಎ. ಮಲ್ಲಿಕಾರ್ಜುನ ಮಹಾಂತಗೊಳ, ಪ್ರತಿಕ ಸುತ್ರಾವೆ,ಜಗದೀಶ ಮಾಲು, ರಾಜೇಶ ಪವಾರ, ಮುಕೇಶ ಮಾಲು, ಅಮರೇಶ ಪಾಟೀಲ, ಅಭಿಜೀತ ಚಿಂದೆ, ಚಂದ್ರಶೇಖರ ಸುತ್ರಾವೆ, ವಿನಯ ಜವಳಕರ್ ಹಾಗೂ ಕೋ-ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....